Get Updates
Get notified of breaking news, exclusive insights, and must-see stories!

Artificial intelligence: ಎಐನಿಂದ ರಚಿಸಲಾದ ನಕಲಿ ಟ್ರೇಲರ್ ಬಗ್ಗೆ ನಟ ಅಕ್ಷಯ್ ಕುಮಾರ್ ಹೇಳಿದ್ದೇನು ಗೊತ್ತಾ?

Artificial intelligence: ಇದೀಗ ಯಾವ ಕ್ಷೇತದಲ್ಲಿ ನೋಡಿದರೂ ಎಐನದ್ದೇ ಸದ್ದು ಜೋರಾಗಿದೆ. ಈ ತಂತ್ರಜ್ಞಾನ ಬಂದಾಗನಿಂದ ಕೆಲಸದ ವೇಗ ಹೆಚ್ಚಾಗಿದ್ದು, ಉದ್ಯೋಗಿಗಳ ಮೇಲಿನ ಒತ್ತಡ ಕಡಿಮೆ ಆದಂತಾಗಿದೆ. ಆದರೆ, ಕೆಲ ಕಡಿಗೇಡಿಗಳು ಇದನ್ನು ದುರ್ಬಳಕೆ ಮಾಡಿಕೊಂಡು ಅವಹೇಳನಕಾರಿ ವಿಡಿಯೋಗಳನ್ನು ರಚಿಸುತ್ತಿದ್ದಾರೆ. ಹಾಗೆಯೇ ಇದೀಗ ನಟ ಅಕ್ಷಯ್ ಕುಮಾರ್ ಅವರದ್ದು ಎನ್ನಲಾದ ಟ್ರೇಲರ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಅಕ್ಷಯ್ ಕುಮಾರ್ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಟ ಅಕ್ಷಯ್ ಕುಮಾರ್ ಅಭಿನಯಿಸಿದ್ದಾರೆ ಎನ್ನಲಾದ ಮಹರ್ಷಿ ವಾಲ್ಮೀಕಿ ಸಿನಿಮಾದ ಟ್ರೇಲರ್ ಹರಿದಾಡುತ್ತಿದೆ. ಈ ಬಗ್ಗೆ ಅಕ್ಷಯ್ ಕುಮಾರ್‌ ತಮ್ಮ ಟ್ವೀಟ್‌ ಖಾತೆಯ ಮೂಲಕ ಪ್ರತಿಕ್ರಿಯಿಸಿ ಸ್ಪಷ್ಟನೆಯನ್ನೂ ಕೂಡ ನೀಡಿದ್ದಾರೆ.

Actor Akshay Kumar Clarifies on Fake AI-Generated Maharshi Valmiki Trailer

"ನಾನು ಮಹರ್ಷಿ ವಾಲ್ಮೀಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಬಿಂಬಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅದು ನಾನಲ್ಲ, ಎಐ ಬಳಕೆ ಮಾಡಿಕೊಂಡು ಮಾಡಿರುವ ನಕಲಿ ಟ್ರೇಲರ್ ಎಂದು ನಟ ಅಕ್ಷಯ್ ಕುಮಾರ್," ತಮ್ಮ ಟ್ವೀಟ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ.

"ಎಐ ಬಳಕೆ ಮಾಡಿಕೊಂಡು ದಾರಿ ತಪ್ಪಿಸುವ ಮಾಹಿತಿಗಳನ್ನು ಹರಿಬಿಡಲಾಗುತ್ತಿದೆ. ಕೆಲ ಸುದ್ದಿ ಮಾಧ್ಯಮಗಳು ಸಹ ಸಿನಿಮಾದ ಬಗ್ಗೆ ಸರಿಯಾದ ಮಾಹಿತಿ ಪಡೆಯದೆ ಸುದ್ದಿ ಮಾಡುತ್ತಿವೆ. ದಯವಿಟ್ಟು ಮಾಧ್ಯಮಗಳು ಪರಿಶೀಲನೆ ಮಾಡಿದ ಬಳಿಕ ಈ ರೀತಿಯ ಸುದ್ದಿಗಳನ್ನು ಪ್ರಕಟ ಮಾಡಿ," ಎಂದು ಮನವಿ ಮಾಡಿಕೊಂಡಿದ್ದಾರೆ. ಎಐ ಬಳಕೆ ಮಾಡಿಕೊಂಡು ಇಂತಹ ಫೇಕ್‌ ವಿಡಿಯೋ ರಚನೆ ಮಾಡಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಹಲವು ನಟ, ನಟಿಯರು, ನಿರ್ದೇಶಕರು, ರಾಜಕಾರಣಿಗಳ ಫೇಕ್‌ ವಿಡಿಯೋಗಳನ್ನು ಸೃಷ್ಟಿಸಿರುವ ಉದಾಹರಣೆಗಳಿವೆ.

ಈ ಆಧುನಿಕ ಯುಗದಲ್ಲಿ ತಂತ್ರಜ್ಞಾನದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿಗಳು ಆಗುತ್ತಿವೆ. ಮತ್ತೊಂದೆಡೆ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಸದ್ಬಳಕೆಗಿಂತ ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ಕಿಡಿಗೇಡಿಗಳು ಇದೀಗ ಟ್ರೆಂಡಿಂಗ್‌ನಲ್ಲಿರುವ ಎಐ ಬಳಸಿಕೊಂಡು ಅವಹೇಳನಕಾರಿ ವಿಡಿಯೋ ರಚಿಸುವ ಮೂಲಕ ಹಣ ಪೀಕುತ್ತಿದ್ದಾರೆ. ಹಣ ಕೊಡದಿದ್ದರೆ, ಕ್ರಿಯೆಟ್‌ ಮಾಡಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿಯೂ ಬೆದರಿಕೆ ಹಾಕಿರುವ ಘಟನೆಗಳು ನಡೆದಿವೆ.

ಹೀಗೆ ಎಐ ಟೂಲ್‌ಗಳನ್ನು ಬಳಕೆ ಮಾಡಿಕೊಂಡು ಸೈಬರ್ ಕ್ರೈಂಗಳನ್ನು ಮಾಡುತ್ತಿದ್ದು, ಇದನ್ನು ಮಟ್ಟ ಹಾಕುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ, ಆದರೂ ಕ್ಯಾರೆ ಅನ್ನದೇ ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಹಣ ಪೀಕುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಹೀಗೆ ತಂತ್ರದಲ್ಲೇನೋ ಅಭಿವೃದ್ಧಿಯಾಗುತ್ತಿದೆ. ಆದರೆ, ಇದನ್ನು ನಿಯಂತ್ರಣದಲ್ಲಿಡುವ ಕ್ರಮ ಇನ್ನೂ ಜಾರಿಯಾಗಿಲ್ಲ. ಇದರಿಂದ ಸಹಾಯಕ್ಕಿಂತ ಅಪಾಯಕಾರಿಯೇ ಹೆಚ್ಚಾಗುತ್ತಿದೆ. ಒಂದು ವೇಳೆ ಇದನ್ನು ನಿಯಂತ್ರಣಕ್ಕೆ ತರದಿದ್ದರೆ, ಮುಂದಿನ ದಿನಗಳಲ್ಲಿ ಇನ್ನೇನು ಅನಾಹುತಗಳು ಸೃಷ್ಟಿಯಾಗುತ್ತವೆಯೋ ಗೊತ್ತಿಲ್ಲ ಎನ್ನುವ ಆತಂಕ ಜನರದ್ದಾಗಿದೆ. ಈಗಾಗಲೇ ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಐ ಟೂಲ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಆದ್ದರಿಂದ ಮನೆಗಳಲ್ಲಿ ಪೋಷಕರು ತಮ್ಮ ಮಕ್ಕಳು ಫೋನ್‌ ಅನ್ನು ಹೆಚ್ಚು ಯಾವ ಉದ್ದೇಶಕ್ಕೆ ಬಳಕೆ ಮಾಡುತ್ತಾರೆ ಎಂಬುದನ್ನು ಗಮನಿಸುವುದು ಉತ್ತಮ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+