ಈ ಕಾರಣದಿಂದ ದೇಶದಲ್ಲಿ ಉದ್ಯೋಗಿಗಳಿಗೆ ಸಂಬಳ ಕಟ್, ಬಡ್ತಿಯೂ ಡೌಟ್!
ಎಐ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಎಐ ಬಳಕೆಯಿಂದ ಉದ್ಯೋಗ ನಷ್ಟ ಹಾಗೂ ಸಂಬಳ ಕಡಿಮೆ ಆಗಬಹುದು ಎನ್ನುವ ಆತಂಕಗಳು ನಿಜವಾಗಲು ಪ್ರಾರಂಭವಾಗಿದೆ. ಎಐ ಬಳಕೆಯಿಂದ ಲಾಭ ನಷ್ಟ ಎರಡೂ ಇದೆ. ಎಐ ಬಳಕೆ ಹೆಚ್ಚಾದಂತೆಲ್ಲವೂ ಹೊಸ ಆವಿಷ್ಕಾರಗಳು ಶುರುವಾಗಿವೆ. ಅಲ್ಲದೇ ಎಐ ಬಳಕೆ ಮಾಡುವುದರಿಂದ ಈಗಾಗಲೇ ಹಲವು ಕೆಲಸಗಳು ಸುಲಭವಾಗಿವೆ. ಇದೀಗ ಎಐ ಬಳಕೆಯಿಂದಾಗಿ ಕೆಲಸಕ್ಕೆ ಆಯ್ಕೆಯಾಗುವ ಪ್ರಕ್ರಿಯೆ, ಕೆಲಸ ಹಾಗೂ ಸಂಬಳದ ಮೇಲೆ ಪರಿಣಾಮ ಎದುರಾಗಿದೆ ಎಂದು ವರದಿಯೊಂದು ಉಲ್ಲೇಖಿಸಿದೆ. ಎಐನಿಂದ ಉದ್ಯೋಗ ವಲಯದ ಮೇಲೆ ಯಾವ ರೀತಿಯ ಪರಿಣಾಮ ಎನ್ನುವ ವಿವರ ನೋಡೋಣ.
ಎಐ ಬಳಕೆ ಹೆಚ್ಚಾದ ಮೇಲೆ ಉದ್ಯೋಗ ವಲಯದ ಮೇಲೆ ಭಾರೀ ಪರಿಣಾಮ ಬೀರಿರುವುದು ಖಚಿತವಾಗಿದೆ. ಎಐ ಬಳಕೆ ಈಗ ಹೆಚ್ಚಳವಾಗಿದೆ. ಆದರೆ, ಕಳೆದ 10 ವರ್ಷಗಳಿಂದ ಎಐ ಸದ್ದಿಲ್ಲದೆ ಡೆವಲಪ್ ಆಗಿದೆ. ನಗರ ಪ್ರದೇಶಗಳಲ್ಲಿ ಎಐ ಬಳಕೆ ಹೆಚ್ಚಾದ ಮೇಲೆ ಕಳೆದ ಐದು ವರ್ಷಗಳಿಂದಲೂ ಸಂಬಳ ಕಡಿಮೆಯಾಗುತ್ತಿದೆ ಎಂದು ಹೇಳಲಾಗಿದೆ. ತಂತ್ರಜ್ಞಾನದಲ್ಲಿ (ಕೋಡಿಂಗ್‌ನಂತಹ), ಕ್ರಿಯೇಟಿವಿಟಿ, ತಾಂತ್ರಿಕ ಸಹಾಯವಾಣಿ ಹಾಗೂ ಅನುವಾದ ಸೇರಿದಂತೆ ವಿವಿಧ ಪ್ರಯೋಗಗಳಲ್ಲಿ ಎಐ ಬಳಕೆ ಮಾಡಲಾಗುತ್ತಿದೆ.

AI ಅಥವಾ GenAI ಹೆಚ್ಚು ವೇಗವಾಗಿ ಮತ್ತು ನಿಖರವಾಗಿ ನಿರ್ವಹಿಸಬಹುದಾದ ಕೆಲಸಗಳಿಗೆ ಎಐ ಬಳಕೆ ಮಾಡಲಾಗುತ್ತಿದೆ. ಎಐನಲ್ಲಿ ದಿನದಿಂದ ದಿನಕ್ಕೆ
AI ಡೇಟಾ ಬಳಕೆಯಲ್ಲೂ ಮಹತ್ವದ ಬದಲಾವಣೆಗಳು ಆಗುತ್ತಿವೆ. ಇದರಿಂದ ಹೊಸ ಉದ್ಯೋಗ ವರ್ಗಗಳಿಗೆ ಕಾರಣವಾಗಬಹುದು. ಆದರೆ, ಉದ್ಯೋಗ ಕಡಿತಕ್ಕೂ ಇದು ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. GenAI ವೇಗವಾಗಿ ಬದಲಾಗುತ್ತಿದ್ದು, ಇದು ಕೆಲಸದ ಭಾಗವಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.
ಪ್ಲೇಸ್‌ಮೆಂಟ್ ಸೈಕಲ್ 2025 ಅಧ್ಯಯನದ ಪ್ರಕಾರ ಶೇ.69% ರಷ್ಟು ಎಂಜಿನಿಯರಿಂಗ್ ವಿದ್ಯಾರ್ಥಿಗಳು AI ಕಾರಣದಿಂದಾಗಿ ತಮ್ಮ ಉದ್ಯೋಗಗಳು ಅಪಾಯದಲ್ಲಿದೆ ಎನ್ನುವುದನ್ನು ಒಪ್ಪುತ್ತಾರೆ. ಎಂಜಿಯರ್‌ಗಳು ಮೂರ್ನಾಲ್ಕು ದಿನಗಳ ಕಾಲ ಮಾಡಬಹುದಾದ ಕೆಲಸಗಳನ್ನು ಎಐ ಕ್ಷಣಾರ್ಧದಲ್ಲಿ ಮಾಡಿ ಮುಗಿಸಿಬಿಡಬಹುದು ಎನ್ನುವುದು ಈ ವಿದ್ಯಾರ್ಥಿಗಳನ್ನು ಕಾಡುತ್ತಿರುವ ಪ್ರಮುಖ ಆತಂಕವಾಗಿದೆ. QA ಪರೀಕ್ಷೆ, ಡೇಟಾ ಸಂಸ್ಕರಣೆಯಲ್ಲಿ ಎಐ ಬಳಕೆಯು ಪ್ರಗತಿ ಸಾಧಿಸಿದೆ ಎಂದು ಹೇಳಲಾಗುತ್ತಿದೆ.
ಎಐ ಅಪಾಯವಲ್ಲ ಅದರಿಂದ ಉದ್ಯೋಗ ಸೃಷ್ಟಿ ಆಗಲಿದೆ ಎಂದು ಹೇಳುತ್ತಿರುವಾಗಲೇ ಈ ವರದಿಗಳು ಸಹಜವಾಗಿಯೇ ವಿದ್ಯಾರ್ಥಿಗಳು ಹಾಗೂ ಕೆಲಸ ಹುಡಕಲು ಪ್ರಾರಂಭಿಸುತ್ತಿರುವ ಯವಕರಲ್ಲಿ ಆತಂಕವನ್ನು ಮೂಡಿಸಿದೆ. ಕೆಲವು ಪ್ರಮುಖ ಸಂಸ್ಥೆಗಳು ತಮ್ಮ ಕ್ಯಾಂಪಸ್ ನೇಮಕಾತಿ ಮತ್ತು ಕೇಡರ್ ನಿರ್ವಹಣಾ ಪ್ರಕ್ರಿಯೆಗಳಲ್ಲಿ AI ಅಳವಡಿಸಿಕೊಳ್ಳುತ್ತಿವೆ ಎನ್ನಲಾಗಿದೆ. ಹೀಗಾಗಿ ಉದ್ಯೋಗ ಮಾತ್ರವಲ್ಲ ಶಿಕ್ಷಣ ವಲಯದಲ್ಲೂ ಎಐ ಬಳಕೆ ಹೆಚ್ಚಾಗಿದೆ.
ಗ್ರಾಹಕರ ಅಭಿಪ್ರಾಯ ಸಂಗ್ರಹಕ್ಕೆ ಎಐ ಬಳಕೆ: ವಿವಿಧ ಸಂಸ್ಥೆಗಳು ಗ್ರಾಹಕರ ಸೇವೆಯನ್ನು ಉತ್ತಮಪಡಿಸಿಕೊಳ್ಳುವ ಉದ್ದೇಶದಿಂದ ಎಐ ಬಳಕೆ ಮಾಡಿಕೊಳ್ಳುತ್ತಿವೆ ಎಂದು ಹೇಳಲಾಗಿದೆ. ಸಹಾಯವಾಣಿ ಹಾಗೂ ಅಭಿಪ್ರಾಯ ಸಂಗ್ರಹಕ್ಕೆ ಎಐ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.












Click it and Unblock the Notifications