FB and Insta: ಎಐ ಬಳಕೆಗೆ ಮೆಟಾದಿಂದ ಶತಕೋಟಿ ಡಾಲರ್: ಫೇಸ್‌ಬುಕ್ & ಇನ್ಸ್ಟಾಗ್ರಾಮ್ ಬಿಗ್ ಅಪ್ಡೇಟ್ಸ್!
FB and Insta: ಮೆಟಾ (ಫೇಸ್‌ಬುಕ್ & ಇನ್ಸ್ಟಾಗ್ರಾಮ್ ಒಡೆತನದ ಹೊಂದಿರುವ ಸಂಸ್ಥೆ) ಎಐ / ಕೃತಕ ಬುದ್ಧಿಮತ್ತೆಯಲ್ಲಿ ಅಭಿವೃದ್ಧಿಯಲ್ಲಿ ಅಗ್ರಸ್ಥಾನ ಸಾಧಿಸುವುದಕ್ಕೆ ಸರ್ಕಸ್ ಮಾಡುತ್ತಿದೆ. ಎಐ ತಂತ್ರಜ್ಞಾನವನ್ನು ಯಾರೂ ಈಗ ಹಗುರವಾಗಿ ಪರಿಗಣಿಸುತ್ತಿಲ್ಲ. ಎಐ ತಂತ್ರಜ್ಞಾನದಿಂದಾಗಿ ವಿಶ್ವದ ಹಲವು ಬೃಹತ್ ಕಂಪನಿಗಳಲ್ಲಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಈ ಹೊಸ ತಂತ್ರಜ್ಞಾನದಲ್ಲಿ ಭಾರೀ ಪೈಪೋಟಿ ನಡೆದಿದೆ. ಮಾರ್ಕ್ ಜುಕರ್‌ಬರ್ಗ್ ಅವರು ಈ ವಿಚಾರದಲ್ಲಿ ಅಭಿವೃದ್ಧಿ ಸಾಧಿಸುವುದಕ್ಕೆ ಸರ್ಕಸ್ ನಡೆಸುತ್ತಿದ್ದಾರೆ. ಮೆಟಾದಲ್ಲಿ ಎಐ ಅಳವಡಿಸಿಕೊಳ್ಳುವುದು ಹಾಗೂ ಅಭಿವೃದ್ಧಿ ಮಾಡುವ ಉದ್ದೇಶದಿಂದಾಗಿ ಅವರು ಶತಕೋಟಿ ಡಾಲರ್ ಅನ್ನು ಖರ್ಚು ಮಾಡುತ್ತಿದ್ದು ಇದು ಮುಂದಿನ ದಿನಗಳಲ್ಲಿ ಮಹತ್ವದ ಬದಲಾವಣೆಯನ್ನು ತರಿಲಿದೆ ಎಂದು ನಿರೀಕ್ಷಿಸಲಾಗಿದೆ.
ಎಐ ಕ್ಷೇತ್ರದಲ್ಲಿ ಎಲ್ಲರೂ ಮುಂಚೂಣಿ ಸಾಧಿಸಬೇಕು ಎಂದು ಪ್ರಯತ್ನಿಸುತ್ತಿರುವುದು ಹಳೆಯ ವಿಚಾರವೇನೂ ಅಲ್ಲ. ಆದರೆ, ಮಾರ್ಕ್ ಜುಕರ್‌ಬರ್ಗ್ ಅವರು ನೀರಿನಂತೆ ದುಡ್ಡು ಸುರಿಯುತ್ತಿದ್ದಾರೆ. ಓಪನ್‌ಎಐ ಮುಖ್ಯಸ್ಥ ಸ್ಯಾಮ್ ಆಲ್ಟ್‌ಮನ್ ಅವರು ಈ ವಿಚಾರವಾಗಿ ಇಷ್ಟೆಲ್ಲಾ ವೆಚ್ಚ ಮಾಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವು ಓಪನ್‌ಎಐ ಉದ್ಯೋಗಿಗಳು ಮೆಟಾದ ಈ ಆಫರ್‌ನಲ್ಲಿ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮೆನ್ಲೋ ಪಾರ್ಕ್ ಮೂಲದ ಟೆಕ್ ಟೈಟಾನ್‌ನಲ್ಲಿ ಸ್ಕೇಲ್ ಎಐ ಸಂಸ್ಥಾಪಕ ಮತ್ತು ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಲೆಕ್ಸಾಂಡರ್ ವಾಂಗ್ ಅವರು ಈ ವಿಚಾರದಲ್ಲಿ ಕೈಜೋಡಿಸಿದ್ದಾರೆ.

ಜೂನ್ ತಿಂಗಳೊಂದರಲ್ಲೇ ಎಐ ತಂತ್ರಜ್ಞಾನದ ಅಭಿವೃದ್ಧಿಗಾಗಿ ಬರೋಬ್ಬರಿ 14 ಬಿಲಿಯನ್ ಮೊತ್ತವನ್ನು ಖರ್ಚು ಮಾಡಿದೆ. ಈ ಪ್ರಮಾಣದ ವೆಚ್ಚವನ್ನು ಎಐ ಮೇಲೆ ಮಾಡುತ್ತಿರುವುದನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಮಹತ್ವದ ಬದಲಾವಣೆಗಳು ಆಗುವ ಸಾಧ್ಯತೆ ಇದೆ ಎಂದು ಹಲವು ಅಂದಾಜಿಸಿದ್ದಾರೆ. ಎಐ ಅಭಿವೃದ್ಧಿಗಾಗಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಮಾರ್ಕ್ ಜುಕರ್‌ಬರ್ಗ್ ಅವರು ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಫೇಸ್‌ಬುಕ್ & ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಆ್ಯಪ್‌ಗಳಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ ಎಂದು ಹೇಳಲಾಗಿದೆ.
ಮೆಟಾದಿಂದ ಎಐ ವಿಡಿಯೋ ಅಭಿವೃದ್ಧಿ ಮಾಡಲಾಗುತ್ತಿದೆ ಹಾಗೂ ಸ್ಟಾರ್ಟ್‌ಅಪ್ ಸಹ ಪ್ರಾರಂಭವಾಗುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಎಐ ರೇಸ್‌ನಲ್ಲಿ ಮೆಟಾ ತನ್ನ ಪ್ರತಿಸ್ಪರ್ಧಿಗಳಿಗಿಂತ ಹಿಂದಿದೆ ಎನ್ನುವ ವಾದವು ಇತ್ತೀಚಿನ ದಿನಗಳಲ್ಲಿ ಕೇಳಿ ಬಂದಿತ್ತು. ಇದನ್ನು ಮೆಟಾ ಮುಖ್ಯಸ್ಥ ಜುಕರ್‌ಬರ್ಗ್ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಇದೇ ಕಾರಣಕ್ಕೆ ಎಐ ವಿಚಾರದಲ್ಲಿ ಹಲವು ಮಹತ್ವದ ಕ್ರಮಗಳನ್ನು ಅವರು ಅಳವಡಿಸಿಕೊಂಡಿದ್ದಾರೆ. ಎಐನಲ್ಲಿ ಹೆಚ್ಚು ಹೂಡಿಕೆಯನ್ನೂ ಮಾಡುತ್ತಿದ್ದಾರೆ ಎಂದೂ ಹೇಳಲಾಗಿದೆ.
ಎಐಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ಹಾಗೂ ವೆಚ್ಚ ಮಾಡುತ್ತಿರುವುದರಿಂದ ಮೆಟಾದ ಷೇರು ಬೆಲೆ ಹೊಸ ಗರಿಷ್ಠ ಮಟ್ಟವನ್ನು ತಲುಪುತ್ತಿದೆ. ಕಂಪನಿಯ ಒಟ್ಟಾರೆ ಮೌಲ್ಯ 2 ಟ್ರಿಲಿಯನ್ ತಲುಪುತ್ತಿದ್ದು, ಕೆಲವು ಹೂಡಿಕೆದಾರರಲ್ಲಿ ಆತಂಕ ಮೂಡಿದೆ ಎಂದೂ ಹೇಳಲಾಗುತ್ತಿದೆ.












Click it and Unblock the Notifications