ಪುರುಷರೇ ಮೃಷ್ಟಾನ್ನಕ್ಕೂ ರೆಡಿಯಾಗಿ, ಚಿತ್ರಾನ್ನಕ್ಕೂ!

* ಧವಳ
ಮಿಥುನ ರಾಶಿ ಪುರುಷ - ಸಿಂಹ ರಾಶಿ ಸ್ತ್ರೀ : ಸಿಂಹ ರಾಶಿ ಸ್ತ್ರೀಯರಿಗೆ ಬದಲಾವಣೆ ಅಂದೆ ತುಂಬಾ ಇಷ್ಟ. ಚಿಕ್ಕದೋ -ದೊಡ್ಡದೋ ಅಂತೂ ಬದಲಾವಣೆ ಬೇಕೇಬೇಕು. ಆದರೆ ಕೆಲಸದ ವಿಷಯಕ್ಕೆ ಬಂದಾಗ ಸಣ್ಣ ಕೆಲಸ ಮಾಡಿದರೂ ಸುಸ್ತೋ ಸುಸ್ತು. ಕೆಲಸ ಎಷ್ಟೇ ಸಾಧಾರಣ ಆಗಿರಲಿ ತಕ್ಷಣ ಹೊಗಳಿಕೆ ಬೇಕೇಬೇಕು. ಈ ವಿಷಯದಲ್ಲಿ ಸಹನೆ ಅನ್ನುವುದು ಇವರ ಹತ್ತಿರ ಸುಳಿಯದು. ಮತ್ತೊಂದು ಅಂಶ ಸಿಂಹ ರಾಶಿ ಸ್ತ್ರೀಯರಲ್ಲಿ ಇರುತ್ತದೆ. ಅದೆಂದರೆ, ಅವರು ಯಾವುದೇ ಕೆಲಸವನ್ನಾಗಲಿ, ಸಂಗತಿ ಆಗಲಿ ಸಮಯಕ್ಕೆ ಸರಿಯಾಗಿ ಮಾಡುವುದಕ್ಕೆ ಹೆಚ್ಚಿನ ಗಮನ ಕೊಡ್ತಾರೆ. ಜೊತೆಗೆ ಇವರಿಗೆ ಶಾಪಿಂಗ್, ಡ್ರೆಸ್ ಮಾಡಿಕೊಳ್ಳುವುದು, ಹಾಯಾಗಿ ತಿಂದು ಉಂಡುಕೊಂಡು ಇರುವುದಕ್ಕೆ ಸಖತ್ ಇಷ್ಟ.
ಆದರೆ ಮಿಥುನ ರಾಶಿ ಪುರುಷ ಹೆಣ್ಣನ್ನು ಅರ್ಥ ಮಾಡಿಕೊಳ್ಳುವ ವಿಷಯದಲ್ಲಿ ಸ್ವಲ್ಪ ಡಲ್ಲು ಹಾಗೂ ಪೂರು. ಎಲ್ಲಾ ಹೆಂಗಸರು ಒಂದೇ ಬಗೆಯ ಗುಣ ಸ್ವಭಾವ ಹೊಂದಿರುತ್ತಾರೆ ಎಂದು ತಿಳಿದಿರುತ್ತಾರೆ. ಅದು ಎಂದಿಗೂ ಸಾಧ್ಯ ಅಲ್ಲದ ವಿಷ್ಯ ಅಲ್ಲವೇ ಇದು ದಂಪತಿಗಳಲ್ಲಿ ಗಲಾಟೆ ಮಾಡಲು ಕಾರಣ ಆಗುತ್ತದೆ. ತಮ್ಮ ದಾಂಪತ್ಯ ತುಂಬಾ ವಿಶಿಷ್ಟವಾದುದು, ಎಲ್ಲರಿಗೂ ಮಾದರಿ ಆಗಬೇಕು ಎಂದು ಬಯಸುತ್ತಾರೆ ಆಕೆ, ಇದು ತುಂಬಾ ಸುಲಭ ಕೆಲಸ ಅಲ್ವ ಮಿಥುನ ರಾಶಿಯವರೇ!
ಮಿಥುನ ರಾಶಿ ಸ್ತ್ರೀ - ಕನ್ಯಾ ರಾಶಿ ಪುರುಷ : ಕನ್ಯಾ ರಾಶಿ ಪುರುಷರು ಏಕಾಂತ ಪ್ರಿಯರು. ಆದಷ್ಟು ಒಂಟಿಯಾಗಿ ಇರುವುದಕ್ಕೆ ಇಷ್ಟ ಪಡ್ತಾರೆ. ತಮಾಷೆ ಅಂದ್ರೆ ತಮ್ಮ ಹೆಂಡತಿಯಿಂದಲೂ ದೂರ ಇರಬೇಕು ಎಂದು ಬಯಸ್ತಾರೆ. ಹೆಂಡತಿ ಎಲ್ಲಿಗಾದರೂ ಹೋಗಿ ಬರ್ತಾಳಂದ್ರೆ ಉಲ್ಲಾಸದಿಂದ ಪುಲಕಿತಗೊಳ್ಳುತ್ತದೆ ಈ ಪುರುಷ ಸಿಂಹ. ಅಮ್ಮ ಸದ್ಯ ನನ್ ಪಾಡಿಗೆ ನಾನು ಇರಬಹುದು ನನ್ನ ಕೆಲಸ, ಭವಿಷ್ಯದ ಬಗ್ಗೆ ಆರಾಮವಾಗಿ ಚಿಂತಿಸಬಹುದು ಎಂದುಕೊಳ್ತಾರೆ, ಆದರೆ ಅವರ ಭವಿಷ್ಯದ ಬಹುಮುಖ್ಯ ವ್ಯಕ್ತಿ ಸಂಗಾತಿಯೇ ಅಲ್ವೆ?
ಮತ್ತೊಂದು ಅತಿ ಮುಖ್ಯ ಸಂಗತಿಯೆಂದರೆ ಇವರಿಬ್ಬರು ಸ್ವಲ್ಪ ಸ್ವಾರ್ಥಿಗಳು. ತಮ್ಮ ಕೆಲಸ ತಾವು ನೋಡಿಕೊಂಡು ತಮ್ಮ ಮಿತಿಯಲ್ಲಿ ತಾವಿರ್ತಾರೆ. ಇದು ಇವರ ಬದುಕಲ್ಲಿ ಒಂದು ಅಡ್ವಾ೦ಟೇಜ್ ಆಗಿಬಿಡುತ್ತೆ ಇವರಿಬ್ಬರ ಬದುಕಲ್ಲಿ. ಯಾವಾಗ ಅವರ ಪಾಡಿಗೆ ಅವರು ಜೀವಿಸ್ತಾರೋ ಆಗ ಜಗಳಕ್ಕೆಲ್ಲಿ ಜಾಗ? ಆದರೆ ಮಿಥುನ ರಾಶಿ ಸ್ತ್ರೀಯರು ಒಂದು ಸರ್ತಿ ಒಂದು ರೀತಿ ಇದ್ರೆ ಮತ್ತೊಂದು ಸರ್ತಿ ಮತ್ತೊಂದು ಸ್ವಭಾವ ಹೊಂದಿರ್ತಾರೆ. ಮಿ. ಕನ್ಯಾ ರಾಶಿ ಅವರು ಚಿತ್ರಾನ್ನ ಖುಷಿಯಾಗಿ ಮಾಡಿಕೊಟ್ಟಾಗ ಅದನ್ನು ನೀವು ಹ್ಯಾಪಿಯಾಗಿ ತಿನ್ನಿ, ಅದೇ ಖುಷಿಯಿಂದ ಅದೇ ತಿಂಡಿ ಮಾಡಿಕೊಡ್ತಾರೆ ಎಂದು ಇನ್ನೊಂದಿನ ನೀವು ಬಯಸುವುದು ತಪ್ಪು. ನಿಮ್ಮ ತಟ್ಟೆಯಲ್ಲಿ ರಪ್ ಎಂದು ಉಪ್ಪಿಟ್ಟು ಬೀಳುವ ಸಂಭವ ಅಧಿಕ! ಅದನ್ನೇ ಕಾರಣವಾಗಿಟ್ಟುಕೊಂಡು ಕಲಹಕ್ಕೆ ದಾರಿ ಮಾಡಿಕೊಳ್ಳದೆ ಕೊಟ್ಟದ್ದನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)












Click it and Unblock the Notifications