ಹೆಂಡತಿ ಮಾತು ಕೇಳೋದು ತಪ್ಪಲ್ಲ ಕಣ್ರೀ

ಸಿಂಹ ರಾಶಿ ಪುರುಷ - ವೃಶ್ಚಿಕ ರಾಶಿ ಸ್ತ್ರೀ : ಸಿಂಹ ರಾಶಿ ಪುರುಷರು ಹಠಮಾರಿ ಸ್ವಭಾವದವರು. ಈ ಸಂಗತಿ ದಂಪತಿಗಳಲ್ಲಿ ಕೋಪತಾಪ ಹುಟ್ಟಲು ಕಾರಣ ಆಗುತ್ತದೆ. ಈ ಜೋಡಿಗಳ ಬಾಂಧವ್ಯ ಗಟ್ಟಿಯಾಗಿರಬೇಕಾದರೆ ಇಬ್ಬರಲ್ಲೂ ಪ್ರೀತಿಗಿಂತ ನಂಬಿಕೆ ಒಂದು ಪಟ್ಟು ಹೆಚ್ಚಾಗಿರಬೇಕು. ಈ ಸ್ತ್ರೀ ಮೌನವಾಗಿ ಕುಳಿತಿದ್ದಾಳೆ ಎಂದರೆ ಆಕೆ ಶಾಂತವಾಗಿದ್ದಾಳೆ ಎಂದು ಅರ್ಥವಲ್ಲ. ಮನದಲ್ಲಿ ಉಂಟಾಗಿರುವ ಬಿರುಗಾಳಿಯನ್ನು ಆಕೆ ಶಾಂತ ಮಾಡಿಕೊಳ್ಳುವ ಪ್ರಯತ್ನದಲ್ಲಿ ಆಕೆ ಇದ್ದಾಳೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಸಿಂಹ ರಾಶಿ ಪುರುಷರು ಸ್ವಲ್ಪ ಮನಸ್ಸು ಬಿಚ್ಚಿ ನೋಡಿದರೆ ಸಮಸ್ಯೆಯ ಅರಿವು ಉಂಟಾಗುತ್ತದೆ. ಅದು ಅವರ ಕೈಲಿ ಸಾಧ್ಯ. ಆಗ ಸಂಗಾತಿಯ ಬೇಸರದ ಆಳ ಅರಿತು ಅದರ ಪರಿಹಾರದತ್ತ ಗಮನ ನೀಡಬಹುದು. ಬದುಕಿಗಿಂತ ಅಹಂಕಾರ ದೊಡ್ಡದಲ್ಲ. ಹೆಂಡತಿಯ ಮಾತನ್ನು ಕೇಳುವುದು ತಪ್ಪಲ್ಲ. ಕನಿಷ್ಠ ಭಾಗವಾದರೂ ಅವರು ತಿಳಿಸಿದಂತೆ ನಡೆದರೆ ಜೀವನ ಚಂದದ ಗಾನ ಆಗುತ್ತದೆ.
ಸಿಂಹ ರಾಶಿ ಸ್ತ್ರೀ - ಧನಸ್ಸು ರಾಶಿ ಪುರುಷ : ಶಾಂತಮೂರ್ತಿ, ಧೈರ್ಯಶಾಲಿ ಆಲೋಚನೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸ್ವಭಾವ ಸಿಂಹ ರಾಶಿ ಸ್ತ್ರೀಯಲ್ಲಿರುವ ಮತ್ತೊಂದಷ್ಟು ಗುಣಗಳು. ತಾನು ಎಲ್ಲರಿಗಿಂತ ವಿಶೇಷ ಎಂದು ಆಕೆ ಭಾವಿಸುತ್ತಾಳೆ. ಸಿಕ್ಕಾಪಟ್ಟೆ ಆರಾಮದಾಯಕ ಬದುಕಿಗೆ ಈಕೆ ಆದ್ಯತೆ ನೀಡುತ್ತಾಳೆ. ತನ್ನ ಸಂಗಾತಿಯಿಂದ ಮಿತಿಮೀರಿದ ವಸ್ತುಗಳನ್ನು ಕೊಳ್ಳುವುದಕ್ಕೆ ಆದ್ಯತೆ ನೀಡುತ್ತಾಳೆ. ಪುರುಷ ತನ್ನ ಸಂಗಾತಿಯ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿರುತ್ತಾನೆ. ಅವಳಿಗಾಗಿ ಎಲ್ಲಾ ಬಗೆಯ ತ್ಯಾಗಕ್ಕೂ ಸಿದ್ಧ ನಾಗಿರುತ್ತಾನೆ. ಈ ಸ್ತ್ರೀಯರಿಗೆ ಕಾಣಿಕೆಗಳನ್ನು ಕೊಟ್ಟು ಗಂಡ ಒಲಿಸಿಕೊಳ್ಳಬಹುದು. ಕೋಪ-ತಾಪ ಸಿಟ್ಟು ಸೆಡವಿನಲ್ಲಿ ಈಕೆ ಇದ್ದರೆ ಆಗ ಅವಳನ್ನು ಶಾಂತ ಮಾಡಬಹುದಾದ ಅತ್ಯಂತ ಸುಲಭ ಸಾಧನ ಅವಳಿಗೆ ಗಿಫ್ಟ್ ಗಳನ್ನು ನೀಡುವುದು. ಪಾಕೆಟ್ ಖಾಲಿಯಾದರೂ ಮನೆಯಲ್ಲಿ ಶಾಂತಿಯು ತುಂಬುತ್ತದೆ, ನೆಮ್ಮದಿ ನೆಲೆಸುತ್ತದೆ. ಪ್ರಯತ್ನಿಸಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)












Click it and Unblock the Notifications