ರಾಶಿ ಭವಿಷ್ಯ ಮೇಷ ಮಿಥುನ ಮೈಥುನ
ಪ್ರೀತಿ ವಿಷಯದಲ್ಲೂ ಸಹ ಇವರು ಪಕ್ಕಾ ಪರ್ಫೆಕ್ಟ್ ಕಣ್ರೀ! ಬದುಕಲ್ಲಿ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ, ವೆಲ್! ಸ್ವಲ್ಪ ಇವರಿಬ್ಬರು ಮಕ್ಕಳ ಮನೋಸ್ಥಿತಿಯನ್ನು ಪಡೆದಿರುತ್ತಾರೆ, ಸ್ವಲ್ಪ ಹೊತ್ತು ಆಟ, ಸ್ವಲ್ಪ ಕಾಲ ಕಾದಾಟ...! ಜೀಜುಂಬೆ.. ಜೀಜುಂಬೆ.. ಬಾ ನನ್ನ ಬಳಿಗೆ....! ಅನ್ನುವ ಮಂತ್ರ ಇವರ ಬಾಳಲ್ಲಿ ಗಟ್ಟಿ ಸ್ಥಾನ ಪಡೆದಿರುತ್ತದೆ.
ಮೇಷರಾಶಿ ಪುರುಷ - ಮಿಥುನ ರಾಶಿ ಸ್ತ್ರೀ : ಮಹತ್ವಾಕಾಂಕ್ಷೆ ಮಿಥುನ ರಾಶಿ ಸ್ತ್ರೀಯರ ರಕ್ತದ ಕಣಕಣದಲ್ಲೂ ಹರಿತಾ ಇರುತ್ತದೆ. ಭವಿಷ್ಯದತ್ತ ಸದಾ ಗಮನ, ಅದಕ್ಕೆ ಬೇಕಾದ ಕನಸುಗಳು ಸಾಥ್ ನೀಡಿರುತ್ತದೆ. ಆದರೆ ಅವರು ಅದರ ಬಗ್ಗೆ ಯೋಚಿಸುತ್ತಾ ಸುಮ್ಮನೆ ಕುಳಿತು ಬಿಡಲ್ಲ, ಬದಲಿಗೆ ನನಸು ಮಾಡಿಕೊಳ್ಳಲು ಹೆಚ್ಚುಹೆಚ್ಚು ಪ್ರಯತ್ನ ನಡೆಸುತ್ತಾರೆ. ತಮ್ಮ ಫ್ಯೂಚರ್ ಸಖತ್ತಾಗಿರುತ್ತೆ ಅನ್ನುವ ಆಶಾವಾದ ಇವರದು. ಮುಂದೆ ನಡೆಯುವ ಒಳ್ಳೆಯದು ಈಗಲೇ... ಈ ಕ್ಷಣವೇ ಆದ್ರೆ..! ತಕ್ಷಣ ಆಗಿಬಿಡ್ಲಿ...! ಅನ್ನುವ ಗುಣ ಹೊಂದಿರುತ್ತಾರೆ.ಆದರೆ...ಆದರೆ...
ಅಕಸ್ಮಾತ್ ಆ ಕನಸುಗಳು ಅವರು ಬಯಸಿದಂತೆ ನನಸಾಗಿ ಎದುರು ನಿಂತರೆ ನೋ ಅದು ಸಹ ಅವರಿಗೆ ಇಷ್ಟ ಆಗಲ್ಲ. ಒಂದರ್ಥದಲ್ಲಿ ತುಸು ವಿಚಿತ್ರ ಹಾಗೂ ವಿಪರೀತ ಭಿನ್ನ ಗುಣ ಹೊಂದಿರುವ ವ್ಯಕ್ತಿತ್ವ ಈ ಮಿಥುನ ರಾಶಿ ಮಾನಿನಿಯರದು. ನನ್ ಹೆಂಡತಿ ಅಡುಗೆ ಮನೆಗೆ ಸೀಮಿತ ಆಗದೆ ನನ್ನ ಕೆಲಸದಲ್ಲಿಯೂ ಸಹಭಾಗಿ ಆಗ್ಲಿ ಅನ್ನುವ ಆಶಯ ಮೇಷ ರಾಶಿ ಪುರುಷರದ್ದಾಗಿರುತ್ತದೆ. ಪ್ರೀತಿ ಮಾಡುವ ವಿಷಯದಲ್ಲಿ ಇವರಿಗೆ ಸರಿಸಾಟಿ ಯಾರು ಇಲ್ಲ. ಮದುವೆಯಾಗಿ ಏಳೆಂಟು ವರ್ಷಗಳು ಕಳೆದರೂ ಒಬ್ಬರ ಕಂಡ್ರೆ ಒಬ್ಬರಿಗೆ ಆಕರ್ಷಣೆ ಉಳಿದಿರುತ್ತದೆ. ದಾಂಪತ್ಯದಲ್ಲಿ ಎಲ್ಲಿಯೂ ಬೇಸರದ ಲವಲೇಶ ಇರದು, ಬದುಕಲ್ಲಿ ಆಸಕ್ತಿ ಹೊಂದಿರುತ್ತಾರೆ. ಜೊತೆಗೆ ಆಗಷ್ಟೆ ಪರಿಚಿತರಾದವಂತೆ ಆಸ್ಥೆಯಿಂದ ಪರಸ್ಪರ ಭಾವನೆಗಳನ್ನು ಉಳಿಸಿಕೊಂಡಿರುತ್ತಾರೆ.













Click it and Unblock the Notifications