ಕರ್ನಾಟಕದಲ್ಲಿ 15,785 ಹೊಸ ಕೋವಿಡ್ ಪ್ರಕರಣ ಪತ್ತೆ


ಬೆಂಗಳೂರು, ಏಪ್ರಿಲ್ 19; ಕರ್ನಾಟಕದಲ್ಲಿ 15,785 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿನ ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 11,76,850ಕ್ಕೆ ಏರಿಕೆಯಾಗಿದೆ.

ಆರೋಗ್ಯ ಇಲಾಖೆ ಸೋಮವಾರದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ರಾಜ್ಯದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,42,084ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 721.

ಬೆಂಗಳೂರಲ್ಲಿ ಕೋವಿಡ್ ಪರಿಸ್ಥಿತಿ; ಲಾಕ್ ಡೌನ್‌ ಜಾರಿಗೆ ವಿರೋಧ

ಇಂದು ರಾಜ್ಯದಲ್ಲಿ 7098 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ 1021250 ಜನರು ಗುಣಮುಖಗೊಂಡಿದ್ದಾರೆ. ಇಂದು ರಾಜ್ಯದಲ್ಲಿ 146 ಜನರು ಮೃತಪಟ್ಟಿದ್ದಾರೆ. ಇದುವರೆಗೂ ಮೃತಪಟ್ಟವರ ಸಂಖ್ಯೆ 13,497.

ಮೇ 1ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯಬಹುದು

Advertisement
Advertisement

ರಾಜ್ಯದಲ್ಲಿ 9591 ಆಂಟಿಜೆನ್, 113621 ಆರ್‌ಟಿಪಿಸಿಆರ್ ಸೇರಿದಂತೆ ಒಟ್ಟು 123212 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ. ಇದುವರೆಗೂ ರಾಜ್ಯದಲ್ಲಿ 9520801 ಮಾದರಿಗಳ ಕೋವಿಡ್ ಪರೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಮೈಸೂರು; ನಕಲಿ ರೆಮ್ಡೆಸಿವಿರ್ ಔಷಧ ಮಾರಾಟ ಜಾಲ ಪತ್ತೆ

ಯಾವ ಜಿಲ್ಲೆ ಎಷ್ಟು?; ಬೆಂಗಳೂರು ನಗರದಲ್ಲಿ ಇಂದು 9,618 ಹೊಸ ಪ್ರಕರಣ ಪತ್ತೆಯಾಗಿದೆ. ನಗರದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 103178.

ಉಳಿದಂತೆ ದಕ್ಷಿಣ ಕನ್ನಡ 218, ಹಾನಸ 320, ಧಾರವಾಡ 283, ಕಲಬುರಗಿ 513, ಮೈಸೂರು 568, ರಾಯಚೂರು 228, ತುಮಕೂರು 652, ವಿಜಯಪುರ 302, ಬೀದರ್ 318 ಹೊಸ ಪ್ರಕರಣ ದಾಖಲಾಗಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ವಿಮಾನ ಹಾರಾಟ ರದ್ದುಗೊಳಿಸಿದ ಏರ್‌ ಇಂಡಿಯಾ! | Oneindia Kannada

ಬಾಗಲಕೋಟೆ 97, ಬಳ್ಳಾರಿ 248, ಬೆಳಗಾವಿ 115, ಬೆಂಗಳೂರು ಗ್ರಾಮಾಂತರ 180, ಚಾಮರಾಜನಗರ 108, ಚಿಕ್ಕಬಳ್ಳಾಪುರ 175, ಚಿಕ್ಕಮಗಳೂರು 142, ದಾವಣಗೆರೆ 199, ಯಾದಗಿರಿ 190 ಹೊಸ ಪ್ರಕರಣ ದಾಖಲಾಗಿದೆ.

Read more...

English Summary

Karnataka reported 15,785 new COVID 19 cases. State total tally jumped ti 11,76,850. State active cases number 1,42,084.