ಪ್ರಕಾಶ್ ಅಮ್ಮಣ್ಣಾಯರಿಂದ ಪಂಚ ರಾಜ್ಯ ವಿಧಾನಸಭಾ ಚುನಾವಣೆ ವಿಶ್ಲೇಷಣೆ

Recommended Video

      5 States Assembly Elections Results : 5 ರಾಜ್ಯಗಳ ಚುನಾವಣೆ ಬಗ್ಗೆ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

      ನಾಳೆ (ಡಿಸೆಂಬರ್ ಏಳು) ಕೊನೆ ಸುತ್ತು ಎಂಬಂತೆ ರಾಜಸ್ತಾನ, ತೆಲಂಗಾಣದಲ್ಲಿ ವಿಧಾನಸಭೆಗೆ ಮತದಾನ ನಡೆಯಲಿದೆ. ಅದಾಗಿ ನಾಲ್ಕು ದಿನಕ್ಕೆ ಡಿಸೆಂಬರ್ ಹನ್ನೊಂದನೇ ತಾರೀಕು ಫಲಿತಾಂಶ ಬರಲಿದೆ. ಒಟ್ಟು ಐದು ರಾಜ್ಯಗಳ ವಿಧಾನಸಭೆಯ ಚುನಾವಣೆ ಫಲಿತಾಂಶವು ಬರಲಿದೆ. ರಾಜಸ್ತಾನ, ಮಧ್ಯಪ್ರದೇಶ, ಮಿಜೋರಾಂ, ಛತ್ತೀಸ್ ಗಢ ಹಾಗೂ ತೆಲಂಗಾಣದ ಚುನಾವಣೆ ಫಲಿತಾಂಶ ಬರಲಿದೆ.

      ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಹಾಗೂ ಕೇಂದ್ರ ಸರಕಾರದ ಸಾಧನೆ ಮೌಲ್ಯಮಾಪನಕ್ಕೆ ಒಂದು ಮಿನಿ ಪರೀಕ್ಷೆ ಎಂದೇ ಪರಿಗಣಿಸುವಂಥ ಸವಾಲು. ಆ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಏನಾಗಬಹುದು ಎಂಬ ಬಗ್ಗೆ ವಿಶ್ಲೇಷಣೆ ಇಲ್ಲಿದೆ. ಇದು ಸತ್ಯವೋ ಸುಳ್ಳೋ ಅಥವಾ ಎಷ್ಟರ ಮಟ್ಟಿಗೆ ನಿಜವಾಗಲಿದೆ ಎಂಬುದನ್ನು ತಿಳಿಯುವುದಕ್ಕೆ ಹೆಚ್ಚು ಸಮಯದ ಅಗತ್ಯವಿಲ್ಲ.

      ಕಳೆದ ವರ್ಷ ಡಿಸೆಂಬರ್ ನಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶದ ದಿನ ಅವರು ನುಡಿದ ಭವಿಷ್ಯದಿಂದ ಭಾರೀ ಚರ್ಚೆಗೆ ಕಾರಣರಾದರು. ಆ ನಂತರ ಕರ್ನಾಟಕ ವಿಧಾನಸಭಾ ಚುನಾವಣೆ ಬಗ್ಗೆ ಬಹಳ ಮುಂಚಿತವಾಗಿ ಕರಾರುವಾಕ್ ‌ಭವಿಷ್ಯ ನುಡಿದವರು ಉಡುಪಿ ಜಿಲ್ಲೆ, ಕಾಪುವಿನ ಪ್ರಕಾಶ್ ಅಮ್ಮಣ್ಣಾಯ. ಇದೀಗ ಅವರೇ ಐದು ರಾಜ್ಯಗಳ ಚುನಾವಣೆ ಫಲಿತಾಂಶದ ಬಗ್ಗೆ ಒನ್ ಇಂಡಿಯಾ ಕನ್ನಡದ ಜತೆ ಮಾತನಾಡಿದ್ದಾರೆ.

      ಕೇಂದ್ರದಲ್ಲಿನ ಆಡಳಿತಾರೂಢ ಪಕ್ಷಕ್ಕೆ ಹಿನ್ನಡೆ

      ಕೇಂದ್ರದಲ್ಲಿನ ಆಡಳಿತಾರೂಢ ಪಕ್ಷಕ್ಕೆ ಹಿನ್ನಡೆ

      ಐದು ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ತಾನ, ಮಿಜೋರಾಂ, ತೆಲಂಗಾಣ ಹಾಗೂ ಛತ್ತೀಸ್ ಗಢ ವಿಧಾನಸಭಾ ಚುನಾವಣೆಯ ಫಲಿತಾಂಶವು ಕೇಂದ್ರ ಸರಕಾರಕ್ಕೆ ಆಶಾದಾಯಕವಾಗಿ ಕಾಣುವುದಿಲ್ಲ್. ಇನ್ನು ಇದನ್ನು ಮಿಶ್ರ ಫಲ ಎಂದು ಪರಿಗಣಿಸಬೇಕಾಗುತ್ತದೆ. ಅಷ್ಟರ ಮಟ್ಟಿಗೆ ಹೇಳಬೇಕು ಅಂದರೆ ಈ ಫಲಿತಾಂಶವು ಆಡಳಿತಾರೂಢ ಪಕ್ಷಕ್ಕೆ ಹಿನ್ನಡೆಯನ್ನೇ ಸೂಚಿಸುತ್ತದೆ.

      ವಿರೋಧ ಪಕ್ಷಗಳಿಗೆ ಉಸಿರು ಬಂದಂತಾಗುತ್ತದೆ

      ವಿರೋಧ ಪಕ್ಷಗಳಿಗೆ ಉಸಿರು ಬಂದಂತಾಗುತ್ತದೆ

      ಇನ್ನು ಈ ಫಲಿತಾಂಶದಿಂದ ವಿರೋಧ ಪಕ್ಷಗಳಿಗೆ ಉಸಿರು ಬಂದಂತಾಗುತ್ತದೆ. ಆದರೆ ಅದರಿಂದ ಉದ್ಭವಿಸುವ ಅತಿಯಾದ ವಿಶ್ವಾಸವು ಲೋಕಸಭೆ ಚುನಾವಣೆಗೆ ಮಾರಕವಾಗುತ್ತದೆ. ಈ ಐದು ರಾಜ್ಯಗಳ ಚುನಾವಣೆ ಫಲಿತಾಂಶದಿಂದ ವಿರೋಧ ಪಕ್ಷಗಳಲ್ಲಿರುವ ಮೈತ್ರಿ ಕೂಟಗಳಲ್ಲೇ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಬಿಜೆಪಿಗೆ ಹಿನ್ನಡೆಯು ಗೋಚರಿಸುತ್ತದೆ.

      ಮುಂದಿನ ಚುನಾವಣೆಗೆ ಪಾಠವಾಗಲಿದೆ

      ಮುಂದಿನ ಚುನಾವಣೆಗೆ ಪಾಠವಾಗಲಿದೆ

      ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲ್ಲಬಹುದು. ಉಳಿದೆಡೆ ಸಮ್ಮಿಶ್ರ ಸರಕಾರ ಮಾಡುವಂತಾದೀತು. ಅಲ್ಲಿಯೂ ಬಿಜೆಪಿ ಸಮ್ಮಿಶ್ರ ಸರಕಾರ ರಚನೆ ಮಾಡಬಹುದು. ಡಿಸೆಂಬರ್ ಹನ್ನೊಂದರಂದು ಯೋಗಕಾರಕನಾಗಿ ರವಿಯು ಅಷ್ಟಮದಲ್ಲಿ ಇರುವುದು ಸೋತರೂ ಲಾಭವಾಗುವುದನ್ನು ಸೂಚಿಸುತ್ತದೆ. ನೈಸರ್ಗಿಕವಾಗಿ ಮೇಷ ಲಗ್ನಕ್ಕೆ ಶನಿಯು ಧನುರಾಶಿ ನವಮದಲ್ಲಿ ಬಲಿಷ್ಠನೇ. ಆದರೂ ಈ ಸಲದ ಚುನಾವಣೆಗಳು ಬಿಜೆಪಿಯೊಳಗಿನ ಸಹಮತದ ಪ್ರಯತ್ನದ್ದಲ್ಲ. ಆದರೆ ಮುಂದಿನ ಚುನಾವಣೆಗೆ ಪಾಠವಂತೂ ಆಗುತ್ತದೆ.

      2019ರ ಫೆಬ್ರವರಿ ನಂತರ ಉತ್ತಮ ಫಲ

      2019ರ ಫೆಬ್ರವರಿ ನಂತರ ಉತ್ತಮ ಫಲ

      ಫೆಬ್ರವರಿವರೆಗೆ ದೇಶದ ಯಜಮಾನ ಪೀಠದಲ್ಲಿರುವ ಮೋದಿ ಅವರ ಚಂದ್ರ ದಶೆಯಲ್ಲಿ ಅವರ ಜನನ ಲಗ್ನದ ಅಷ್ಟಮಾಧಿಪ ಬುಧ ಭುಕ್ತಿ, ಖರದ್ರೇಕ್ಕಾಣಾಧಿಪನೂ, ದಶಾಧಿಪ ಚಂದ್ರನಿಗೆ ಪ್ರತ್ಯರ ತಾರೆಯಲ್ಲಿ ಇರುವ ಬುಧ ಭುಕ್ತಿಯೂ ಆಗಿರುವುದರಿಂದ ಉತ್ತಮ ಫಲ ಎಂದು ಹೇಳಲಾಗದು. 2019ರ ಫೆಬ್ರವರಿ ನಂತರ ಉತ್ತಮ ಫಲವು ಮೋದಿ ಅವರಿಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+