ಹಾಸ್ಯ: ಐದುಕೋಟಿ ಕನ್ನಡಿಗರ ಸಂತೋಷದ ಗುಟ್ಟು
ಇಂಡಿಯನ್ ಏರ್ಲೈನ್ಸ್ ವಿಮಾನ ಅದು. ಕುಮಾರಣ್ಣ, ಧರಂಸಿಂಗು, ಯಡ್ಯೂರಪ್ಪ ಮೂರೂ ಜನ ಸೇರಿಕೊಂಡು ದೆಹಲಿಗೆ ಹೊರಟಿದ್ದರು. ಸಡನ್ನಾಗಿ ತನ್ನ ಜೇಬಿನಿಂದ ನೂರು ರೂಪಾಯಿ ತೆಗೆದ ಕುಮಾರಣ್ಣ, "ಇದನ್ನು ನಾನು ಕೆಳಗೆ ಎಸೀತೀನಿ, ಇದು ಯಾರೋ ಒಬ್ಬ ಕನ್ನಡಿಗನಿಗೆ ಸಿಗುತ್ತೆ. ಆಗ ನಾನು ಆಟ್ಲೀಸ್ಟ್ ಒಬ್ಬ ಕನ್ನಡಿಗನನ್ನು ಸಂತೋಷಪಡಿಸಿದಂತಾಗುತ್ತದೆ" ಅಂದರು.
ಅದನ್ನು ಕೇಳಿ ನಮ್ಮ ಕಾಂಗ್ರೆಸ್ ಕಲಿ ಧರಂಸಿಂಗ್ ಅಧ್ಹೇಗೆ ಸುಮ್ಮನಿದ್ದಾರು? ಐವತ್ತು ರೂಪಾಯಿಯ ಎರಡು ನೋಟು ತೆಗೆದು "ಇದನ್ನು ಕೆಳಗೆ ಎಸೆದು ನಾನು ಇಬ್ಬರು ಕನ್ನಡಿಗರನ್ನು ಸಂತೋಷಪಡಿಸ್ತೀನಿ ಅಂದ್ರು. ತಕ್ಷಣ ಯಡ್ಡ್ಯೂರಿ ತನ್ನ ಸಫಾರಿ ಜೇಬುಗಳಿಂದ ಒಂದೊಂದು ರೂಪಾಯಿಯ ನೂರು ನಾಣ್ಯ ತೆಗೆದು "ಇವುಗಳನ್ನು ಎಸೆದರೆ ನೂರು ಜನ ಕನ್ನಡಿಗರು ಸಂತೋಷ ಪಡ್ತಾರೆ ಗೊತ್ತಾ?" ಅಂದ್ರು. (ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ, ಇವ್ರುಗಳ್ಯಾರೂ ಕೊನೆಗೂ ಒಂದಪ ಪೈಸಾನೂ ಕೆಳಗೆ ಎಸೀಲಿಲ್ಲ ಅನ್ನೋದು)
ಇದನ್ನೆಲ್ಲ ಕೇಳಿಸಿಕೊಂಡ ಗಗನಸಖಿ ಮೆಲ್ಲನೆ ಅವರ ಬಳಿ ಬಂದು ಹೇಳಿದಳು. "ಈಗ್ ನಾನು ನಿಮ್ಮ ಮೂರೂ ಜನಾನೂ ಎತ್ತಿ ಹೊರಗೆಸೆದರೆ, ಐದುಕೋಟಿ ಕನ್ನಡಿಗರೂ ಸಂತೋಷಪಡ್ತಾರೆ ಗೊತ್ತಾ?"
ಜೋಕ್ ಕಳಿಸಿದವರು : ಗು.ಹರೀಶ, ಸಿಡ್ನಿ












Click it and Unblock the Notifications