Microsoft Layoff: ಮೈಕ್ರೋಸಾಫ್ಟ್ ಕಂಪನಿಯಲ್ಲಿ ಎಐ ಬಳಕೆ, 15000 ನೌಕರರ ವಜಾ... Artificial Intelligence
Layoff News: ಐಟಿ ವಲಯದಲ್ಲಿ ವಿವಿಧ ಕಂಪನಿಗಳಿಗೆ ದೈತ್ಯ 'ಮೈಕ್ರೊಸಾಫ್ಟ್' ಸಂಸ್ಥೆಯು ಕೃತಕ ಬುದ್ಧಿಮತ್ತೆ (AI) ಮೇಲೆ ಹೆಚ್ಚು ಒಲವು ತೋರ್ಪಡಿಸುತ್ತಿದೆ. ಈ ಹಿಂದಿನಿಂದ ಸಾಕಷ್ಟು ನೌಕರರನ್ನು ವಜಾಗೊಳಿಸಿದ್ದ ಕಂಪನಿಗಳ ಪೈಕಿ ಮೈಕ್ರೋಸಾಫ್ಟ್ ಸಹ ಒಂದಾಗಿದೆ. ಎಐ ತಂತ್ರಜ್ಞಾನವನ್ನು ಕಂಪನಿ ಕಾರ್ಯಾಚರಣೆ ಭಾಗವಾಗಿಸಲು ಮುಂದಾದ ಪರಿಣಾಮ ಇಲ್ಲಿನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ 15,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದೊಂದು ಅತ್ಯಂತ ದೊಡ್ಡ ಉದ್ಯೋಗ ವಜಾ ಪ್ರಕ್ರಿಯೆಯಾಗಿದೆ.
ಉದ್ಯೋಗಿಗಳ ಜಾಗದಲ್ಲಿ ಮೈಕ್ರೋಸಾಫ್ಟ್ ಕಂಪನಿಯು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಸ್ಥಾಪಿಸುತ್ತಿದೆ. ವಿಶಾಲ ಯೋಜನೆಯ ಭಾಗವಾಗಿ ಎಐ ತಂತ್ರಜ್ಞಾನ ಅಳವಡಿಕೆ ಮಾಡುತ್ತಿದೆ. ಹೀಗಾಗಿ ಕೆಲವು ವರ್ಷಗಳಿಂದಲೂ ವಜಾಗೊಳಿಸುತ್ತಾ ಬಂದಿಎದೆ. ಈ ಹಿಂದಿನ ವರ್ಷಗಲ್ಲಿ ಸುಮಾರು 9,000 ಕಾರ್ಮಿಕರು ಮೈಕ್ರೋಸಾಫ್ಟ್ ನಿಂದ ಹೊರ ನಡೆದಿದ್ದರು. ಇದೀಗ ಮತ್ತೆ ಉದ್ಯೋಗ ವಜಾ ಮಾಡಲಾಗಿದೆ ಎಂದು ವರದಿ ಆಗಿದೆ.

ಯಾವೆಲ್ಲ ವಿಭಾಗಗಳ ನೌಕರರು ವಜಾ..
ಮೈಕ್ರೋಸಾಫ್ಟ್ ನ ಎಕ್ಸ್‌ಬಾಕ್ಸ್ ಗೇಮಿಂಗ್ ಘಟಕ ಮತ್ತು ಸಾಂಪ್ರದಾಯಿಕ ಮಾರಾಟ ವಿಭಾಗಗಳ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಎಐ ತಂತ್ರಜ್ಞಾನ ಜೊತೆಗೆ ಕಂಪನಿ ತನ್ನ ಕಾರ್ಯಾಚರಣೆ ಮುಂದುವರಿಸಲಿದೆ. ಹೀಗಾಗಿ ಕಾರ್ಯಪಡೆ ಮರುರೂಪಿಸುವ ಉದ್ದೇಶದಿಂದ ಹೀಗೆ ಕೆಲಸ ಕಡಿತಗೊಳಿಸಿದೆ.
ಮೈಕ್ರೋಸಾಫ್ಟ್ ತನ್ನ ಕಂಪನಿ ಪ್ರತಿಯೊಬ್ಬ ಉದ್ಯೋಗಿಗಳಿಗೆ ಎಐ ತಂತ್ರಜ್ಞಾನ ಕಲಿಕೆ ಕಡ್ಡಾಯಗೊಳಿಸಿದೆ. ಎಐ ತಂತ್ರಜ್ಞಾನದ ಬಳಕೆ, ಪ್ರಯೋಜನೆ ಪಡೆಯುವ ಕೌಶಲ್ಯ ಕಲಿಯುವಂತೆ ತಿಳಿಸಿದೆ. ಕಂಪನಿ ಡೆವಲಪರ್ ವಿಭಾಗದ ಅಧ್ಯಕ್ಷೆ ಜೂಲಿಯಾ ಲಿಯುಸನ್ ಅವರು, AI ಬಳಕೆ ಇನ್ನು ಮುಂದೆ ಐಚ್ಛಿಕವಲ್ಲ, ಇದು ಪ್ರತಿ ಹಂತದಲ್ಲೂ ಬೇಕಾದ ಅತ್ಯಗತ್ಯ ತಂತ್ರಜ್ಞಾನವಾಗಿದೆ ಎಂದು ನೌಕರರಿಗೆ ತಿಳಿಸಿದ್ದಾರೆ.
ಎಐನಿಂದ ಕಂಪನಿಗೆ ಭಾರೀ ಲಾಭ
ವಜಾ ಮಾಡಿ ಕೇವಲ ಹಣ ಉಳಿಸಲು ಮಾತ್ರವೇ ಅಲ್ಲದೇ AI ಮೂಲ ಸೌಕರ್ಯದಲ್ಲಿ ಮೈಕ್ರೋಸಾಫ್ಟ್ ಹೆಚ್ಚು ಹೂಡಿಕೆ ಮಾಡಿದೆ. ಆ ಬಂಡವಾಳ ಸಾಕಷ್ಟು ಉಳಿತಾಯ ಮಾಡಿದೆ. ಕಾಲ್ ಸೆಂಟರ್‌ಗಳಲ್ಲಿ AI ಆಧಾರಿತ ಪರಿಹಾರ ಕಂಡುಕೊಂಡು ಮೈಕ್ರೋಸಾಫ್ಟ್ ಕಂಪನಿಗೆ $500 ಮಿಲಿಯನ್ ಗೂ ಹೆಚ್ಚು ಉಳಿತಾಯವಾಗಿದೆ. ಕೋಡಿಂಗ್ ಸ್ವಯಂಚಾಲಿತಗೊಳಿಸಿದೆ. ಅನೇಕ ಎಐ ಚಾಲಿತ ಕೆಲಸಗಳಿಗೆ ಕಂಪನಿ ಚಾಲನೆ ನೀಡಿ ಅಧಿಕ ಉಳಿತಾಯ, ಲಾಭ ಮಾಡಿಕೊಂಡಿದೆ ಎಂದು ಸಿಇಒ ಮಾಹಿತಿ ಹಂಚಿಕೊಂಡಿದ್ದಾರೆ.
AI ಕೌಶಲ್ಯಗಳು ನಿರ್ಣಾಯಕ
ತಂತ್ರಜ್ಞಾನದ ಇಂದಿನ ಯುಗದಲ್ಲಿ ನೇಮಕಾತಿ ಮತ್ತು ಉದ್ಯೋಗಿ ಕಾರ್ಯಕ್ಷಮತೆಗೆ ಮೈಕ್ರೋಸಾಫ್ಟ್ ಉನ್ನತ ಮಾನದಂಡ ಸೃಷ್ಟಿಸುತ್ತಿದೆ. ತನ್ನ ಉದ್ಯೋಗಿಗಳಿಗೆ ಕಂಪನಿ ಸ್ಪಷ್ಟ ಸಂದೇಶ ರವಾನಿಸಿದೆ. AI ಕೌಶಲ್ಯ ಕಲಿಯುವುದು ವೃತ್ತಿ ಬೆಳವಣಿಗೆ ಮತ್ತು ಉದ್ಯೋಗ ಭದ್ರತೆಗೆ ನಿರ್ಣಾಯಕವಾಗಿದೆ. ಆದ್ದರಿಂದ ತಂತ್ರಜ್ಞಾನದ ಅಗತ್ಯ ಕೌಶಲ್ಯಕ್ಕೆ ಒತ್ತು ನೀಡುತ್ತಿದೆ. ಕಂಪನಿಯಲ್ಲಿ ಪರಿಣಾಮಕಾರಿಯಾಗಿ ಎಐ ಜಾರಿಗೆ ಮುಮದಾಗಿದೆ.












Click it and Unblock the Notifications