ಕೀರ್ತಿ, ಹಣ, ಯಶಸ್ಸು, ಸುಖ ನೀಡುವ ಶುಕ್ರ ಗ್ರಹ ನಿಮ್ಮ ಜಾತಕದಲ್ಲಿ ಹೇಗಿದೆ?

ಈ ರೀತಿ ಸಮಸ್ಯೆ ಹೊತ್ತುಕೊಂಡು ಬರುವವರಿಗೆ ಪರಿಹಾರ ಇಷ್ಟು ಸಲೀಸಿತ್ತಾ ಅನಿಸುತ್ತದೆ. ಆದರೆ ಅದಕ್ಕೂ ಮುಂಚೆ ಅವರು ಪಟ್ಟಿದ್ದ ಹಿಂಸೆ ಅಬ್ಬಾ ಎನಿಸಿರುತ್ತದೆ. ಈ ದಿನದ ಲೇಖನದಲ್ಲಿ ಜನ್ಮ ಜಾತಕದಲ್ಲಿ ಶುಕ್ರ ಗ್ರಹ ದೋಷಯುಕ್ತ ಆಗಿದ್ದರೆ ಏನೇನು ಸಮಸ್ಯೆಗಳಾಗುತ್ತದೆ ಎಂಬುದನ್ನು ವಿವರಿಸುತ್ತೇನೆ.

ವೃಷಭ ಹಾಗೂ ತುಲಾ ರಾಶಿಗಳ ಅಧಿಪತಿ ಶುಕ್ರ. ಮೀನ ರಾಶಿಯಲ್ಲಿ ಉಚ್ಚ ಸ್ಥಿತಿಯನ್ನು ತಲುಪುವ ಶುಕ್ರನು ಕನ್ಯಾ ರಾಶಿಯಲ್ಲಿ ನೀಚನಾಗುತ್ತಾನೆ. ಅರ್ಥಾತ್ ದೋಷಯುಕ್ತನಾಗುತ್ತಾನೆ. "ಹೊಡೀತು ನೋಡು ಶುಕ್ರ ದಶೆ" ಅನ್ನೋ ಮಾತನ್ನು ನೀವು ಕೇಳಿದ್ದೀರಿ ಅಂತಾದರೆ, ಅದೇ ಶುಕ್ರನು ಜಾತಕದಲ್ಲೇ ದೋಷಪ್ರದನಾದರೆ ಹೇಗೆ ಗೊತ್ತಾ?

ಇಂಥ ಜಾತಕರಿಗೆ ವಿಫಲ ಪ್ರೇಮ ಪ್ರಕರಣಗಳು ಬಹಳ ಇರುತ್ತವೆ. ಹೊರ ಜಗತ್ತಿನ ಪಾಲಿಗೆ ಈ ರೀತಿಯ ಜಾತಕರು ಹೆಣ್ಣುಬಾಕರು ಅಥವಾ ದುಷ್ಟ ಸ್ವಭಾವದ ಹೆಣ್ಣುಮಕ್ಕಳು ಅಂತನ್ನಿಸುತ್ತದೆ. ಇವರ ಮದುವೆಗಳು ಮುರಿದು ಬೀಳುತ್ತವೆ. ಅದರ ಕಾರಣ ಏನು ಅಂತ ಕೂಡ ಹೇಳಲು ಇವರಿಗೆ ಆಗುವುದಿಲ್ಲ.

 Astrology How Debilitated Venus Affect On Native?

* ಈ ರೀತಿಯ ಜಾತಕರು ಸಿನಿಮಾ ರಂಗದಲ್ಲಿ ಹಣ ಹಾಕುವುದಕ್ಕೋ ನಟನೆ ಅಂತಲೋ ಹೋಗಬಾರದು.

* ಷೇರು ಮಾರುಕಟ್ಟೆಯಿಂದ, ಲೇವಾದೇವಿ ವ್ಯವಹಾರಗಳಿಂದ ದೂರ ಇರಬೇಕು.

* ಈ ಜಾತಕರಿಗೆ ವಿವಾಹ ವಿಳಂಬ, ಸಂತಾನ ಸಮಸ್ಯೆ, ವೀರ್ಯದಲ್ಲಿ ದೋಷ ಇಂಥ ಸಮಸ್ಯೆಗಳು ಎದುರಾಗಬಹುದು.

* ಶುಕ್ರ ಗ್ರಹ ದೋಷ ಇರುವವರಿಗೆ ದಾಂಪತ್ಯ ಸುಖ ಇರುವುದಿಲ್ಲ. ಲೈಂಗಿಕ ತೃಪ್ತಿ ನೀಡುವುದಕ್ಕೋ ಪಡೆಯುವುದಕ್ಕೋ ಪೂರ್ಣ ಪ್ರಮಾಣದಲ್ಲಿ ಆಗಲ್ಲ.

* ಮುಖ್ಯವಾಗಿ ಈ ಜಾತಕರಿಗೆ ಡೈವೋರ್ಸ್ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅದು ಕೂಡ ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾದಾಗಲೂ ಅದು ಬರಕತ್ತಾಗುವುದಿಲ್ಲ.

* ಗುಪ್ತಾಂಗ ರೋಗಗಳು ಇವರನ್ನು ವಿಪರೀತವಾಗಿ ಕಾಡುತ್ತದೆ.

ಸರಿ, ಬರೀ ಸಮಸ್ಯೆಗಳನ್ನೇ ಹೇಳುತ್ತೀರಲ್ಲಾ, ಪರಿಹಾರ ಏನು ಎಂಬುದು ಮುಂದಿನ ಪ್ರಶ್ನೆ ಆಗಿರುತ್ತದೆ. ಇಲ್ಲೂ ಕೂಡ ಕೆಲವು ಎಚ್ಚರಿಕೆಯ ಮಾತುಗಳನ್ನು ಹೇಳಲೇಬೇಕು.

* ಸರಿಯಾದ ಜ್ಯೋತಿಷಿಗಳಲ್ಲಿ ಜಾತಕ ತೋರಿಸಿಕೊಳ್ಳದೆ ವಜ್ರವನ್ನು ಧರಿಸಬಾರದು. (ಈ ಮಾತು ಎಲ್ಲರಿಗೂ ಅನ್ವಯ ಆಗುತ್ತದೆ)

* ಸೂಕ್ತ ಸಮಯದಲ್ಲಿ ಶುಕ್ರ ಗ್ರಹ ಶಾಂತಿ ಮಾಡಿಸಿಕೊಳ್ಳಲೇಬೇಕು. (ಕೆಲವರು ಮದುವೆ ವಯಸ್ಸು ಮೀರಿದ ಮೇಲೆ ಅಥವಾ ಸಂತಾನ ಪಡೆಯುವ ಅವಕಾಶ ವಂಚಿತರಾದ ಮೇಲೆ ಪರಿಹಾರ ಕೇಳಿ ಬರುತ್ತಾರೆ)

* ಎಲ್ಲಕ್ಕೂ ಮೊದಲು ಜಾತಕದಲ್ಲಿ ಶುಕ್ರನ ಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.

ಕೋಟಿಗಟ್ಟಲೆ ಹಣ ಹಾಕಿ ವ್ಯಾಪಾರ ಶುರು ಮಾಡುತ್ತಾರೆ, ಸಿನಿಮಾ ಮಾಡುತ್ತಾರೆ, ಲೇವಾದೇವಿ ವ್ಯವಹಾರ ಮಾಡುತ್ತಾರೆ, ಷೇರುಗಳ ಮೇಲೆ ಹಣ ಹಾಕುತ್ತಾರೆ. ಇಂಥದ್ದನ್ನೆಲ್ಲ ಮಾಡುವ ಮುನ್ನ ಒಮ್ಮೆ ನಿಮ್ಮ ಜಾತಕ ಜ್ಯೋತಿಷಿಗಳಲ್ಲಿ ಪರಿಶೀಲಿಸಿಕೊಳ್ಳಿ. ಶುಕ್ರ ಗ್ರಹ ಜನ್ಮ ಜಾತಕದಲ್ಲಿ ನೀಚವಾಗಿದ್ದಲ್ಲಿ ಕೆಲವು ವ್ಯವಹಾರಗಳ ಕಡೆಗೆ ಕಣ್ಣೆತ್ತಿಯೂ ನೋಡಬೇಡಿ.

ಇನ್ನು ಶುಕ್ರ ನೀಚನಾಗಿದ್ದಲ್ಲಿ ಲಗ್ನದಿಂದ ಎಷ್ಟನೇ ಮನೆಯಲ್ಲಿ ನೀಚ ಸ್ಥಿತಿಯಲ್ಲಿದೆ, ಯಾವ ಗ್ರಹದ ಸಂಯೋಗದಲ್ಲಿ ಇದೆ, ಯಾವ ಮನೆಯ ಮೇಲೆ ದೃಷ್ಟಿಯಿದೆ ಇತ್ಯಾದಿ ಅಂಶಗಳನ್ನು ಸಹ ಗಮನಿಸಬೇಕು.

ನೆನಪಿನಲ್ಲಿಡಿ, ಶುಕ್ರ ಗ್ರಹ ಅಂದರೆ ಕೀರ್ತಿ, ಹಣ, ಯಶಸ್ಸು, ಸುಖ ನೀಡುವಂಥದ್ದು. ಆ ಗ್ರಹವೇ ಜಾತಕದಲ್ಲಿ ದುರ್ಬಲವಾದರೆ, ನೀಚವಾದರೆ ಏನಾದೀತು? ಆದರೆ ಯಾವ ಸಮಸ್ಯೆಯೂ ಪರಿಹಾರ ಇಲ್ಲದ್ದು ಅಲ್ಲ. ಆದರೆ ಆ ಪರಿಹಾರ ಕಂಡುಕೊಳ್ಳುವ ಮನಸ್ಸು, ಯೋಗ ಇರಬೇಕು, ಅಷ್ಟೇ.

ವೈಯಕ್ತಿಕವಾಗಿ ಭೇಟಿ ಮಾಡಬೇಕಿದ್ದಲ್ಲಿ ವಿಳಾಸ ಮತ್ತು ಸಂಪರ್ಕ ಸಂಖ್ಯೆ:
ಶ್ರೀನಿವಾಸನ್
ಪ್ರಧಾನ ಜ್ಯೋತಿಷ್ಯರು
ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ
# 37, 27ನೇ ಕ್ರಾಸ್, 12ನೇ ಮುಖ್ಯರಸ್ತೆ
ವಾಸುದೇವ್ ಅಡಿಗಾಸ್ ಹೋಟೆಲ್ ಹತ್ತಿರ
ಜಯನಗರ 4ನೇ ಬ್ಲಾಕ್, opp ಸಿಂಡಿಕೇಟ್ ಬ್ಯಾಂಕ್
ಬೆಂಗಳೂರು 560011
ಸಂಪರ್ಕ ಸಂಖ್ಯೆ 9886665656- 9886155755

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+