Pavitra Gowda Astrology Prediction: ದರ್ಶನ್‌ನಿಂದಲೇ ಪವಿತ್ರಾ ಗೌಡಾಗೆ ಕಂಟಕ: ದಾಸನ ದಾಸಿಯ ಜ್ಯೋತಿಷ್ಯ ಭವಿಷ್ಯ ರೋಚಕ
ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಪ್ರೇಯಸಿ ಪವಿತ್ರಾ ಗೌಡ ಅವರನ್ನೂ ಬಂಧಿಸಲಾಗಿದೆ. ಮದುವೆಯಾಗಿ ಒಬ್ಬ ಮಗಳಿರುವ ಪವಿತ್ರಾ ಗೌಡ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿಯಾಗಿದ್ದಾರೆ.
ಕೆಲ ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿ ಯಶಸ್ಸು ಕಾಣದ ಪವಿತ್ರಾ ಗೌಡ ಅವರ ಹೆಸರು ನಟ ದರ್ಶನ್ ಅವರೊಂದಿಗೆ ತಳುಕು ಹಾಕಿಕೊಂಡಿದೆ. ಸದ್ಯ ಬಂಧಿಯಾಗಿರುವ ಪವಿತ್ರಾ ಗೌಡ ಅವರ ಜ್ಯೋತಿಷ್ಯ ಭವಿಷ್ಯ ಹೇಗಿದೆ?

ಸದಾ ವಿವಾದದ ಸುಳಿಯಲ್ಲಿ ಇರುವ ದರ್ಶನ್ ಅವರೊಂದಿಗೆ ಪವಿತ್ರಾ ಗೌಡ ಸುಖ ಜೀವನ ನಡೆಸಲು ಸಾಧ್ಯವಿಲ್ಲ. ಯಾಕೆಂದರೆ ಪವಿತ್ರಾ ಗೌಡ ಜಾತಕದಲ್ಲಿ ಎಲ್ಲವೂ ಸರಿಯಾಗಿದ್ದರೆ, ಗ್ರಹಗತಿಗಳು ಸರಿಯಿಲ್ಲದ ವ್ಯಕ್ತಿಯೊಂದಿಗಿನ ಸಂಬಂಧ ಅವರನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆ ಇದೆ.
ಸದ್ಯ ದರ್ಶನ್ ಅವರ ಜಾತಕ ಅಷ್ಟು ಸರಿಯಾಗಿಲ್ಲ. ಇದು ಪವಿತ್ರಾ ಗೌಡ ಅವರ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ. ಅಲ್ಲದೆ ಇದು ಅವರ ಸಿನಿ ಜರ್ನಿ ಮೇಲೂ ಪರಿಣಾಮ ಬೀರಲಿದೆ ಎಂದು ಖ್ಯಾತ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ.

ಮಾಡೆಲ್ ಕಮ್ ನಟಿ ಆಗಿರುವ ಪವಿತ್ರಾ ಗೌಡ ಅವರ ಹೆಸರು ಪದೇ ಪದೇ ನಟ ದರ್ಶನ್ ಜೊತೆಗೆ ಕೇಳಿ ಬರುತ್ತಿದೆ. ಪವಿತ್ರಾ ಗೌಡ ನಟ ದರ್ಶನ್ ಅವರ ಪ್ರೇಯಸಿ. ಅವರನ್ನು ದರ್ಶನ್ ಮದುವೆಯಾಗಿದ್ದಾರೆ ಎಂದೆಲ್ಲಾ ಮಾತುಗಳು ಕೇಳಿ ಬಂದಿವೆ.
ಹಾಗಾದರೆ ವಿವಾದಿತ ನಟ ದರ್ಶನ್ ಪ್ರೇಯಸಿ ಆಗಿರುವ ನಟಿ ಪವಿತ್ರಾ ಗೌಡ ಅವರು ಹೊರ ಬರುತ್ತಾರಾ? ಸಿನಿಮಾ ಮಾಡ್ತಾರಾ? ಯಶಸ್ಸು ಪಡೆಯುತ್ತಾರಾ? ಅವರ ಭವಿಷ್ಯ ಹೇಗಿರಲಿದೆ ಎಂದು ತಿಳಿಯೋಣ. ಅದಕ್ಕೂ ಮೊದಲು ಈ ಪವಿತ್ರ ಗೌಡ ಯಾರು?

ಪತ್ನಿ ಪ್ರೇಯಸಿ ನಡುವೆ ವಾರ್
ನಟ ದರ್ಶನ್ ಅವರು ಈಗಾಗಲೇ ವಿಜಯಲಕ್ಷ್ಮಿ ಅವರೊಂದಿಗೆ ಮದುವೆಯಾಗಿದ್ದು ಇವರಿಬ್ಬರಿಗೂ ಒಬ್ಬ ಮಗ ಕೂಡ ಇದ್ದಾನೆ. ಹೀಗಿದ್ದರೂ ಪವಿತ್ರಾ ಗೌಡ ಅವರಿಗೆ ದಾಸ ಖಾಸ ಆಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಒಟ್ಟಿಗೆ ಇರುವ ಫೋಟೋಗಳು ಇದಕ್ಕೆ ಪುಷ್ಠಿ ನೀಡಿವೆ. ಅಲ್ಲದೆ ರೇಣುಕಾಸ್ವಾಮಿ ಕೊಲೆ ಪ್ರಕರಣ ಇವರಿಬ್ಬರ ನಡುವಿನ ಸಂಬಂಧ ಎಂಥದ್ದು ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಪವಿತ್ರಾ ಗೌಡ ಚಂದನವನಕ್ಕೆ ಕಾಲಿಡುವ ಮುನ್ನವೇ ಪ್ರೀತಿಸಿ ಮದುವೆಯಾಗಿದ್ದರು. ಸಂಜಯ್ ಸಿಂಗ್ ಎಂಬುವವರನ್ನು ಮದುವೆಯಾಗಿದ್ದ ಪವಿತ್ರಾ ಅವರಿಗೆ ಒಬ್ಬ ಮಗಳೂ ಇದ್ದಾಳೆ. ಆದರೆ ಸಂಜಯ್ ಸಿಂಗ್ ಹಾಗೂ ಪವಿತ್ರಾ ದೂರವಾಗಿದ್ದಾರೆ.
ಕೆಲ ತಿಂಗಳ ಹಿಂದೆಯಷ್ಟೇ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಪವಿತ್ರಾ ದರ್ಶನ್ ಹುಟ್ಟುಹಬ್ಬಕ್ಕೆ ತಮ್ಮಿಬ್ಬರ ಪ್ರೀತಿ ವಿಚಾರವನ್ನು ಬಹಿರಂಗಪಡಿಸಿದ್ದರು.
ಇಬ್ಬರ ನಡುವಿನ ಜಗಳದಲ್ಲಿ ಬಲಿಯಾಯ್ತು ಬಡ ಜೀವ
ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪವಿತ್ರಾ ಅವರಿಗೂ ವಾಗ್ವಾದ ನಡೆದಿತ್ತು. ಇದರಿಂದ ಈ ವಿಷಯ ದೊಡ್ಡ ಸುದ್ದಿ ಕೂಡ ಆಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಅನೇಕ ದರ್ಶನ್ ಅಭಿಮಾನಿಗಳು ಕೋಪಗೊಂಡಿದ್ದರು. ತಮ್ಮ ನೆಚ್ಚಿನ ನಟನ ಸಂಸಾರದಲ್ಲಿ ಮುಳುವಾಗಿರುವ ಪವಿತ್ರಾ ಗೌಡ ಅವರ ವಿರುದ್ಧ ಸಾಕಷ್ಟ ಕಾಮೆಂಟ್ ಕೂಡ ಮಾಡಿದ್ದರು.
ಹೀಗೆ ಕಾಮೆಂಟ್ ಮಾಡಿದವರಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೂಡ ಒಬ್ಬರು. ಇವರ ಕಾಮೆಂಟ್‌ಗೆ ಕೋಪಗೊಂಡ ಪವಿತ್ರಾ ಗೌಡ ಈ ಬಗ್ಗೆ ದರ್ಶನ್ ಅವರಿಗೆ ಮಾಹಿತಿ ನೀಡಿದ್ದಾರೆ.
ದರ್ಶನ್ ಹಾಗೂ ಅವರ ಗ್ಯಾಂಗ್ ರೇಣುಕಾಸ್ವಾಮಿಯನ್ನು ಪತ್ತೆ ಮಾಡಿ ಅವರ ಮೇಲೆ ಹಲ್ಲೆ ಮಾಡಿದ್ದರಿಂದ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾರೆ ಎನ್ನುವ ಆರೋಪವಿದೆ. ಹೀಗಾಗಿ ಈ ಕೊಲೆ ಕೇಸ್‌ನಲ್ಲಿ ಪವಿತ್ರಾ ಹಾಗೂ ದರ್ಶನ್ A1 A2 ಆರೋಪಿ ಆಗಿದ್ದಾರೆ.
ಸಾಮಾಜದಲ್ಲಿ ಕಳೆದುಕೊಳ್ಳುತ್ತಾರೆ ಗೌರವ, ಹಿಟ್ ಆಗಲ್ಲಾ ಸಿನಿಮಾ
ಇಂತಹ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡ ಪವಿತ್ರಾ ಗೌಡ ಅವರಿಗೆ ಸಮಾಜದಲ್ಲಿ ಇದ್ದ ಚೂರು ಪಾರು ಹೆಸರು ಕೂಡ ಹಾಳಾಗಲಿದೆ. ಅವರು ಮಾಡಿದ ಸಿನಿಮಾಗಳು ಈ ಹಿಂದೆ ಹಿಟ್ ಆಗಿಲ್ಲ. ಮುಂದೆ ಕೂಡ ಹಿಟ್ ಆಗುವುದಿಲ್ಲ ಎಂದು ಭವಿಷ್ಯದಲ್ಲಿದೆ.
ಯಾಕೆಂದರೆ ದರ್ಶನ್ ವೈವಾಹಿಕ ಸಂಬಂಧ ಹಾಳಾಗಲು ಪವಿತ್ರಾ ಗೌಡ ಕಾರಣ ಎಂದು ಎಲ್ಲೆಡೆ ಹರಿದಾಡಿದೆ. ಹೀಗಾಗಿ ಇವರ ವಿರುದ್ಧ ದರ್ಶನ್ ಅಭಿಮಾನಿಗಳು ಕೋಪಗೊಂಡಿದ್ದಾರೆ.
ಕೆಲ ಅಭಿಮಾನಿಗಳು ಪವಿತ್ರಾ ಗೌಡ ಅವರನ್ನು ದರ್ಶನ್ ಪತ್ನಿ ಅಥವಾ ತಮ್ಮ ಎರಡನೇ ಅತ್ತಿಗೆ ಎಂದು ಒಪ್ಪಿಕೊಂಡಿದ್ದಾರೆ. ಅದಾಗ್ಯೂ ಅವರ ಮುಂದಿನ ಭವಿಷ್ಯ ಸುಲಭವಲ್ಲ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಪವಿತ್ರಾಗೆ ಸದ್ಯಕ್ಕಿಲ್ಲ ಬಂಧನದಿಂದ ಮುಕ್ತಿ
ಅಲ್ಲದೆ ಕೊಲೆ ಪ್ರಕರಣದಲ್ಲಿ ಸಿಲುಕಿರುವ ಪವಿತ್ರಾ ಗೌಡ ಅವರು ಸದ್ಯಕ್ಕೆ ಹೊರ ಬರುವುದು ಸರಳವಿಲ್ಲ. ಯಾಕೆಂದರೆ ದರ್ಶನ್ ಅವರಿಗೆ ಇರುವ ಜಾತಕ ದೋಷವೂ ಪವಿತ್ರಾ ಗೌಡ ಅವರ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿವೆ.
ಹೀಗಾಗಿ ಅವರಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಗುವುದಿಲ್ಲ. ಇದರಿಂದಾಗಿ ದರ್ಶನ್ ಜೊತೆಗೆ ಅವರು ಸುಖ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರು ಹೊಸ ಜೀವನ ಆರಂಭಿಸುವ ಸಾಧ್ಯತೆ ಇದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಅದೇನೇ ಆಗಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವವರು ಯಾರೇ ಆಗಲಿ ಅವರಿಗೆ ಶಿಕ್ಷೆ ಆಗಬೇಕು. ಪವಿತ್ರಾ ಗೌಡ ನಿರಪರಾಧಿನಾ? ಅಪರಾಧಿನಾ? ಸಿನಿಮಾ ಇಂಡಸ್ಟ್ರಿಗೆ ಮಾತ್ರವಲ್ಲದೆ, ದರ್ಶನ್ ಅಭಿಮಾನಿಗಳಿಗೂ ಗೊತ್ತಾಗಬೇಕಿದೆ.
ಪವಿತ್ರಾ ಗೌಡ ಹೊಸ ಜೀವನ
ಈ ಎಲ್ಲಾ ಸಮಸ್ಯೆಗಳಿಂದ ಹೊರ ಬಂದ ನಂತರ ಪವಿತ್ರಾ ಗೌಡ ಹೊಸ ಜೀವನ ಆರಂಭಿಸುವ ಸಾಧ್ಯತೆ ಇದೆ. ಅವರ ಜೀವನದಲ್ಲಿ ಆದ ಈ ಕಹಿ ಘಟನೆಗಳನ್ನು ಮರೆಯಲು ಅವರು ದರ್ಶನ್ ಅವರಿಂದ ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಕೂಡ ಇದೆ. ಅವರ ಮೇಲಿರುವ ಕೊಲೆ ಆರೋಪಗಳಿಂದಾಗಿ ಪವಿತ್ರಾ ಗೌಡ ಮಾನಸಿಕವಾಗಿ ಒತ್ತಡ ಅನುಭವಿಸಲಿದ್ದಾರೆ ಎಂದು ಅವರ ಜಾತಕ ಹೇಳುತ್ತದೆ.
ಹೀಗಾಗಿ ಅವರ ಮುಂದಿನ ಜೀವನದಲ್ಲಿ ದರ್ಶನ್ ಅವರಿಗೆ ಸ್ಥಾನ ಸಿಗುತ್ತಾ ಅಥವಾ ಇಲ್ವಾ? ಅನ್ನೋದು ಭಾರೀ ಕೂತೂಹಲ ಮೂಡಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications