Artificial Intelligence: ಎಐ ಬಗ್ಗೆ ಚಲನಚಿತ್ರ ನಟ ಪ್ರಕಾಶ್ ಬೆಳವಾಡಿ ಹೇಳಿದ್ದೇನು ಗೊತ್ತಾ?; ಇಲ್ಲಿದೆ ಮಾಹಿತಿ
Artificial Intelligence: ಕಾಲ ಬದಲಾದಂತೆ ಮನುಷ್ಯರು ಕೂಡ ತಮ್ಮ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳುತ್ತಾ ಹೋಗಬೇಕಾಗುತ್ತದೆ. ಇದೀಗ ಎಲ್ಲಾ ಕ್ಷೇತ್ರಗಳಲ್ಲೂ ಎಐ (ಕೃತಕ ಬುದ್ಧಿಮತ್ತೆ)ನದ್ದೇ ಸದ್ದು ಜೋರಾಗಿದೆ. ಈ ಬಗ್ಗೆ ಚಲನಚಿತ್ರ ನಟ ಪ್ರಕಾಶ್ ಬೆಳವಾಡಿ ಪ್ರತಿಕ್ರಿಯಿಸಿ ಹೇಳಿದ್ದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮೈಸೂರಿನ ಸಿದ್ಧಾರ್ಥನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು ಆವರಣದಲ್ಲಿ ಕುಂಚ ಕಾವ್ಯ ಸಾಂಸ್ಕೃತಿಕ ಸಮಿತಿಯ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಎಐ ಯುಗದಲ್ಲಿ ನಮ್ಮ ಸ್ಥಾನವನ್ನು ನಾವೇ ಕಂಡುಕೊಳ್ಳಬೇಕಾಗುತ್ತದೆ. ಬೇರೆಯವರ ಅಗತ್ಯವನ್ನು ಗುರುತಿಸಿ ಸೃಷ್ಟಿಸುವ ಕಲೆಗೆ ಮೌಲ್ಯ ಇದೆ ಎಂದು ಹೇಳಿದರು ಅಂತಾ ಪ್ರಜಾವಾಣಿ ವರದಿ ಮಾಡಿದೆ.

ಇದೀಗ ಎಲ್ಲಾ ಕ್ಷೇತ್ರಗಳನ್ನೂ ಎಐ ಪ್ರವೇಶ ಕೊಟ್ಟಿರುವ ಹಿನ್ನೆಲೆ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಸೃಜನಶೀಲತೆಯಿಂದ ತೊಡಗಿಸಿಕೊಳ್ಳಬೇಕು. ಈ ತಂತ್ರಜ್ಞಾನ ಎಲ್ಲಾ ಮಾಹಿತಿಯನ್ನು ಕ್ರೂಢಿಕರಿಸಿ ಫಲಿತಾಂಶವನ್ನ ಕೊಡುತ್ತದೆ. ಇದು ದೊಡ್ಡ ಪ್ರಮಾಣದ ಕೆಲಸ ಆದರೂ ಗುಣಾತ್ಮಕ ಕೆಲಸವಲ್ಲ, ಇಲ್ಲಿ ಮೌಲ್ಯಮಾಪನ ಇರುವುದಿಲ್ಲ. ಈ ಮಿತಿಯೇ ನಮ್ಮ ಅಧ್ಯಯನ ವಸ್ತವಾಗಬೇಕು ಎಂದು ಸಲಹೆ ನೀಡಿದರು.
ಆಯಾ ಕ್ಷೇತ್ರದಲ್ಲಿ ನಾವು ಎಐಗೆ ಇರುವ ಮಿತಿಯನ್ನು ಗುರುತಿಸಿಕೊಂಡು ಅದಕ್ಕೂ ಮೀರಿದ ಜ್ಞಾನವನ್ನು ಸಂಪಾದನೆ ಮಾಡಿಕೊಳ್ಳಬೇಕು. ದಿನಗಳಿ ಕಳೆದಂತೆ ತಂತ್ರಜ್ಞಾನ ಬೆಳವಣಿಗೆ ಮನುಷ್ಯನಿಗೆ ಇರುವ ಅವಕಾಶಗಳನ್ನ ಕಿತ್ತುಕೊಳ್ಳುತ್ತವೆ. ಆದರೆ, ಸಂಪೂರ್ಣವಾಗಿ ಮನುಷ್ಯನ ಕೆಲಸಗಳನ್ನು ಮಾಡಲು ಯಾವ ತಂತ್ರಜ್ಞಾನಕ್ಕೂ ಸಾಧ್ಯ ಇಲ್ಲ. ತಂತ್ರಜ್ಞಾನದ ಈ ಹಿನ್ನಡೆಯೇ ನಮ್ಮ ಬಂಡವಾಳ ಎಂದರು.
ಕೃತಕ ಬುದ್ಧಿಮತ್ತೆಯಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೇ ದೊಡ್ಡ ಮಟ್ಟದ ಬದಲಾವಣೆಗಳು ಆಗಿವೆ. ದೊಡ್ಡಮಟ್ಟದ ಶಸ್ತ್ರಚಿಕಿತ್ಸೆಗಳನ್ನು ಕರಾರುವಕ್ಕಾಗಿ ಮಾಡುವಂತಹ ರೋಬೊಟ್‌ಗಳು ಬಂದಿವೆ. ಅಲ್ಲದೆ, ಕ್ಷಣ ಮಾತ್ರದಲ್ಲಿ ನಮ್ಮ ಆಲೋಚನೆಯಂತೆ ನೂರಾರು ಚಿತ್ರಗಳನ್ನ ಸೃಷ್ಟಿಸುವ ಆಪ್‌ಗಳಿವೆ. ಇದರಿಂದಾಗಿ ನಾವು ಓದುತ್ತಿರುವ ಕೋರ್ಸ್‌ನಿಂದ ಏನು ಪ್ರಯೋಜನ ಎಂದು ವಿದ್ಯಾರ್ಥಿಗಳು ಕೇಳಿದರೆ ತಪ್ಪಾಗುತ್ತದೆ. ಕೋರ್ಸ್ ಅನ್ನು ಬಳಕೆ ಮಾಡಿಕೊಂಡು ಯಾವ ರೀತಿ ಬೆಳೆಯಬಲ್ಲೆವು ಎಂಬ ಆಲೋಚನೆ ಬೇಕು ಎಂದು ಹೇಳಿದರು.
ಮತ್ತೊಂದೆಡೆ ಹೇಳೊದಾದ್ರೆ, ಎಐ ಈಗಾಗಲೇ ಎಲ್ಲಾ ಕ್ಷೇತ್ರಗಳಿಗೂ ಕಾಲಿಟ್ಟು ದೊಡ್ಡ ಮಟ್ಟದ ಕ್ರಾಂತಿಯನ್ನೇ ಸೃಷ್ಟಿದೆ. ಮನುಷ್ಯರು ಇದಕ್ಕೆ ಹೊಂದಿಕೊಳ್ಳಬೇಕಾದ ಪರಿಸ್ಥಿತಿಯೂ ಎದುರಾಗಿದೆ. ಈ ತಂತ್ರಜ್ಞಾನ ಎಂಟ್ರಿಯಿಂದ ದೊಡ್ಡ ದೊಡ್ಡ ಕಂಪನಿಗಳು ಅದೆಷ್ಟೋ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಯಾಕಂದ್ರೆ ಈ ತಂತ್ರಜ್ಞಾ ಅತೀ ಬೇಗನೇ ಹಲವು ಜನರು ಮಾಡುವ ಕೆಲಸವನ್ನು ಒಂದೇ ಬಾರಿಗೆ ಮಾಡಿ ಮುಗಿಸುವಂತಹ ಸಾಮರ್ಥ್ಯವನ್ನು ಹೊಂದಿದೆ.
ಇದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ವಿಚಾರಗಳನ್ನು ತಿಳಿದುಕೊಳ್ಳಬಹುದು. ಎಲ್ಲಾ ಪ್ರಶ್ನೆಗಳಿಗೂ ಕೂಡ ಇದು ಉತ್ತರ ನೀಡುತ್ತದೆ. ಆದ್ದರಿಂದ ಇದಕ್ಕೆ ಹೊಂದಿಕೊಳ್ಳದ ಕಾರಣ ಹಾಗೂ ಸಮಯ ಉಳಿತಾಯ ಮಾಡಲು ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಕೆಸಲದಿಂದ ವಜಾಗೊಳಿಸಿವೆ. ಮೈಕ್ರೋಸಾಫ್ಟ್, ಇಂಟೆಲ್, ಗೂಗಲ್‌ನಂಹ ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿವೆ.












Click it and Unblock the Notifications