AI ಅಂದ್ರೆ ಭಯ ಏಕೆ? ಭವಿಷ್ಯದಲ್ಲಿ ಲಾಭವೇ ಜಾಸ್ತಿ
ಸಾಮಾನ್ಯವಾಗಿ ವಿಶ್ವದಲ್ಲಿ ಉದ್ಯೋಗ ಕಡಿತಗಳು ನಡೆಯುತ್ತಲೇ ಇವೆ. ಇದಕ್ಕೆ ಕಾರಣಗಳನ್ನು ಕೇಳಿದರೆ ಕಂಪನಿಯ ಮುಖ್ಯಸ್ಥರು ಹೇಳುವ ಪದ AI. ಆದರೆ ಕೃತಕ ಬುದ್ಧಿಮತ್ತೆಯು ಹೊಸ ಸಾಧ್ಯತೆಗಳಿಗೆ ಜನ್ಮ ನೀಡುತ್ತಿವೆ. ಮಾನವರು ಹಾಗೂ ಕೃತಕ ಬುದ್ಧಿಮತೆಯ ನಡುವೆ ಅಂತರ ಹಲವು ಉದ್ಯೋಗ ಸೃಷ್ಟಿಗೆ ಕಾರಣವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮುಖೇನವೂ AI ಹಲವು ಉದ್ಯೋಗಗಳನ್ನು ಸೃಷ್ಟಿಸಬಲ್ಲದು.
ಒಂದಂತೂ ನಿಜ ತಂತ್ರಜ್ಞಾನ ಎಷ್ಟೆ ಮುಂದುವರೆದ್ರೂ ಸಹ ಅದು ಮಾನವನ ಬುದ್ಧಿಮತ್ತೆಗೆ ಸ್ಪರ್ಧೆ ಒಡ್ಡುವುದು ಕಷ್ಟ. ಕಾರಣ ಈ ತಂತ್ರಜ್ಞಾನ ಎಂಬುವ ಹೊಸ ಆವಿಷ್ಕಾರಕ್ಕೆ ಕಾರಣವಾದವನೇ ಮಾನವ. ಹೀಗಾಗಿ ಹೊಸ ತಂತ್ರಜ್ಞಾನ ಬಳಸಿಕೊಂಡು ಜೀವನದ ಹೊಸ ಮೆಟ್ಟಿಲುಗಳನ್ನು ಏರಲು ಉದಯೋನ್ಮುಖ ಉದ್ಯೋಗಿಗಳು ಸಿದ್ಧತೆ ನಡೆಸಿದ್ದಾರೆ. ಜನ ಹೊಸ ತಂತ್ರಜ್ಞಾನಕ್ಕೆ ಯೂಸ್ ಟೂ ಆಗ್ತಾ ಇದ್ದಾರೆ. ಇದರಿಂದ ಹೊಸದನ್ನು ಕಲಿಯುತ್ತಾ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ.

ಸಾಮಾಜಿಕ ತಾಣಗಳನ್ನು ಈಗ ತೆರೆದರೆ ಸಾಕು AI ಜಗತ್ತು ನಿಮ್ಮನ್ನು ಕೈ ಬೀಸಿ ಕರೆಯುತ್ತದೆ. ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಎಕ್ಸ್ ಸೇರಿದಂತೆ ಹಲವು ಸಾಮಾಜಿಕ ತಾಣಗಳಲ್ಲಿ ಈ ಕುರಿತಾದ ಚರ್ಚೆಗಳು ದಿನವೂ ಆರಂಭವಾಗುತ್ತವೆ. ಅಲ್ಲದೆ ಇದೇ ಫ್ಲಾಟ್ ಫಾರ್ಮ್‌ಗಳಲ್ಲಿ AI ಕೋರ್ಸ್‌ಗಳನ್ನು ಸ ನೀಡಲಾಗುತ್ತಿದೆ. ಈ ಮೂಲಕ ಭವಿಷ್ಯಕ್ಕೆ ನಿಮ್ಮನ್ನು ನೀವು ಸಿದ್ಧ ಪಡಿಸಿಕೊಳ್ಳಲು ಸಾಮಾಜಿಕ ತಾಣಗಳು ಅವಕಾಶವನ್ನು ನೀಡುತ್ತವೆ.
ಅಂದಹಾಗೆ ಕ್ಯಾಲ್‌ಕ್ಯುಲೇಟರ್, ಗಣಕಯಂತ್ರಗಳು ಬಂದಾಗಲೂ ಇಂತಹದ್ದೇ ಉದ್ಯೋಗ ಭೀತಿ ಎಲ್ಲರಲ್ಲೂ ಕಾಡಿತ್ತು. ಆದರೆ ಇದು ಅನಿವಾರ್ಯ ಎಂದು ತಿಳಿದು ಜನರು ಇದರ ಬೆನ್ನು ಹತ್ತಿ ಕಲಿತರು. ಈಗ ಹೊಸ ತಂತ್ರಜ್ಞಾನವೊಂದು ಸವಾಲಿನಂತೆ ಬಂದು ನಿಂತಿದೆ. ಈ ಸವಾಲನ್ನು ಸಹ ಮೆಟ್ಟನಿಂತಲ್ಲಿ ವಿಪುಲ ಅವಕಾಶಗಳು ಆಸಕ್ತರನ್ನು ಕೈ ಬಿಸಿ ಕರೆಯುತ್ತಿವೆ.
AI ತಂತ್ರಜ್ಞಾನದಲ್ಲಿನ ಉದ್ಯೋಗ ಅವಕಾಶ
- AI ಜಟಿಲತೆಯನ್ನು ಅರ್ಥಮಾಡಿಕೊಂಡು ವ್ಯವಹಾರಕ್ಕೆ ಅಗತ್ಯ ಜ್ಞಾನ ನೀಡುವರಿಗೆ ಬೇಡಿಕೆ ಹೆಚ್ಚು
- AI ತರಬೇತುದಾರರಿಗೆ ಹೆಚ್ಚಿನ ಬೇಡಿಕೆ
- AI ಮೂಲಕ ಉತ್ಪನ್ನದ ಬ್ರ್ಯಾಂಡಿಂಗ್ ಮಾಡುವವರಿಗೆ, ಉತ್ಪನ್ನ ವಿನ್ಯಾಸಕರಿಗೆ ಬೇಡಿಕೆ ಹೆಚ್ಚು
- ಚಲನಚಿತ್ರ, ವೆಬ್‌ಸಸರಣಿ ರಚಿಸುವ AI ಕಥಾ ವಿನ್ಯಾಸಕರಿಗೆ ಹೆಚ್ಚು ಮನ್ನಣೆ ಸಿಗಬಹುದು.
- ಜಾಹಿರಾತು ಕ್ಷೇತದಲ್ಲೂ ಇದನ್ನು ಹೇರಳವಾಗಿ ಬಳಸಬಹುದು.
- ಗೇಮಿಂಗ್ ಜಗತ್ತಿನಲ್ಲಿ ಕೆಲಸ ಮಾಡುವ ವಿನ್ಯಾಸಕರು ಸಹ ಇದರ ಲಾಭವನ್ನು ಪಡೆಯಬಹುದಾಗಿದೆ.












Click it and Unblock the Notifications