Artificial Intelligence: ಉದ್ಯೋಗ ಕಡಿತಕ್ಕೆ AI ಕಾರಣವೇ?‌;ನಿಮ್ಮ ಕೆಲಸಕ್ಕೂ ಅಪಾಯವಿದೆಯೇ?

ಇದೀಗ AI ಮಹಾ ಯುಗ ಆರಂಭವಾಗಿದೆ. ದಿನ ನಿತ್ಯ ಶಾಲಾ ಶಿಕ್ಷಣದಿಂದ ಹಿಡಿದು ಕಾಲೇಜು ಕಾರ್ಯವೈಖರಿ ಪೂರ್ಣಗೊಳಿಸುವುದು ಹಾಗೂ ಕೆಲಸದ ಯೋಜನೆಗಳನ್ನು ಸುಲಭಗೊಳಿಸುವವರೆಗೆ ಎಲ್ಲದರಲ್ಲೂ AI ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ. AI ಅಂದರೆ ಕೃತಕ ಬುದ್ಧಿಮತ್ತೆ . ಇದೀಗ AI ಮೇಲೆ ನಾವು ಹೆಚ್ಚು ನಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. AI ನಮ್ಮ ಜೀವನವನ್ನು ಸುಲಭಗೊಳಿಸಿದೆ, ಆದರೆ ಇದು ಅನೇಕ ವಲಯಗಳಲ್ಲಿನ ಉದ್ಯೋಗಗಳಿಗೆ ದೊಡ್ಡ ಹೊಡೆತವನ್ನುಂಟು ಮಾಡಿದೆ. AI ಮಾನವಶಕ್ತಿಯನ್ನು ಅಂದರೆ ಮನುಷ್ಯರನ್ನು ಬದಲಾಯಿಸಲು ಪ್ರಾರಂಭಿಸಿದೆ ಎಂಬ ಕೆಲವು ವರದಿಗಳಿವೆ.

ಕೃತಕ ಬುದ್ಧಿಮತ್ತೆಯ ಅಗಾಧ ಸಾಮರ್ಥ್ಯ ಮತ್ತು ಅದರ ಅಂತಿಮ ಪರಿಣಾಮಗಳ ಹುಡುಕಾಟದಲ್ಲಿರುವ ನಾವು, ಈ ತಂತ್ರಜ್ಞಾನದ ಉಗಮ, ಬೆಳವಣಿಗೆ ಹಾಗೂ ಭವಿಷ್ಯದ ಬಗ್ಗೆ ಸದಾ ಯೋಚಿಸುವ, ಚರ್ಚಿಸುವ ಹಂತ ತಲುಪಿದ್ದೇವೆ. ತನ್ನ ಆಲೋಚನಾ ಶಕ್ತಿ ಮತ್ತು ಅದರಿಂದ ಜನಿಸಿರುವ ಆಧುನಿಕ ತಂತ್ರಜ್ಞಾನದ ಸಹಾಯದಿಂದ, AIನ ವಿವಿಧ ಆಯಾಮಗಳನ್ನು ಸಂಶೋಧಿಸುತ್ತಿರುವ ಮಾನವ, ತನ್ನ ಸುತ್ತಲಿನ ಡಿಜಿಟಲ್ ಜಗತ್ತನ್ನು ಹೊಸ ದೃಷ್ಟಿಕೋನದಿಂದ ಅರಿಯುವ ಪ್ರಯತ್ನ ಮುಂದುವರೆಸಿದ್ದಾನೆ.

Behind the job cuts Is AI the real reason

ಇನ್ನೂ ಹಲವು ಜನರು ತಮ್ಮ ಉದ್ಯೋಗಗಳ ಬಗ್ಗೆ ಚಿಂತಿಸಲು ಪ್ರಾರಂಭಿಸಿದ್ದಾರೆ. 'AI ಉದ್ಯೋಗಗಳಿಗೆ ಬೆದರಿಕೆ' (AI ನಿಂದ ಕೆಲಸ ಕಸಿದುಕೊಳ್ಳುತ್ತೆ) ಎಂಬಂತಹ ವಿಷಯಗಳು ಕಾರ್ಪೊರೇಟ್ ಜಗತ್ತಿನಲ್ಲಿ ಬಹಳಷ್ಟು ಟ್ರೆಂಡಿಂಗ್ ಆಗುತ್ತಿವೆ. ಹೆಚ್ಚಿನ ವಿದ್ಯಾರ್ಥಿಗಳು ಇದೀಗ AI ಕೋರ್ಸ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಅವರು ಭವಿಷ್ಯದಲ್ಲಿ ಟ್ರೆಂಡಿಂಗ್ ಉದ್ಯೋಗಗಳನ್ನು ಪಡೆಯಬಹುದು. ವಿಶ್ವ ಆರ್ಥಿಕ ವೇದಿಕೆಯ (WEF) 'ಉದ್ಯೋಗಗಳ ಭವಿಷ್ಯದ ವರದಿ 2023' ಪ್ರಕಾರ, ಮುಂದಿನ 5 ವರ್ಷಗಳಲ್ಲಿ 23% ಉದ್ಯೋಗಗಳು ಬದಲಾಗಬಹುದು. ಇದರಲ್ಲಿ, 83 ಮಿಲಿಯನ್ ಉದ್ಯೋಗಗಳು ಕಳೆದುಹೋಗಬಹುದು ಮತ್ತು 69 ಮಿಲಿಯನ್ ಹೊಸ ಉದ್ಯೋಗಗಳು ಸೃಷ್ಟಿಯಾಗಬಹುದು ಎನ್ನಲಾಗಿದೆ.

ಇತ್ತೀಚೆಗೆ ಟೆಕ್ ಕಂಪನಿಗಳಲ್ಲಿ ಉದ್ಯೋಗ ಕಡಿತಗಳು ಹೆಚ್ಚಾಗಿವೆ. ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್, ಮೆಟಾ, ಮುಂತಾದ ಪ್ರಮುಖ ಸಂಸ್ಥೆಗಳು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಈ ನಿರ್ಧಾರಗಳ ಹಿಂದೆ ಏಐ (ಕೃತಕ ಬುದ್ಧಿಮತ್ತೆ) ಪ್ರಮುಖ ಪಾತ್ರವಹಿಸುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ವಿಶ್ವ ಆರ್ಥಿಕ ವೇದಿಕೆ (WEF) ವರದಿ ಪ್ರಕಾರ, 2030ರ ವೇಳೆಗೆ 170 ಮಿಲಿಯನ್ ಹೊಸ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ, ಆದರೆ 92 ಮಿಲಿಯನ್ ಉದ್ಯೋಗಗಳು ನಷ್ಟವಾಗಬಹುದು. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ಪೋಲ್ಯಾಂಡ್‌ನ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ಅಧ್ಯಯನ ಪ್ರಕಾರ, ಜಾಗತಿಕವಾಗಿ ಪ್ರತಿ ನಾಲ್ಕು ಉದ್ಯೋಗಗಳಲ್ಲಿ ಒಂದನ್ನು ಜನರೇಟಿವ್ AI ಪ್ರಭಾವಿಸುತ್ತದೆ ಎನ್ನಲಾಗಿದೆ.

ಆಂಥ್ರೋಪಿಕ್ ಸಂಸ್ಥೆಯ ಸಿಇಒ ಡಾರಿಯೋ ಅಮೋಡೆಯಿ(Anthropic CEO Dario Amodei ) ಅವರು ಈ ಕುರಿತು ಮಾತನಾಡಿ, ಐದು ವರ್ಷಗಳಲ್ಲಿ ಆರಂಭಿಕ ಹಂತದ ವೈಟ್-ಕಾಲರ್ ಉದ್ಯೋಗಗಳನ್ನು ಅರ್ಧಕ್ಕೆ ಉದ್ಯೋಗದಿಂದ ಕೆಳಗಿಳಿಸಬಹುದು ಮತ್ತು ನಿರುದ್ಯೋಗ ಸಮಸ್ಯೆ 20% ಹೆಚ್ಚಾಗಬಹುದು ಎಂದು ಎಚ್ಚರಿಸಿದ್ದಾರೆ. ಇನ್ನೂ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಈ ಉದ್ಯೋಗ ಕಡಿತಗಳು AI ಆಧಾರಿತ ಪುನರ್ ರಚನೆಯ ಭಾಗವೆಂದು ಹೇಳಿದ್ದಾರೆ. ಅಮೆಜಾನ್ ಸಿಇಒ ಆಂಡಿ ಜಸ್ಸಿ, ಕೆಲವು ಉದ್ಯೋಗಗಳು AI ಏಜೆಂಟ್ಸ್ ಮೂಲಕ ಕಡಿತವಾಗಬಹುದು ಎಂದು ಹೇಳಿದ್ದಾರೆ. ಗೋಲ್ಡ್‌ಮನ್ ಸ್ಯಾಚ್ಸ್ ವರದಿಯ ಪ್ರಕಾರ, ಕೃತಕ ಬುದ್ಧಿಮತ್ತೆಯು 300 ಮಿಲಿಯನ್ ಪೂರ್ಣ ಸಮಯದ ಉದ್ಯೋಗಗಳ ಮೇಲೆ, ವಿಶೇಷವಾಗಿ ದಿನನಿತ್ಯದ ಕೆಲಸಗಳ ಮೇಲೆ ಪರಿಣಾಮ ಬೀರಬಹುದು.

ಎಲ್ಲ ಉದ್ಯೋಗ ಕಡಿತಗಳಿಗೆ AI ಕಾರಣವೇ?

ಕೋವಿಡ್ ನಂತರದ ಅವಧಿಯಲ್ಲಿ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದವು. ಈಗ ಅವಶ್ಯಕತೆ ಕಡಿಮೆಯಾದ ಹಿನ್ನೆಲೆಯಲ್ಲಿ ಪುನರ್ ಮೌಲ್ಯಮಾಪನ ಮಾಡಿಕೊಂಡು ಉದ್ಯೋಗ ಕಡಿತಗಳನ್ನು ಮಾಡುತ್ತಿವೆ. ಆದರೆ, ಮುಂದಿನ ದಿನಗಳಲ್ಲಿ AI ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ಪರಿಣಾಮದಿಂದ ಹೆಚ್ಚಿನ ಕೈಗಾರಿಕೆಗಳಲ್ಲಿ ಉದ್ಯೋಗ ಕಡಿತಗಳು ಸಂಭವಿಸಬಹುದು ಎಂಬ ನಿರೀಕ್ಷೆ ಇದೆ.

ಯಾವ ಉದ್ಯೋಗಿಗಳು ಅಪಾಯದಲ್ಲಿದ್ದಾರೆ?

ಹೆಚ್ಚಿನ ಅಪಾಯ ಇರುವುದು ಡೇಟಾ ನಮೂದು, ಕ್ಯಾಶಿಯರ್, ಟೆಲಿಮಾರ್ಕೆಟಿಂಗ್, ಮೂಲ ಲೆಕ್ಕಪತ್ರ ನಿರ್ವಹಣೆ ಸ್ವಯಂಚಾಲಿತ ಉತ್ಪಾದನಯ ಉದ್ಯೋಗಗಳು ಕಡಿಮೆಯಾಗುವ ಸಾಧ್ಯತೆ ಇದೆ. ಇನ್ನೂ ಕಡಿಮೆ ಅಪಾಯ ಇರುವುದು ಶಿಕ್ಷಕಿ, ನರ್ಸ್, ಸಮಾಜ ಸೇವಕಿ, ಶಸ್ತ್ರಚಿಕಿತ್ಸಕ, ಕಾರ್ಯತಂತ್ರದ ವ್ಯವಸ್ಥಾಪಕ, ಕೃಷಿ, ಡೆಲಿವರಿ, ಕೇರ್ ವರ್ಕರ್ ಮುಂತಾದಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+