AI ಬಳಕೆಯಿಂದ ಮುಂದಿನ ದಿನಗಳಲ್ಲಿ ಹೊಸ ತಲೆನೋವು ಫಿಕ್ಸ್ ?!
ಜಗತ್ತಿನಲ್ಲಿ AI (Artificial intelligence) ತಂತ್ರಜ್ಞಾನವು ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ, ಇದರೊಂದಿಗೆ ಕೆಲವೊಂದು ಅಕ್ರಮಗಳು ಸಹ ಹೆಚ್ಚಾಗುವ ಆತಂಕ ಶುರುವಾಗಿದೆ. ಹೌದು ಇಂಟರ್‌ನೆಟ್ ಹುಡುಕಾಟ ಈಗ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಇದರೊಂದಿಗೆ ಎಐ ಬಳಕೆಯನ್ನು ಹೇಗೆ ಮಾಡಲಾಗುತ್ತಿದೆ. ಇದರಿಂದ ಯಾವೆಲ್ಲ ರೀತಿಯ ಸಮಸ್ಯೆಗಳು ಎದುರಾಗಲಿವೆ ಎನ್ನುವ ಬಗ್ಗೆ ತಜ್ಞರು ಗಂಭೀರವಾದ ಚರ್ಚೆ ನಡೆಸಿದ್ದಾರೆ. ಜನರ ಇಂಟರ್‌ನೆಟ್ ಹುಡುಕಾಟವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆಯೇ ಎನ್ನುವ ಗಂಭೀರ ಚರ್ಚೆ ನಡೆದಿದೆ. ಜನರಿಗೆ ಮೊಬೈಲ್ ಬಳಕೆಯಂತೆಯೇ ಎಐ ತಂತ್ರಜ್ಞಾನವೂ ಸಹ ಹೊಸತು. ಹೀಗಾಗಿ ಎಐನಲ್ಲಿ ಏನೇ ಹೊಸ ಪ್ರಯೋಗಗಳನ್ನು ಮಾಡಿದರೂ ಜನ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಎಐ ಬಳಕೆಯು ಲಾಭದಷ್ಟೇ ನಷ್ಟವನ್ನೂ ಹೊಂದಿದೆ ಎನ್ನುವ ಚರ್ಚೆ ಶುರುವಾಗಿದೆ. ಎಐನಿಂದ ಉದ್ಯೋಗಕ್ಕೆ ಮಾತ್ರವಲ್ಲ ಮತ್ತೊಂದಷ್ಟು ವಿಚಾರದಲ್ಲೂ ಆತಂಕ ಶುರುವಾಗಿದೆ.
ಎಐ ತಂತ್ರಜ್ಞಾನದಿಂದ ಜಗತ್ತು ಸಾಕಷ್ಟು ಅಭಿವೃದ್ಧಿ ಕಂಡಿದೆ. ದಿನಗಟ್ಟಲೆ ಮಾಡಬೇಕಾದ ಕೆಲಸವನ್ನು ಎಐ ಒಂದೇ ದಿನದಲ್ಲಿ ಮಾಡಿ ಮುಗಿಸುತ್ತಿದೆ. ಮೆಟಾ AIನ ಕೆಲವು ಬಳಕೆದಾರರಿಗೆ ಅರಿವಿಲ್ಲದೆಯೇ ಕೆಲವೊಂದು ಬದಲಾವಣೆಗಳು ಆಗುತ್ತಿವೆ ಎಂದು ಹೇಳಲಾಗುತ್ತಿದೆ. ಕೆಲವು ಪೋಸ್ಟ್ ಹಾಗೂ ಎಐ ಟ್ರಿಕ್ಸ್‌ಗಳನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು. ಇದರಿಂದ ಮುಂದಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಎಐ ತಂತ್ರಜ್ಞಾನದ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ.

ಎಐ ತಂತ್ರಜ್ಞಾನದಿಂದ ಬಳಕೆ ಮಾಡಿಕೊಂಡು ಮಾಡಲಾಗಿರುವ ಕೆಲವು ಪೋಸ್ಟ್‌ಗಳನ್ನು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕೆಲವರು ಹಂಚಿಕೊಳ್ಳುತ್ತಿದ್ದು ಇದು ಮುಂದಿನ ದಿನಗಳಲ್ಲಿ ಅಪಾಯ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಕೆಲವರು ಇಂಟರ್‌ವ್ಯೂಗಳಲ್ಲಿ ಮೋಸ ಮಾಡುವುದು ಹಾಗೂ ಪರೀಕ್ಷೆಗಳಲ್ಲಿ ಮೋಸ ಮಾಡಲು ಸಹಾಯ ತೆಗೆದುಕೊಳ್ಳಲು ಎಐ ಬಳಸುತ್ತಿದ್ದಾರೆ. ಸಂಶೋಧನೆ ಹಾಗೂ ವರದಿ ಮಂಡನೆಯಂತಹ ಕೆಲಸಗಳಿಗೆ ಸಂಪೂರ್ಣವಾಗಿ ಎಐ ಬಳಕೆ ಮಾಡಲಾಗುತ್ತಿದೆ. ಎಐ ಸಹಾಯಕ ಟೂಲ್ ಆಗುವ ಬದಲು ಎಐ ಎಲ್ಲಾ ಎನ್ನುವಂತಾಗಿದೆ. ಈ ಮೋಸದ ಜಾಲವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಎಐ ವಂಚನೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
ಪ್ರಶ್ನೆ ಪತ್ರಿಕೆ ಶೇರ್: ಇನ್ನು ಎಐನಲ್ಲಿ ಕೆಲವರು ಪ್ರಮುಖ ವಿಷಯಗಳನ್ನೇ ಶೇರ್ ಮಾಡಿಕೊಳ್ಳುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಕೆಲವೊಂದು ಪ್ರಮುಖ ಮಾಹಿತಿಗಳು ಎಐನಿಂದ ಸೋರಿಕೆ ಆಗಲಿದೆ ಎಂದೂ ಹೇಳಲಾಗುತ್ತಿದೆ. ಕೆಲವು ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯಂತಹ ಪ್ರಮುಖ ವಿಷಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಇದರಿಂದ ಗೌಪ್ಯ ವಿಚಾರಗಳು ಬಹಿರಂಗವಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಕೆಲವು ಪ್ರಶ್ನೆಗಳು ಖಾಸಗಿ ಸ್ವರೂಪದವಾಗಿದ್ದರೂ ಬಳಕೆದಾರರು ತಮ್ಮ ಹುಡುಕಾಟಗಳನ್ನು ಮೆಟಾ AI ಅಪ್ಲಿಕೇಶನ್ ಹಾಗೂ ವೆಬ್‌ಸೈಟ್‌ನಲ್ಲಿ ಸಾರ್ವಜನಿಕ ಡಿಸ್ಕವರ್ ಫೀಡ್‌ಗೆ ಹಂಚಿಕೊಳ್ಳಲಾಗುತ್ತಿದೆ. ಶಾಲೆ ಅಥವಾ ವಿಶ್ವವಿದ್ಯಾಲಯದ ಪರೀಕ್ಷೆಯ ಪ್ರಶ್ನೆಗಳ ಫೋಟೋಗಳನ್ನು ಅಪ್‌ಲೋಡ್ ಮಾಡುವ ಹಾಗೂ ಉತ್ತರಗಳನ್ನು ಮೆಟಾ ಎಐನಲ್ಲಿ ಹುಡುಕಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
-
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
SSLC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಒಟ್ಟು ಅಂಕ 625ರ ಬದಲು 525ಕ್ಕೆ ಇಳಿಕೆ, ತೃತೀಯ ಭಾಷೆಗೆ ಗ್ರೇಡ್ -
ಹಿಂದಿ ಹೆಚ್ಚು ಜನ ಮಾತನಾಡುವ ಭಾಷೆ, ವಿದ್ಯಾರ್ಥಿಗಳು ಎಲ್ಲ ಭಾಷೆ ಕಲಿಯಬೇಕು: ಶ್ರೀರಾಮುಲು -
SSLC ಪರೀಕ್ಷೆ ನಡೆಯುತ್ತಿರುವಾಗಲೇ ಅಂಕ 525ಕ್ಕೆ ಇಳಿಕೆ: ಸರ್ಕಾರದ ವಿರುದ್ಧ ಸುರೇಶ್ ಕುಮಾರ್ ವಾಗ್ದಾಳಿ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ












Click it and Unblock the Notifications