ಎಐ ಬಳಸಿಕೊಂಡು ನಕಲಿ ವೆಬ್‌ಸೈಟ್ ಸೃಷ್ಟಿ: ಈ ವೆಬ್‌ಸೈಟ್ ಬಳಕೆ ಮಾಡುವ ಮುಂಚೆ ಹುಷಾರ್!
ಎಐ ಬಳಕೆಯ ಅಪಾಯದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿರುವ ಸಂದರ್ಭದಲ್ಲಿಯೇ ಎಐ (artificial intelligence) ಕೃತಕ ಬುದ್ಧಿಮತ್ತೆಯನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವುದು ಬಹಿರಂಗವಾಗಿದೆ. ಎಐ ಬಳಕೆಯನ್ನು ಕ್ರೈಮ್‌ಗಳಿಗೆ ಬಳಕೆ ಮಾಡುತ್ತಿರುವುದು ಬಹಿರಂಗವಾಗಿದೆ. ಕ್ರೈಮ್ ಮತ್ತು ಮತ್ತೊಂದು ವೈಬ್‌ಸೈಟ್‌ಗಳಿಂದ ಮಾಹಿತಿ ಕಳವು ಮಾಡುವುದಕ್ಕೆ ಎಐ ಬಳಸಲಾಗುತ್ತಿದೆ ಎನ್ನುವ ಗಂಭೀರ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. ಇದು ಭಾರೀ ಆಘಾತಕಾರಿ ಬೆಳವಣಿಗೆಗಳಲ್ಲೊಂದು ಎಂದು ಹೇಳಲಾಗಿದೆ. ಈ ಬೆಳವಣಿಗೆಯು ಎಐ ವಲಯದಲ್ಲಿ ಭಾರೀ ಚರ್ಚೆಯನ್ನುಂಟು ಮಾಡಿದೆ.
ಸೈಬರ್ ಅಪರಾಧಿಗಳು ಈಗ ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಸಿಕೊಂಡು ಫಿಶಿಂಗ್ ವೆಬ್‌ಸೈಟ್ ಸೃಷ್ಟಿ ಮಾಡುತ್ತಿದ್ದಾರೆ. ಇದನ್ನು ರಚಿಸುವುದಕ್ಕೆ ಎಐ ಮೂಲಕ ಕೇವಲ 30 ಸೆಕೆಂಡುಗಳು ಸಾಕು. 30 ಸೆಕೆಂಡುಗಳಲ್ಲಿ ಈ ಪ್ರಕ್ರಿಯೆ ಮುಕ್ತವಾಗಲಿದೆ. ಫಿಶಿಂಗ್ ವೆಬ್‌ಸೈಟ್‌ಗಳು ಅಪಾಯಕಾರಿಯಾಗಿ ಅಭಿವೃದ್ಧಿ ಆಗುತ್ತಿದೆ ಎಂದೂ ಹೇಳಲಾಗಿದೆ. ಏನಿದು ಫಿಶಿಂಗ್ ವೆಬ್‌ಸೈಟ್ ಹಾಗೂ ಇದು ಯಾವ ರೀತಿ ಪರಿಣಾಮ ಬೀರುತ್ತಿದೆ. ಈ ರೀತಿ ಎಐ ದುರ್ಬಳಕೆ ಆಗುತ್ತಿರುವುದನ್ನು Okta ಸಂಸ್ಥೆ ಪತ್ತೆ ಹಚ್ಚಿದೆ.

ಸೈಬರ್ ಹ್ಯಾಕರ್‌ಗಳು ದುರುದ್ದೇಶಪೂರಿತ ಚಟುವಟಿಕೆಗಳಿಗಾಗಿ ನಕಲಿ ಲಾಗಿನ್ ಪುಟಗಳನ್ನು ರಚಿಸಲು ಹಾಗೂ ಜನರಿಂದ ಮಾಹಿತಿಯನ್ನು ಕಸಿಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ. ನಕಲಿ ಲಾಗಿನ್ ಹಾಗೂ ನಕಲಿ ವೆಬ್‌ಸೈಟ್‌ಗೆ ಎಐ ಬಳಕೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಫಿಶಿಂಗ್ ವೆಬ್‌ಸೈಟ್ ಎಂದರೇನು. ಇದನ್ನು ಯಾವ ರೀತಿ ಬಳಕೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ನೋಡೋಣ.
ಫಿಶಿಂಗ್ ವೆಬ್‌ಸೈಟ್: ಫಿಶಿಂಗ್ (Phishing) ವೆಬ್‌ಸೈಟ್ ಎಂದರೆ ಸೈಬರ್ ಅಪರಾಧಿಗಳು ಬಳಕೆದಾರ ಹೆಸರುಗಳು, ಪಾಸ್ ವರ್ಡ್‌ಗಳು, ಕ್ರೆಡಿಟ್ ಕಾರ್ಡ್ ವಿವರಗಳು ಅಥವಾ ಇತರ ವೈಯಕ್ತಿಕ ಡೇಟಾದಂತಹ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ನಿಜವಾದ ವೈಬ್‌ಸೈಟ್ ಮಾದರಿಯಂತಹ ವಿನ್ಯಾಸಗೊಳಿಸಿ ಜನರಿಂದ ಮೋಸವಾಗಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದು ಸಾಮಾನ್ಯವಾಗಿ ಬ್ಯಾಂಕ್ ಅಥವಾ ಆನ್‌ಲೈನ್ ಸೇವೆಯಂತಹ ಕಾನೂನುಬದ್ಧ ವೆಬ್‌ಸೈಟ್ ಮಾದರಿಯಲ್ಲಿ (ಅಸಲಿಯಂತೆ ನಕಲಿ ಮಾದರಿ) ಸೃಷ್ಟಿ ಮಾಡಲಾಗುತ್ತದೆ. ಬಳಕೆದಾರರು ನಕಲಿ ಸೈಟ್‌ನಲ್ಲಿ ತಮ್ಮ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ರೀತಿ ಫಿಶಿಂಗ್ ವೈಬ್‌ಸೈಟ್‌ಗೆ ಎಐ ತಂತ್ರಜ್ಞಾನ ಬೆಳಕೆ ಮಾಡಿಕೊಳ್ಳುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಆತಂಕವೂ ಸೃಷ್ಟಿಯಾಗಿದೆ.
ಎಐ ತಂತ್ರಜ್ಞಾನದ ದುರ್ಬಳಕೆ: ಇನ್ನು ಎಐ ತಂತ್ರಜ್ಞಾನವನ್ನು ಒಳ್ಳೆಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುವ ಬದಲಾಗಿ, ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮುಂದಿನ ದಿನಗಳಲ್ಲಿ ಎಐ ಬಳಕೆಯಿಂದ ಯಾವುದು ಅಸಲಿ ಹಾಗೂ ಯಾವುದು ನಕಲಿ ಎಂದು ತಿಳಿಯದೆ ಆಗಬಹುದು ಎಂದು ಹೇಳಲಾಗಿದೆ. ಈಗಾಗಲೇ ವಿಡಿಯೋಗಳಲ್ಲಿ ಈ ಸವಾಲು ಎದುರಾಗಿದೆ. ಹೀಗಾಗಿ ಅನುಮಾನ ಬರುವ ಯಾವುದೇ ವೆಬ್‌ಸೈಟ್‌ಗಳಿಗೆ ಲಾಗಿನ್ ಆಗಬೇಡಿ. ಅಧಿಕೃತ ವೆಬ್‌ಸೈಟ್ ಆಗಿದೆಯೇ ಎಂದು ಪರಿಶೀಲಿಸಿಕೊಂಡೇ ಲಾಗಿನ್ ಆಗುವುದು ಉತ್ತಮ ಎಂದು ಹೇಳಲಾಗಿದೆ.












Click it and Unblock the Notifications