ಡಾರ್ಲಿಂಗೂ ನೀನೆ ಕಣೆ ನನ್ ಲವ್ವೂ!

Love compatibility astrology
ಮೇಷ ರಾಶಿ ಸ್ತ್ರೀ - ವೃಶ್ಚಿಕ ರಾಶಿ ಪುರುಷ : ವೃಶ್ಚಿಕ ರಾಶಿ ಪುರುಷರದು ಜೋವಿಯಲ್ ಸ್ವಭಾವ. ಇವರಿದ್ದ ಕಡೆ ಭರಪೂರ ಖುಷಿ. ಆದ್ರೆ ಸುಳ್ಳು ಅಂದ್ರೆ ಮೈಮೇಲೆ ಜಿರಳೆ ಓಡಾಡಿದಷ್ಟು ಕಿರಿಕಿರಿ ಅವರಿಗೆ! ಸತ್ಯವನ್ನು ಇಷ್ಟಪಡ್ತಾರೆ. ಇವರು ಹೀಗೆ ಇದ್ರೆ ತೊಂದ್ರೆ ಇಲ್ಲ. ಆದರೆ ಇವರ ಮತ್ತೊಂದು ಅಂಶ ಸ್ವಲ್ಪ ಎಡವಟ್ಟಿನದು, ತಮ್ಮ ಹೆಂಡತಿ ತಮ್ಮಂತೆ ಬದುಕಬೇಕು, ಅದೇ ಗುಣವನ್ನು ಹೊಂದಬೇಕು ಎನ್ನುವ ಆಸೆ ಇವರದು! ಎಲ್ಲ ಸಂದರ್ಭಗಳಲ್ಲೂ ಹೀಗಾಗದು. ಇನ್ನು ಇಂತಹ ಸಂಗಾತಿ ಪಡೆದ ಮೇಷ ರಾಶಿ ಹೆಣ್ಣು ಧೈರ್ಯಸ್ಥೆ ಆಗಿದ್ರೆ ಓಕೆ, ಯಾವುದೇ ರೀತಿಯ ತೊಂದರೆ ಇರದು. ಮುಖ್ಯವಾಗಿ ಈಕೆ ಒಂದು ಮಂತ್ರವನ್ನು ಸದಾ ಜಪಿಸುತ್ತಲೇ ಇರಬೇಕು, ಅದು ಸಹನೆ. ಪತಿಯ ಮಾತನ್ನು ಪ್ರೀತಿಯಿಂದ ಸ್ವೀಕರಿಸಬೇಕು. ಹೊಂದಿಕೆ ಬದುಕಿನ ಮಹಾಮಂತ್ರ ಆಗಬೇಕು. ಆಗ ಬಾಳು ಸುಂದರ!

ಮೇಷ ರಾಶಿ ಪುರುಷ - ವೃಶ್ಚಿಕ ರಾಶಿ ಸ್ತ್ರೀ : ವೃಶ್ಚಿಕ ರಾಶಿ ಹೊಂದಿರುವ ಹೆಣ್ಣುಮಕ್ಕಳು ಎಂತಹ ಕೆಲಸ ಮಾಡುವುದಕ್ಕೂ ಹಿಂಜರಿಯರು (ತಪ್ಪಾಗಿ ಅರ್ಥೈಸಬಾರದು ಪ್ಲೀಸ್!) ಆದ್ರೆ ಅವರು ಯಾವಾಗ ಏನು, ಎ೦ತಹ ಕೆಲಸ ಮಾಡ್ತಾರೆ ಎಂದು ಯಾರು ಊಹಿಸಲು ಸಾಧ್ಯವಾಗದು. ಅಂತಹ ವಿಚಿತ್ರ ಸ್ವಭಾವ ಹೊಂದಿರುತ್ತಾರೆ. ಇವರು ತಾವು ಪ್ರೀತಿಸುವವರು ಸಂಪೂರ್ಣವಾಗಿ ತಮಗೆ ಸೇರಬೇಕು ಎಂದು ಬಯಸುತ್ತಾರೆ. ಈ ರಾಶಿಯರಿಗೆ ಯಾವುದೋ ಒಂದು ರೀತಿಯಲ್ಲಿ ಆಗಲಿ ಗೆಲವು ಸಿಗಲೇಬೇಕು. ಸೋ, ಆದ ಕಾರಣ ಮೇಷ ರಾಶಿಯವರೇ ನೀವು ಮಾಡಬೇಕಾದದ್ದು ಇಷ್ಟೆ, "ಅಯ್ಯೋ ಡಾರ್ಲಿಂಗೂ ನೀನೆ ಕಣೆ ನನ್ ಲವ್ವೂ, ಹಾರ್ಟೂ, ನಿನ್ ಬಿಟ್ರೆ ಯಾರಿದ್ದಾರೆ ಈ ಪಾಪಿ ದುನಿಯಾದಲ್ಲಿ ನನಗೆ. ಖಂಡಿತ ನೀನು ನನಗೆ ತುಂಬಾ ಒಳ್ಳೆಯ ಗೆಳತಿ ಕಣೆ. ತುಂಬಾ ಜಾಣೆ ನೀನು, ಹಾಳಾದ್ದು ಗೆಲುವು ಎಷ್ಟರ ಮಟ್ಟಿನದು? ಎಲ್ಲ ಕೆಲಸಗಳಲ್ಲೂ ನಿನ್ ಬಿಟ್ರೆ ಯಾರು ಯಶಸ್ವಿ ಆಗೋಕೆ ಸಾಧ್ಯ...!" ಎಂದು ನಂಬಿಕೆ ಬೆಳಸಬೇಕು ಹಾಗೂ ಉತ್ತೇಜನ ನೀಡುತ್ತಿರಬೇಕು. ವಾದವಿವಾದಗಳು ನಿಮ್ಮ ಬಳಿ ಸುಳಿಯದೇ ಇರುವಂತೆ ಮಾಡಿ, ಆಗ ಬದುಕು ಸುಂದರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+