Global AI Summit: ಎಐ ಕ್ಷೇತ್ರದಲ್ಲಿ ಭಾರತದಿಂದ ಹೊಸ ಕ್ರಾಂತಿ!
Global AI Summit: ಕೃತಕಬುದ್ಧಿಮತೆಯಲ್ಲಿ ಮಹತ್ವದ ಬದಲಾವಣೆಗಳು ಆಗಿವೆ. ಎಐ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಆಗುತ್ತಿರುವ ನಡುವೆಯೇ ಭಾರತದಲ್ಲೂ ಎಐ ಬಳಕೆ ಹೆಚ್ಚಾಗಬೇಕು ಹಾಗೂ ಭಾರತವೂ ಚೀನಾ ಮತ್ತು ಅಮೆರಿಕದಂತೆ ಇನ್ನಷ್ಟು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮೂರು ವರ್ಷಗಳ ಹಿಂದೆ ChatGPT ಕೃತಕ ಬುದ್ಧಿಮತ್ತೆ (AI) ಪ್ರಯೋಗಿಕವಾಗಿ ಬಳಕೆ ಮಾಡಲಾಗಿತ್ತು. ಸಂಶೋಧನಾ ಪ್ರಯೋಗಾಲಯಗಳಿಂದ ಇದೀಗ ಇದು ಜನ ಸಾಮಾನ್ಯರ ಬಳಕೆಯ ವರೆಗೆ ಅಭಿವೃದ್ಧಿಯಾಗಿದೆ. AI ಕುರಿತು ಮೂರು ಜಾಗತಿಕ ಸಭೆಗಳು ತ್ವರಿತವಾಗಿ ನಡೆದಿವೆ. ನವದೆಹಲಿ ಫೆಬ್ರವರಿ 2026ರಲ್ಲಿ AI ಇಂಪ್ಯಾಕ್ಟ್ ಶೃಂಗಸಭೆಯನ್ನು ಆಯೋಜಿಸಲಾಗಿದೆ. ಇದು ಭಾರತದ ಎಐ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ ಎಂದೇ ಹೇಳಲಾಗುತ್ತಿದೆ.
ಭಾರತವು ಸಹ ಎಐನಲ್ಲಿ ಮಹತ್ವದ ಬದಲಾವಣೆಗಳು ಆಗುತ್ತಿವೆ. ವಿಶ್ವದಾದ್ಯಂತ ಎಐ ವಿಚಾರದಲ್ಲಿ ಎಲ್ಲಾ ದೇಶಗಳು ಒಂದಾಗುತ್ತಿಲ್ಲ ಎನ್ನುವ ಮಾತಿದೆ. ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧವು ಇನ್ನೂ ಮುಂದುವರಿದಿದೆ. ಎಲ್ಲಾ ದೇಶಗಳನ್ನು ಒಂದುಗೂಡಿಸುವ ಉದ್ದೇಶಿಸಲಾಗಿದ್ದ ಪ್ಯಾರಿಸ್ AI ಶೃಂಗಸಭೆ (ಫೆಬ್ರವರಿ 2025) ಸಹ ಸಹಕಾರವಾಗಲಿ.

ಇನ್ನು 2026ನೇ ಸಾಲಿನ ಎಐ ಶೃಂಗಸಭೆಗೆ ಸಂಬಂಧಿಸಿದಂತೆ ಭಾರತದ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಜೂನ್‌ನಲ್ಲಿ MyGov ಮೂಲಕ ರಾಷ್ಟ್ರವ್ಯಾಪಿ ಸಮಾಲೋಚನೆಯನ್ನು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು, ಸಂಶೋಧಕರು, ಸ್ಟಾರ್ಟ್‌ಅಪ್‌ಗಳು ಹಾಗೂ ಗುಂಪುಗಳು ತಮ್ಮ ಐಡಿಯಾಗಳನ್ನು ಹಂಚಿಕೊಂಡಿದ್ದಾರೆ. ಭಾರತವು ಎಐ ವಿಚಾರದಲ್ಲಿ ವಿವಿಧ ದೇಶಗಳನ್ನು ಒಂದೇ ವೇದಿಕೆಗೆ ತರುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಎಐ ಕ್ರಾಂತಿಯಲ್ಲಿ ಭಾರತವೂ ಮುಂಚೂಣಿಯಲ್ಲಿ ಸಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಭಾರತವು ಎಐ ಬಳಕೆಯನ್ನು ಬಂಡವಾಳವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇರಿಸುವುದಕ್ಕೆ ಮುಂದಾಗಿದೆ. ಭಾರತವು ಈಗಾಗಲೇ ಐದು ಪ್ರಮುಖ ಕ್ಷೇತ್ರಗಳಲ್ಲಿ ಡಿಜಿಟಲ್ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಆಧಾರ್ ಒಂದು ಶತಕೋಟಿಗೂ ಹೆಚ್ಚು ಜನರಿಗೆ ಸುರಕ್ಷಿತವಾದ ಗುರುತನ್ನು ಒದಗಿಸುತ್ತದೆ. ಏಕೀಕೃತ ಪಾವತಿ ಇಂಟರ್ಫೇಸ್ (UPI) ಸೆಕೆಂಡುಗಳಲ್ಲಿ ಹಣ ವರ್ಗಾವಣೆ ಮಾಡ ಬಹುದಾಗಿದೆ. 2026ರಲ್ಲಿ ನಡೆಯುವ ಶೃಂಗಸಭೆಯಲ್ಲಿ ಈ ವಿಚಾರಗಳು ಹಾಗೂ ಎಐ ಹೊಸ ತಂತ್ರಾಂಶ ಸಹಕಾರಿ ಆಗಲಿವೆ ಎಂದು ಹೇಳಲಾಗಿದೆ.
ಪ್ರಮುಖ ವಿಶ್ವವಿದ್ಯಾಲಯವು ಗ್ರಾಮೀಣ ಹುಡುಗಿಯರಿಗೆ ಉಚಿತ AI ಕೋರ್ಸ್‌ಗಳನ್ನು ನೀಡುವ ಸಾಧ್ಯತೆ. ಸರ್ಕಾರವು AI ಬಳಸಿಕೊಂಡು ಅಗತ್ಯ ಆರೋಗ್ಯ ಸಲಹೆಯನ್ನು ಸ್ಥಳೀಯ ಭಾಷೆಗಳಿಗೆ ಅನುವಾದಿಸುವುದಕ್ಕೂ ಅವಕಾಶವಿದೆ. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಭಾಷಾ ಸಮಸ್ಯೆಯು ಬಹುದೊಡ್ಡ ಸಮಸ್ಯೆ ಆಗಿದೆ. ಅಲ್ಲದೇ ಭಾರತದಲ್ಲಿ ಹಲವು ಸಮಸ್ಯೆಗಳಿವೆ. ಈ ಸಮಸ್ಯೆಗಳಿಗೆ ಎಐ ಮೂಲಕ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಿದೆ ಎಂದು ಹೇಳಲಾಗಿದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಎಐನಲ್ಲಿ ಭಾರತವು ಹೊಸ ಕ್ರಾಂತಿ ಸೃಷ್ಟಿ ಮಾಡಲಿದೆ ಎಂದೇ ಹೇಳಲಾಗುತ್ತಿದೆ.












Click it and Unblock the Notifications