ಜೋಕು:ಕನ್ನಡ ಚಿತ್ರರಂಗಕ್ಕೆ ಸಾನಿಯಾ ಮಿರ್ಜಾ !
ಸಾನಿಯಾ ಮಿರ್ಜಾ ಕನ್ನಡ ಚಿತ್ರರಂಗಕ್ಕೆ ಬಂದರೆ ನಾಯಕ ಯಾರಾಗುವರೆಂದು ಒಮ್ಮೆ ಯೋಚಿಸಿದ್ದಿರಾ...?
ಮತ್ತಿನ್ಯಾರು ಸ್ವಾಮಿ.. ನಮ್ಮ ಟೆನ್ನಿಸ್ ಕೃಷ್ಣ ಅಲ್ಲವೇ....!!!!!
***
ಪೋಷಕರು ಮಕ್ಕಳನ್ನು ಕಾಲೇಜ್ ಗೆ ಏಕೆ ಕಳುಹಿಸುತ್ತಾರೆ..? ತನ್ನ ಮಕ್ಕಳು ನಾಲ್ಕಕ್ಷರ ಕಲೀಲಿ ಅಂತ..
ಅದಕ್ಕೆ ಅವರು ಬರೀ ನಾಲ್ಕೇ ಅಕ್ಷರ ಕಲೀತಾ ಇರೋದು...
ಏನು ಗೊತ್ತಾ... ಅದೇ ರೀ " L O V E"
***
ಕವಿತೆಗೂ ಪ್ರಬಂಧಕ್ಕೂ ಇರುವ ವ್ಯತ್ಯಾಸವನ್ನು ವಿವರಿಸಿ...
ಉತ್ತರ : ಗೆಳತಿಯ ಬಗ್ಗೆ ಮಾತನಾಡಿದರೆ ಅದು ಕವಿತೆಯಾಗುವುದು.
ಹೆಂಡತಿಯ ಬಗ್ಗೆ ಮಾತನಾಡಿದರೆ ಅದು ಪ್ರಬಂಧವಾಗುವುದು..!!!!
***
ರಾಮು ಹೊಟೆಲ್ ನಲ್ಲಿ :- ಏನೇನಿದೆ..?
ವ್ಯೈಟರ್ : ಚಿಕನ್ ಬಿರಿಯಾನಿ, ಚಿಕನ್ ಮಸಾಲ, ಚಿಕನ್ ತಂದೂರಿ, ಚಿಕನ್ ಸುಕ್ಕಾ, ಚಿಕನ್ ಫ್ರೈ, ಚಿಕನ್ ಬೋನ್ ಲೆಸ್, ಚಿಕೆನ್ ಲಾಲಿಪಪ್
ರಾಮು : ಎನಿ ನ್ಯೂ ಐಟಮ್..? ಯಾವುದಾದರೂ ಹೊಸ ತರಹ ಇದೆಯಾ..?
ವ್ಯೈಟರ್ : ಇದೆ ಸಾರ್. ಚಿಕನ್ ಗುನ್ಯಾ....!!!!
ಜೋಕು ಹೇಳಿದವರು: ಸುನಿಲ್ ಕುಮಾರ್, ಬೆಂಗಳೂರು












Click it and Unblock the Notifications