AI: ಎಐ ತಂತ್ರಜ್ಞಾನವುಳ್ಳ ಆಂಟಿ-ಡ್ರೋನ್ ಗಸ್ತು ವಾಹನ ಬಿಡುಗಡೆ, ಏನಿದರ ವಿಶೇಷ?
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಇಂದು ಎಲ್ಲೆಡೆ ಅಳವಡಿಸಿಕೊಳ್ಳಲಾಗುತ್ತಿದೆ. ಈಗ ದೇಶದ ರಕ್ಷಣಾ ಕ್ಷೇತ್ರಕ್ಕೂ ಎಐ ಕಾಲಿಟ್ಟಿದೆ. ಹೈದರಾಬಾದ್ ಮೂಲದ ಇಂದ್ರಜಾಲ್ ತನ್ನ ಹೊಸ ಆಂಟಿ-ಡ್ರೋನ್ ಗಸ್ತು ವಾಹನ "ಇಂದ್ರಜಾಲ್ ರೇಂಜರ್" ಅನ್ನು ಬಿಡುಗಡೆ ಮಾಡಿದೆ. ಇದು ಯುದ್ಧತಂತ್ರದ ಮತ್ತು ಗಡಿ ಭದ್ರತಾ ಪಾತ್ರಗಳಲ್ಲಿ ನಿಯೋಜನೆಗಾಗಿ ವಿನ್ಯಾಸಗೊಳಿಸಲಾದ ವಾಹನವಾಗಿದೆ. ಇದು ಚಲನೆಯಲ್ಲಿರುವಾಗ ಪ್ರತಿಕೂಲ ಡ್ರೋನ್‌ಗಳನ್ನು ಪತ್ತೆ ಹಚ್ಚಬಹುದು, ಟ್ರ್ಯಾಕ್ ಮಾಡಬಹುದು ಮತ್ತು ಅವುಗಳನ್ನು ಅಪಹರಿಸಬಹುದು ಎನ್ನಲಾಗಿದೆ.
ಇದನ್ನು ಸಕ್ರಿಯ ಗಡಿ ಕಾರ್ಯಾಚರಣೆಗಳು, ಬೆಂಗಾವಲು ರಕ್ಷಣೆ ಮತ್ತು ವಾಯುನೆಲೆಯ ಭದ್ರತೆಗಾಗಿ ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ. ಈ ಹೊಸ ಸಂಪೂರ್ಣ ಮೊಬೈಲ್ ಮತ್ತು ಎಐ ಸಕ್ರಿಯಗೊಳಿಸಿದ ಕೌಂಟರ್-ಡ್ರೋನ್ ವ್ಯವಸ್ಥೆಯನ್ನು ರಾಷ್ಟ್ರೀಯ ಭದ್ರತೆಯಲ್ಲಿನ ದುರ್ಬಲತೆಯನ್ನು ಪರಿಹರಿಸಲು, ಸಕ್ರಿಯವಾಗಿ ಚಲನೆಯಲ್ಲಿರುವಾಗ ಬೇರೆ ಡ್ರೋನ್‌ಗಳನ್ನು ಪತ್ತೆಹಚ್ಚಲು, ಟ್ರ್ಯಾಕ್ ಮಾಡಲು ಮತ್ತು ಅದನ್ನು ತಟಸ್ಥಗೊಳಿಸಲು ವಿನ್ಯಾಸ ಮಾಡಲಾಗಿದೆ.

ರೇಂಜರ್ ಸಾಂಪ್ರದಾಯಿಕ, ಸ್ಥಿರ ಡ್ರೋನ್ ವಿರೋಧಿ ಪರಿಹಾರಗಳಿಂದ ದೂರವಿರಲು ವಿನ್ಯಾಸಗೊಳಿಸಲಾದ ಯುದ್ಧ ವಾಹನ. ಇದರ ಪ್ರಮುಖ ಸಾಮರ್ಥ್ಯವು ಚಲಿಸುವಾಗ ಡ್ರೋನ್ ಪತ್ತೆ, ನೈಜ-ಸಮಯದ ಗಸ್ತು ಮತ್ತು ಗಡಿಯಾಚೆಗಿನ ಬೆದರಿಕೆಗಳ ಹೆಚ್ಚುತ್ತಿರುವ ಅತ್ಯಾಧುನಿಕತೆಯಿಂದ ಇದು ಅಗತ್ಯ ಎನ್ನಲಾಗಿದೆ. ಪ್ರತಿ ಡ್ರೋನ್ ಅನ್ನು ತಟಸ್ಥಗೊಳಿಸುವುದರಿಂದ ಜೀವಗಳನ್ನು ರಕ್ಷಿಸಲಾಗುತ್ತದೆ. ಇದರಿಂದ ಭಾರತದ ಆಂತರಿಕ ಭದ್ರತೆ ಬಲಪಡಿಸಲಾಗುತ್ತದೆ. ಇಂದ್ರಜಾಲ್‌ನಲ್ಲಿ ಇದು ನಮ್ಮ ಪ್ರಾಥಮಿಕ ಧ್ಯೇಯ ಎಂದು ಇಂದ್ರಜಾಲ್ ಸಿಇಒ ಮತ್ತು ಸಂಸ್ಥಾಪಕರಾದ ಕಿರಣ್ ರಾಜು ಹೇಳಿದ್ದಾರೆ.
ಇಂದ್ರಜಾಲ್ ಏನೆಲ್ಲ ಮಾಡುತ್ತೆ?
ಪ್ರತಿಕೂಲ ಡ್ರೋನ್‌ಗಳನ್ನು ಪ್ರತಿಬಂಧಿಸುವ ಮೂಲಕ ನಮ್ಮ ಈ ವ್ಯವಸ್ಥೆಯು ಮಾದಕ ದ್ರವ್ಯಗಳು ದೇಶವನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ನಗರ ಕೇಂದ್ರಗಳಿಗೆ ಅಕ್ರಮ ಶಸ್ತ್ರಾಸ್ತ್ರಗಳ ಒಳಹರಿವನ್ನು ಸಹ ತಡೆಯುತ್ತದೆ. ಸೂಕ್ಷ್ಮ ಗಡಿ ವಲಯಗಳಲ್ಲಿ ವಾಸಿಸುವ ರೈತರನ್ನು ರಕ್ಷಿಸುತ್ತದೆ ಎಂದು ವಿವರಿಸಿದ್ದಾರೆ. ವಿಮಾನ ನಿಲ್ದಾಣಗಳು, ಗಡಿಗಳು, ಸಂಸ್ಕರಣಾಗಾರಗಳು, ಸಮುದ್ರ ಬಂದರುಗಳು, ನಗರಗಳು ಮತ್ತು ಮಿಲಿಟರಿ ರಚನೆಗಳನ್ನು ಅಭೂತಪೂರ್ವ ಪ್ರಮಾಣದಲ್ಲಿ ರಕ್ಷಿಸುವಲ್ಲಿ ಈ ಇಂದ್ರಜಾಲ್ ನೆರವಾಗಲಿದೆ ಎಂದು ತಿಳಿದುಬಂದಿದೆ.
ಇಂದ್ರಜಾಲ್ ರೇಂಜರ್ ಅಧಿಕೃತವಾಗಿ ಅನಾವರಣಗೊಂಡಿದೆ. ಈಗಾಗಲೇ ಪಂಜಾಬ್ ಪೊಲೀಸ್ ಮತ್ತು ಬಿಎಸ್‌ಎಫ್ ಜೊತೆಗೆ ಕಾರ್ಯನಿರ್ವಹಿಸುತ್ತಿದೆ. ಸ್ವಾಯತ್ತ ಡ್ರೋನ್ ವಿರೋಧಿ ರಕ್ಷಣೆ ಮತ್ತು ಗಡಿ ಕಣ್ಗಾವಲಿನಲ್ಲಿ ಇದು ಒಂದು ಪ್ರಮುಖವಾದ ಹೆಜ್ಜೆ ಎನ್ನಲಾಗಿದೆ. ಇದು ಗಡಿ ಪ್ರದೇಶಗಳು ಮತ್ತು ನಗರ ವಲಯಗಳಲ್ಲಿ ವಿರೋಧಿ ಡ್ರೋನ್‌ಗಳನ್ನು ನಿಲ್ಲಿಸಲು ವಿನ್ಯಾಸಗೊಳಿಸಲಾದ ಆಂಟಿ-ಡ್ರೋನ್ ಗಸ್ತು ವಾಹನವಾಗಿದೆ. ಇದರಲ್ಲಿ ಸಂಯೋಜಿತ ಸೈಬರ್ ಟೇಕ್ಓವರ್ ಘಟಕ, ಆರ್‌ಎಫ್ ಜಾಮಿಂಗ್ ಮತ್ತು ಸ್ಪ್ರಿಂಗ್-ಲೋಡೆಡ್ ಕಿಲ್ ಸ್ವಿಚ್‌ನೊಂದಿಗೆ, ರೇಂಜರ್ 4 ಕಿ.ಮೀ ಯುದ್ಧ ಭೂಮಿಯಲ್ಲಿ ಡ್ರೋನ್‌ಗಳನ್ನು ತಟಸ್ಥಗೊಳಿಸುತ್ತದೆ.












Click it and Unblock the Notifications