Artificial Intelligence: ಎಐ ಬಳಸಿಕೊಂಡು ಪ್ರಧಾನಿ ಮೋದಿಗೆ ಅವಮಾನ: ಎಫ್‌ಐಆರ್‌ ದಾಖಲು

Artificial Intelligence: ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ. ಅದರಲ್ಲೂ ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲೂ ಎಐ ಅಳವಡಿಕೆ ಮಾಡಿಕೊಳ್ಳಲಾಗಿದ್ದು, ಇದರಿಂದ ಕೆಲಸದ ವೇಗ ಹೆಚ್ಚಾಗಿದೆ. ಅಲ್ಲದೆ, ಉದ್ಯೋಗಿಗಳ ಸಮಯ ಉಳಿತಾಯ ಆದಂತಾಗಿದೆ. ಮತ್ತೊಂದೆಡೆ, ಈ ತಂತ್ರಜ್ಞಾನ ಬಳಸಿಕೊಡು ಸ್ಟಾರ್ ನಟ, ನಟಿಯರು, ರಾಜಕಾರಣಿಗಳ ಫೋಟೋಗಳನ್ನು ವಿಡಿಯೋಗಳಲ್ಲಿ ಕೆಟ್ಟದಾಗಿ ಬಿಂಬಿಸಿರುವ ಘಟನೆಗಳು ಸಹ ನಡೆದಿವೆ. ಹಾಗೆಯೇ ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯನ್ನು ಅವಹೇಳನಕಾರಿಯಾಗಿ ಚಿತ್ರಿಸಿದ ಎಐ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಹೌದು.. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅವರ ತಾಯಿಯನ್ನು ಅವಹೇಳನಕಾರಿಯಾಗಿ ಚಿತ್ರಿಸಿದ ಎಐ ವಿಡಿಯೊವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಆರೋಪದ ಮೇರೆಗೆ ದೆಹಲಿ ಪೊಲೀಸರು ಶನಿವಾರ ಎಫ್‌ಐಆರ್‌ ದಾಖಲು ಮಾಡಿದ್ದಾರೆ.

Delhi Police Files FIR Over AI Deepfake Video Targeting PM Modi and His Late Mother

ಕೃತಕ ಬುದ್ಧಿಮತ್ತೆಯ (AI) ಈ ಡೀಪ್‌ಫೇಕ್‌ ವಿಡಿಯೊವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿಯ ವ್ಯಕ್ತಿತ್ವಕ್ಕೆ ಕಳಂಕ ತಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೆಹಲಿ ಬಿಜೆಪಿ ಘಟಕದ ಚುನಾವಣಾ ಕೋಶದ ಸಂಚಾಲಕ ಸಂಕೇತ್ ಗುಪ್ತಾ ಅವರು ನಾರ್ತ್ ಅವೆನ್ಯೂ ಪೊಲೀಸ್‌ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ ಅಂತಾ ವರದಿ ಆಗಿದೆ.

ವಿಡಿಯೊದಲ್ಲಿ ಪ್ರಧಾನಿ ಮೋದಿ ಅವರ ವ್ಯಕ್ತಿತ್ವವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಮಹಿಳೆಯ ಘನತೆ, ನೈತಿಕತೆ ಮತ್ತು ಕಾನೂನನ್ನು ಉಲ್ಲಂಘಣೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಸೆಪ್ಟೆಂಬರ್ 10ರಂದು ಬಿಹಾರ ಕಾಂಗ್ರೆಸ್‌ ಘಟಕವು ತನ್ನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿತ್ತು ಎಂದು ಆರೋಪ ಮಾಡಲಾಗಿದೆ. ಈ ಸಂಬಂಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹಣದ ಆಸೆಗೆ ಮರುಳಾಗದಿರಿ: ಇನ್ನು ಸಂದೇಶ ಕಳುಹಿಸಿ ಹಣದ ಆಸೆ ತೋರಿಸಿ ಒಟಿಪಿ ಕಳುಹಿಸಿಕೊಂಡು ಮುಗ್ದ ಜನರ ಬಳಿ ಹಣ ಪೀಕಿರುವ ಘಟನೆಗಳು ಬೆಳಕಿಗೆ ಬಂದಿವೆ. ಅಂತಹ ಸ್ಕ್ಯಾಮರ್‌ಗಳಿಗೆ ತಕ್ಕ ಶಿಕ್ಷೆಯನ್ನು ಕೊಡುವ ಮೂಲಕ ಹಣ ವಾಪಾಸ್‌ ಕೊಡಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಆದರೂ ಕೂಡ ಇಂತಹ ಪ್ರಕರಣಗಳಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಬದಲಾಗಿ ಅವರು ಇದೀಗ ಬೇರೆಯದ್ದೇ ದಾರಿ ಹಿಡಿದಿರುವ ಬಗ್ಗೆ ವಿಚಾರ ಬಯಲಿಗೆ ಬಂದಿದೆ.

ಇದೀಗ ಹಲವು ಜನರ ವಾಟ್ಸಾಪ್​ಗಳಿಗೆ ಕ್ವಾಂಟಂ ಎಐ ಪ್ರಾಜೆಕ್ಟ್ ಕುರಿತ ಸಂದೇಶಗಳು ಹಬ್ಬುತ್ತಿವೆ. ಇದರಲ್ಲಿ ಕೇವಲ 21,000 ರೂಪಾಯಿ ಹೂಡಿಕೆ ಮಾಡಿ ತಿಂಗಳಿಗೆ 20,00,000 ಹಣ ಗಳಿಸಬಹುದು ಎಂದು ಈ ಸಂದೇಶ ಕಳುಹಿಸಿ ಆಸೆ ಹುಟ್ಟಿಸುತ್ತಿದ್ದಾರೆ. ಆದರೆ, ಇದು ಎಂಥವರಿಗೂ ಫೇಕ್ ಅಂತಲೇ ಅನಿಸುತ್ತದೆ. ಪಿಐಬಿ ಫ್ಯಾಕ್ಟ್ ಚೆಕ್ ತಂಡ ಸಹ ಈ ಸಂದೇಶದ ಬಗ್ಗೆ ಅಲರ್ಟ್ ನೀಡಿದೆ. ಜನರು ಇದನ್ನು ನಂಬಬಾರದು ಎಂದು ಮನವಿ ಮಾಡಿದೆ.

ಇನ್ಫೋಸಿನ್‌ ಸುಧಾಮೂರ್ತಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೈಯಕ್ತಿಕವಾಗಿ ಕ್ವಾಂಟಂ ಎಐ ಪ್ರಾಜೆಕ್ಟ್ ಅಭಿವೃದ್ಧಿಪಡಿಸಿದ್ದಾರೆ ಅಂತಲೂ ಇದರಲ್ಲಿ ಬರೆಯಲಿದೆ. ಆರಂಭಿಕ 21,000 ರೂಪಾಯಿ ಹಣ ಹೂಡಿಕೆ ಮಾಡಿ ತಿಂಗಳಿಗೆ 20,00,000 ರೂಪಾಯಿ ತಮ್ಮದಾಗಿಸಿಕೊಳ್ಳಬಹುದು. ಇನ್ನೆರಡು ದಿನಗಳವರೆಗೆ ನೊಂದಣಿ ಲಭ್ಯವಿರುತ್ತದೆ ಎನ್ನುವುದನ್ನು ಕೂಡ ಇದರಲ್ಲಿ ತಿಳಿಸಲಾಗಿದೆ. ಆದರೆ ಅಸಲಿ ಸತ್ಯ ಬೇರೆಯದ್ದೇ ಇದೆ. ನಿರ್ಮಲಾ ಸೀತಾರಾಮನ್ ಹಾಗೂ ಸುಧಾಮೂರ್ತಿ ಕೈ ಕುಲುಕುವುದರ ಫೇಕ್ ಚಿತ್ರ ಸೃಷ್ಟಿಸಿ ಸೇರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಜನರು ಇದಕ್ಕೆ ಬಲಿ ಆಗಬಾರದು ಎಂದು ಜಾಗೃತಿ ಮೂಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+