ಎಚ್ಡಿಕೆ ಸಿಎಂ ಆಗ್ತಾರೆ ಎಂದಿದ್ದ ಪ್ರಕಾಶ್ ದಳವಿಯಿಂದ ಚುನಾವಣೆ ಭವಿಷ್ಯ

Recommended Video

      5 States Elections 2018 : ಟಾರೋ ಕಾರ್ಡ್ ರೀಡರ್ ಪ್ರಕಾಶ್ ದಳವಿಯಿಂದ ಪಂಚ ರಾಜ್ಯಗಳ ಚುನಾವಣಾ ಭವಿಷ್ಯ

      ಪಂಚ ರಾಜ್ಯಗಳ ಚುನಾವಣೆ ಪೈಕಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಏನಾಗಬಹುದು ಎಂದು ಮುಂಬೈ ಮೂಲದ ಹೆಸರಾಂತ ಟಾರೋ ಕಾರ್ಡ್ ರೀಡರ್ ಪ್ರಕಾಶ್ ದಳವಿ ಭವಿಷ್ಯ ನುಡಿದಿದ್ದಾರೆ. ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಗಢ್ ಹಾಗೂ ತೆಲಂಗಾಣದಲ್ಲಿ ಯಾರಿಗೆ ಗೆಲುವುದ ದಕ್ಕಲಿದೆ ಎಂದು ಹೇಳಿದ್ದಾರೆ.

      ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಬಹಳ ಮುಂಚಿತವಾಗಿಯೇ ಹೇಳಿದ್ದ ಟಾರೋ ಕಾರ್ಡ್ ರೀಡರ್ ಇವರು. ಪ್ರಕಾಶ್ ದಳವಿ ನುಡಿದಿರುವ ನಾಲ್ಕು ರಾಜ್ಯಗಳ ಚುನಾವಣಾ ಭವಿಷ್ಯ ಇಂತಿದೆ.

      ರಾಜಸ್ತಾನ: ರಾಜಸ್ತಾನದಲ್ಲಿ ಬಿಜೆಪಿಯು ತೊಂಬತ್ತೈದರಿಂದ ತೊಂಬತ್ತೇಳು ಸ್ಥಾನಗಳನ್ನು ಜಯಿಸುತ್ತದೆ. ಇತರರ ಬೆಂಬಲದ ಜತೆಗೆ ಬಿಜೆಪಿ ಅಧಿಕಾರಕ್ಕೆ ಏರಲಿದೆ. ವಸುಂಧರಾ ರಾಜೇ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿದ್ದಾರೆ.

      5 state assembly elections prediction according to tarrot card reading

      ಛತ್ತೀಸ್ ಗಢ: ಈ ರಾಜ್ಯದಲ್ಲಿ ಕರ್ನಾಟಕದಲ್ಲಿ ಉದ್ಭವಿಸಿದಂಥ ಸನ್ನಿವೇಶ ಸೃಷ್ಟಿ ಆಗುತ್ತದೆ. ಅಜಿತ್ ಜೋಗಿಗೆ ಬಿಜೆಪಿ ಅಥವಾ ಕಾಂಗ್ರೆಸ್ ಬೆಂಬಲ ನೀಡಬಹುದು. ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಹೆಚ್ಚಿದೆ. ರಮಣ್ ಸಿಂಗ್ ಗೆ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಅವಕಾಶಗಳಿಲ್ಲ.

      ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ. ಶಿವರಾಜ್ ಸಿಂಗ್ ಚೌಹಾಣ್ ಸೋಲುತ್ತಾರೆ. ಕಾಂಗ್ರೆಸ್ ನಿಂದ ಜ್ಯೋತಿರಾದಿತ್ಯ ಸಿಂದಿಯಾ ಮುಖ್ಯಮಂತ್ರಿ ಆಗುವ ಅವಕಾಶ ನಿಚ್ಚಳ ಆಗಿದೆ.

      ತೆಲಂಗಾಣ: ಇಲ್ಲಿನ ವಿಧಾನಸಭೆಯಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿಯ ಕೆ.ಚಂದ್ರಶೇಖರ್ ರಾವ್ ಗೆಲುವು ಸಾಧಿಸಲಿದ್ದಾರೆ. ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+