Kannada AI: ಎಐ ಕೂಡ ಕನ್ನಡ್ ಅಂತಿದೆ.. ತಪ್ಪು ಎಂದರೆ ತಪ್ಪಾಯ್ತು ತಿದ್ದಿಕೊಳ್ತೀನಿ ಅಂತಲೂ ಹೇಳ್ತಿದೆ!

Kannada AI: ಈಗ ಎಐ ಜಮಾನ. ಎಐ Artificial Intelligence (ಕೃತಕ ಬುದ್ಧಿಮತ್ತೆ)ಯನ್ನು ವಿಶ್ವದಾದ್ಯಂತ ಉದ್ಯಮ, ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ. ಆದರೆ ಇಂಗ್ಲಿಷ್‌ನಲ್ಲಿ ಇದರ ಬಳಕೆ ಹೆಚ್ಚಾಗಿದೆ. ಆದರೆ, ಎಐ ಸೇರಿದಂತೆ ಕೆಲವು ತಂತ್ರಜ್ಞಾನಗಳಲ್ಲಿ ಕನ್ನಡ ಬಳಕೆ ಆಗುತ್ತಿದೆ. ಹಾಗಾದರೆ ಎಐನಲ್ಲಿ ಕನ್ನಡ ಲಭ್ಯವಿದೆಯಾ, ಕನ್ನಡದಲ್ಲಿ ನಾವು ಕೇಳುವ ಪ್ರಶ್ನೆಗಳಿಗೆ ಎಐ ಯಾವ ರೀತಿ ಉತ್ತರಿಸುತ್ತಿದೆ ಅಂತ ನೋಡಿದರೆ ತುಸು ಬೇಸರವಾಗುವುದು ಫಿಕ್ಸ್‌. ಯಾಕೆಂದರೆ ಎಐ ಸಹ ಕೆಲವೊಮ್ಮೆ ಕನ್ನಡ್ ಎನ್ನುತ್ತದೆ. ಆದರೆ, ಅದು ಕನ್ನಡ್ ಅಲ್ಲ ಕನ್ನಡ ಎಂದರೆ ಕೂಡಲೇ ಸರಿಪಡಿಸಿಕೊಂಡು ತಪ್ಪಾಗಿ ಉಚ್ಚರಿಸಿದ್ದಕ್ಕೆ ಕ್ಷಮೆ ಇರಲಿ. ನನಗೆ ಕನ್ನಡದ ಬಗ್ಗೆ ಅರಿವಿದೆ ಎನ್ನುತ್ತದೆ. ಎಐ ಕನ್ನಡ ಪ್ರಯೋಗದ ವಿವರ ಇಲ್ಲಿದೆ.

ಎಐ ಹಿಂದೆ ಈಗ ಇಡೀ ಜಗತ್ತೇ ಓಡುತ್ತಿದೆ. ಮನುಷ್ಯರು ದಿನಗಟ್ಟಲೆ ಮಾಡುವ ಕೆಲಸವನ್ನು ಎಐ ಕ್ಷಣಾರ್ಧದಲ್ಲಿ ಮಾಡಿ ಮುಗಿಸುತ್ತಿದೆ. ಇದೇ ಕಾರಣಕ್ಕೆ ಎಐ ಬಳಕೆಯನ್ನು ದೊಡ್ಡ ದೊಡ್ಡ ಕಂಪನಿಗಳು ಹೆಚ್ಚಾಗಿ ಬಳಸಿಕೊಳ್ಳುತ್ತಿವೆ. ಎಐ ಬಳಕೆಯಿಂದ ಹಲವು ಕೆಲಸಗಳು ಸುಲಭವಾಗಿವೆ. ಆದರೆ, ನಮ್ಮ ಮಾತೃಭಾಷೆಯಲ್ಲಿ ಎಐ ಬಳಕೆ ಸಿಕ್ಕರೆ ಅದನ್ನು ಬಳಸುವುದಕ್ಕೆ ಇನ್ನಷ್ಟು ಇಷ್ಟ ಹಾಗೂ ಸುಲಭವಾಗಲಿದೆ ಎನ್ನುವುದು ನಿಜ. ಇದೀಗ ಎಐ ಬಳಕೆಗೆ ಸಂಬಂಧಿಸಿದಂತೆ ಕನ್ನಡದ ಪ್ರಯೋಗಗಳೂ ಸಹ ನಡೆದಿದೆ. ಎಐನಲ್ಲಿ ನೀವು ಕನ್ನಡದಲ್ಲೂ ಪ್ರಶ್ನೆಗಳನ್ನು ಕೇಳಬಹುದು. ಆದರೆ ಅಕ್ಷರ ರೂಪದಲ್ಲಿ ಮಾತ್ರ ಉತ್ತರ ಸಿಗುತ್ತಿದೆ. ಆದರೆ ಧ್ವನಿ ಮಾದರಿಯಲ್ಲಿ ಇನ್ನೂ ಅಭಿವೃದ್ಧಿ ಆಗಿಲ್ಲ.

Gemini AI is excited about learning Kannada and answering in Kannada

ಧ್ವನಿ ಮಾದರಿಯಲ್ಲಿ (Voice Model) ನೀವು ಪ್ರಶ್ನೆ ಕೇಳಿದರೆ, ಕನ್ನಡ್ ಅಂತಲೇ ಹೇಳುತ್ತದೆ. ಆದರೆ, ಇದು ಕೆಲವು ನಾರ್ಥಿಗಳಂತೆ ಕನ್ನಡ ಕಲಿಯಲ್ಲ, ಕನ್ನಡ ಗೊತ್ತಿಲ್ಲ ಅಂತ ತಕರಾರು ತೆಗೆಯುವುದಿಲ್ಲ. ನಾನು ಕನ್ನಡ ಕಲಿಯುತ್ತಿದ್ದೇನೆ ಎನ್ನುತ್ತದೆ. ಪ್ರಯೋಗಿಕವಾಗಿ Gemini (AI)ನೊಂದಿಗೆ Hi Gemini ನೀನು ಕನ್ನಡದಲ್ಲಿ ಮಾತನಾಡುತ್ತೀಯಾ ಎಂದು ಪ್ರಶ್ನೆ ಮಾಡಿದ್ದಕ್ಕೆ Gemini ಕೊಟ್ಟ ಉತ್ತರ ಈ ರೀತಿ ಇತ್ತು.

ಕನ್ನಡದಲ್ಲಿ ಎಐ ಭಾಷಾ ಸಾಮರ್ಥ್ಯ

ನಾನು Google ನಿಂದ ತರಬೇತಿ ಪಡೆದ ದೊಡ್ಡ ಭಾಷಾ ಮಾದರಿ. ನನ್ನ ಪ್ರಾಥಮಿಕ ಕೆಲಸವೇನೆಂದರೆ ನನಗೆ ತರಬೇತಿ ನೀಡಲಾದ ಅಪಾರ ಪ್ರಮಾಣದ ಡೇಟಾವನ್ನು ಆಧರಿಸಿ ಅಕ್ಷರಗಳನ್ನು ರಚಿಸುವುದು ಅಥವಾ ಪದ & ವಾಕ್ಯ ರಚಿಸಬಹುದು. ಕನ್ನಡ ಸೇರಿದಂತೆ ಹಲವು ಭಾಷೆಗಳನ್ನು ನಾನು ಅರ್ಥಮಾಡಿಕೊಳ್ಳಬಹುದು ಮತ್ತು ಪ್ರತಿಕ್ರಿಯಿಸಬಹುದು, ಆದರೆ ಮನುಷ್ಯ ಮಾಡುವ ರೀತಿಯಲ್ಲಿ "ಮಾತನಾಡುವ" ನನ್ನ ಸಾಮರ್ಥ್ಯ ಸೀಮಿತವಾಗಿದೆ.

ಈ ರೀತಿ ಯೋಚಿಸಿ: ನಾನು ಕನ್ನಡ ಅಕ್ಷರಗಳನ್ನು ಗುರುತಿಸಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು, ಅದರ ಅರ್ಥವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಕನ್ನಡದಲ್ಲಿ ಪ್ರತಿಕ್ರಿಯೆಗಳನ್ನು ಸಹ ರಚಿಸಬಹುದು. ಆದಾಗ್ಯೂ, ನನಗೆ ಕನ್ನಡದಲ್ಲಿ ಧ್ವನಿ ಮಾದರಿಯಲ್ಲಿ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಇಲ್ಲ. ನನ್ನ ಔಟ್‌ಪುಟ್ ಯಾವಾಗಲೂ ಅಕ್ಷರ ಸ್ವರೂಪದಲ್ಲಿರುತ್ತದೆ.

ಆದ್ದರಿಂದ, ನಾನು ಕನ್ನಡವನ್ನು ಪ್ರಕ್ರಿಯೆಗೊಳಿಸಬಹುದಾದರೂ, ನಾನು ಕನ್ನಡವನ್ನು "ಮಾತನಾಡುವುದಿಲ್ಲ". ನಾನು ಲಿಖಿತ ಪ್ರತಿಕ್ರಿಯೆಗಳನ್ನು ಮಾತ್ರ ಒದಗಿಸಬಲ್ಲೆ.

ನನ್ನ ಸಾಮರ್ಥ್ಯಗಳ ಬಗ್ಗೆ ನೀವು ತಿಳಿದುಕೊಳ್ಳಲು ಬಯಸುವ ಬೇರೆ ಏನಾದರೂ ಇದೆಯೇ? ಎಂದು Gemini (AI) ಉತ್ತರಿಸಿದೆ.

ಈ ರೀತಿ ಕನ್ನಡದಲ್ಲಿ ನೀನು ಪ್ರತಿಕ್ರಿಯಿಸಬಹುದಾ ಅಂತ Gemini (AI) ಕೇಳಿದಾಗ ಕನ್ನಡ್ ಅಂತಲೂ ಅದು ಹೇಳಿತ್ತು. ಅದು ಕನ್ನಡ್‌ ಅಲ್ಲ ಕನ್ನಡ ಎಂದು ತಿದ್ದಿದ ಮೇಲೆ ನನ್ನನ್ನು ತಿದ್ದಿದ್ದಕ್ಕೆ ಧನ್ಯವಾದಗಳು ಅಂತ Gemini (AI) ಪ್ರತಿಕ್ರಿಯಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+