AI ಬಳಸುತ್ತೀರಾ, ಹಾಗಾದರೆ ನಿಮ್ಮ ಮೆದುಳಿನ ಮೇಲೆ ಆಗುವ ಪರಿಣಾಮದ ಬಗ್ಗೆ ಶಾಕಿಂಗ್ ಮಾಹಿತಿ ಇಲ್ಲಿದೆ!
ಕೃತಕಬುದ್ಧಿಮತೆ ಜಗತ್ತಿನಲ್ಲಿ ಮಹತ್ವದ ಬೆಳವಣಿಗೆ ಆಗಿದೆ. MIT ಮೀಡಿಯಾ ಲ್ಯಾಬ್ ಅಧ್ಯಯನ ವರದಿಯನ್ನು ಇಡೀ ಜಗತ್ತೇ ನಿಬ್ಬೆರಗಾಗಿ ನೋಡುತ್ತಿದೆ.
ChatGPT ಬಳಸಿ ಬರೆಯುವುದರಿಂದ ನಮ್ಮ ಮೆದುಳಿನ ಆಲೋಚನಾ ಶಕ್ತಿ, ನೆನಪಿನ ಸಾಮರ್ಥ್ಯ ಮತ್ತು ಗಮನದ ಮೇಲೆ ಏನಾದರೂ ಪರಿಣಾಮ ಬೀರುತ್ತಿದೆಯೇ ಎನ್ನುವ ಅಂಶಗಳನ್ನು ಒಳಗೊಂಡ ಅಧ್ಯಯನ ವರದಿ ಇದಾಗಿದೆ. AI ಸಹಾಯದಿಂದ ಪ್ರಬಂಧ ಬರೆಯುವ 54 ವಿದ್ಯಾರ್ಥಿಗಳ ಮೆದುಳು ಹೇಗೆ ಕಾರ್ಯನಿವರ್ಹಿಸುತ್ತದೆ ಎನ್ನುವುದನ್ನು ಈ ಅಧ್ಯಯನ ವರದಿಯಲ್ಲಿ ಪರಿಶೀಲನೆ ಮಾಡಲಾಗಿದೆ.
EEG ಪರೀಕ್ಷೆಯ ಮೂಲಕ ಅಧ್ಯಯನ ನಡೆಸಿದ ಸಂಶೋಧಕರು, ChatGPT ಬಳಸಿದವರಲ್ಲಿ ನೆನಪು, ಗಮನ ಮತ್ತು ವಿಶ್ಲೇಷಣೆಗೆ ಸಂಬಂಧಿಸಿದ ಮೆದುಳಿನ ಸಂಪರ್ಕ ದುರ್ಬಲವಾಗಿದೆ ಎನ್ನುವ ಗಂಭೀರವಾದ ಅಂಶವನ್ನು ಪತ್ತೆ ಮಾಡಿದ್ದಾರೆ. ಇದನ್ನು ಸಂಶೋಧಕರು 'ಅರಿವಿನ ಸಾಲ' (Cognitive Debt) ಅಂತಲೂ ಕರೆದಿದ್ದಾರೆ. ಹಾಗಾದರೆ ChatGPT ಬಳಕೆ ನಮ್ಮ ಆಲೋಚನಾ ಸಾಮರ್ಥ್ಯದ ಮೇಲೆ ಹೇಗೆ ಪರಿಣಾಮ ಬೀರಲಿದೆ. ಈ ಅಧ್ಯಯನ ಏನು ಹೇಳುತ್ತದೆ ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿ ಕೊಡಲಾಗಿದೆ.

ಕೃತಕ ಬುದ್ಧಿಮತ್ತೆ ಬಂದ ಮೇಲೆ ಜನರು ಅದರ ಮೇಲೆ ಅವಲಂಬನೆ ಆಗಿದ್ದಾರೆ. ಜನರು ಸ್ವಂತ ಬರೆಯುವ ಬದಲು ChatGPT ಬಳಕೆ ಮಾಡಿ ಬರೆಯುವುದಕ್ಕೆ ಪ್ರಾರಂಭಿಸಿದ ಮೇಲೆ ಮೆದುಳಿನಲ್ಲಿ ಏನಾಗುತ್ತದೆ ಎಂಬುದನ್ನು ಪತ್ತೆಹಚ್ಚಲು EEG ಅನ್ನು ಬಳಸಲಾಗಿತ್ತು. ಐವತ್ತನಾಲ್ಕು ವಿದ್ಯಾರ್ಥಿಗಳು ಎಲೆಕ್ಟ್ರೋಡ್ ಕ್ಯಾಪ್‌ಗಳನ್ನು ಧರಿಸಿ ಪ್ರಬಂಧ ಕಾರ್ಯಗಳನ್ನು ಪೂರ್ಣಗೊಳಿಸಿದರು. ಒಂದು ಗುಂಪು ChatGPT ಅನ್ನು ಬಳಸಿದರೆ ಮತ್ತೊಂದು ಗುಂಪು ಚಾಟ್‌ಜಿಪಿಟಿ ಸೇರಿದಂತೆ ಎಐ ಬಳಕೆ ಮಾಡಿತ್ತು. ಆದರೆ, ಮತ್ತೊಂದು ತಂಡವು ಯಾವುದೇ ಎಐ ಬಳಕೆ ಮಾಡಿರಲಿಲ್ಲ.
Artificial Intelligence: ನೆನಪಿನ ಶಕ್ತಿ ಕಡಿಮೆ ಮಾಡುವುದು ಬಹಿರಂಗ
ಎಲ್ಲಾ ಅವಧಿಗಳಲ್ಲಿ ChatGPT ಬಳಕೆ ಮಾಡಿದ ಗ್ರೂಪ್‌ನ ನೆನಪಿನ ಶಕ್ತಿ, ಗಮನ ಮತ್ತು ವಿಶ್ಲೇಷಣಾತ್ಮಕ ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮೆದುಳಿನ ನರ ಸಂಪರ್ಕವು ದುರ್ಬಲವಾಗಿರುವುದನ್ನು ತೋರಿಸಿದೆ. ಈ ರೀತಿ ಮಾಡಿದವರು, ಈಗಷ್ಟೇ ಬರೆದದ್ದನ್ನು ನೆನಪಿಸಿಕೊಳ್ಳುವಲ್ಲಿ ಹೆಚ್ಚಿನ ಜನರು ಕಷ್ಟ ಅನುಭವಿಸಿದರು ಮತ್ತು ಸಾಮಾನ್ಯ ರೀತಿಯ ಬರಹಗಳನ್ನು ಬರೆದರು. ಇದನ್ನು ಲೇಖಕರು 'ಆಲೋಚನಾ ಶಕ್ತಿ ಕುಂದುವಿಕೆ' ಎಂದು ವಿವರಿಸಿದ್ದಾರೆ. ಅಂದರೆ, ಉಪಕರಣವೇ ಮಾಹಿತಿಯನ್ನು ಒಟ್ಟುಗೂಡಿಸಿ ಉತ್ತರ ಸಿದ್ಧಪಡಿಸುತ್ತದೆ. ಇದರಿಂದ ಮೆದುಳು ಹೆಚ್ಚು ಯೋಚಿಸುವ ಅಗತ್ಯವೇ ಇರುವುದಿಲ್ಲ ಎನ್ನಲಾಗಿದೆ.
An MIT Media Lab study used EEG to track what happens in the brain when people write with ChatGPT rather than on their own. Fifty four students completed essay tasks while wearing electrode caps. One group used ChatGPT, one used a search engine, and one used no tools. Across sessions, the ChatGPT group showed the weakest neural connectivity in networks linked to memory, attention, and analytical work. They also had more trouble recalling what they had just written and produced more generic prose. The authors describe this as a kind of cognitive debt: the tool does the synthesizing, and the brain stays quieter [1].The same experiment points to a better order of use. Students who first wrote unaided and only later switched to ChatGPT showed stronger recall and more widespread brain activity than students who started with the model and then had to work alone. In other words, the model helped more when it scaffolded thinking that was already underway than when it replaced that thinking from the start. The practical lesson is not that large language models should be banned. It is that they work best as a second pass, after the writer has already done the hard part of forming and remembering an argument [1].[Kosmyna, N., Hauptmann, E., Yuan, Y. T., Situ, J., Liao, X. H., Beresnitzky, A. V., Braunstein, I., & Maes, P. (2025). Your Brain on ChatGPT: Accumulation of Cognitive Debt when Using an AI Assistant for Essay Writing Task. arXiv. DOI: 10.48550/arXiv.2506.08872]
— Massimo (@Rainmaker1973) November 1, 2026
ಈ ರೀತಿ ಇರಲಿ ಎಐ ಬಳಕೆ
ಮುಂದುವರಿದು ಈ ಪ್ರಯೋಗವು ChatGPT ಅನ್ನು ಹೇಗೆ ಬಳಸಬೇಕು ಎಂಬುದನ್ನೂ ಸಹ ತಿಳಿಸಿದೆ. ಮೊದಲು ಯಾವುದೇ ಸಹಾಯವಿಲ್ಲದೆ ಸ್ವತಃ ಬರೆಯಲು ಆರಂಭಿಸಿ, ನಂತರ ChatGPT ಬಳಸಿದ ವಿದ್ಯಾರ್ಥಿಗಳಲ್ಲಿ ಉತ್ತಮ ಸ್ಮರಣಶಕ್ತಿ ಮತ್ತು ಹೆಚ್ಚು ಮೆದುಳಿನ ಚಟುವಟಿಕೆ ಕಂಡುಬಂದಿದೆ. ಆದರೆ, ಮೊದಲು ChatGPT ಸಹಾಯದಿಂದ ಬರೆದು, ನಂತರ ಸ್ವತಃ ಕೆಲಸ ಮಾಡಿದ ವಿದ್ಯಾರ್ಥಿಗಳಲ್ಲಿ ಇಂತಹ ಪರಿಣಾಮ ಕಡಿಮೆಯಾಗಿತ್ತು.
ಅಂದರೆ, ಮೊದಲಿನಿಂದಲೇ ChatGPT ಮೇಲೆ ಅವಲಂಬಿತರಾಗುವುದಕ್ಕಿಂತ, ನಾವೇ ಯೋಚನೆ ಮಾಡಿ ಬರೆದು ನಂತರ ಅದರ ಸಹಾಯ ಪಡೆಯುವುದು ಹೆಚ್ಚು ಪ್ರಯೋಜನಕಾರಿ. ನಿಖರವಾಗಿ ವಿಷಯವನ್ನು ಅರ್ಥಮಾಡಿಕೊಂಡು, ನಮ್ಮದೇ ಆಲೋಚನೆಗಳನ್ನು ರೂಪಿಸಿದ ಬಳಿಕ ChatGPT ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಆದ್ದರಿಂದ ChatGPT ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವೇನಿಲ್ಲ. ಆದರೆ, ನಮ್ಮ ಆಲೋಚನೆ ಮತ್ತು ಬರವಣಿಗೆಯ ಕೆಲಸವನ್ನು ಅದಕ್ಕೆ ಬಿಟ್ಟುಕೊಡಬಾರದು ಎನ್ನುವುದು ಈ ಅಧ್ಯಯನ ವರದಿಯ ಸಾರಾಂಶವಾಗಿದೆ.




Click it and Unblock the Notifications
