ಜೋಕ್ಸ್: ಯಾವತ್ತೂ ಸ್ಕೂಲಿಗೆ ಹೋಗದ ಕಿಡ್ನಿ ನಪಾಸಾಗಿದ್ದು!
ಒಮ್ಮೆ ತಿಮ್ಮ ಆರೋಗ್ಯ ಸರಿ ಇಲ್ಲದ ಕಾರಣ ಡಾಕ್ಟರ್ ಬಳಿಗೆ ಹೋಗುತ್ತಾನೆ,
ಡಾಕ್ಟರ್: ನಿನ್ನ ಅನಾರೋಗ್ಯಕ್ಕೆ ಕಾರಣ ಕಿಡ್ನಿ ಫೇಲ್ ಆಗಿರುವುದೇ...!!!
ತಿಮ್ಮ: ಏನ್ಮಾತಾಡ್ತಾ ಇದ್ದೀರಾ ಸಾರ್... ನನ್ನ ಕಿಡ್ನಿ ಯಾವತ್ತೂ ಸ್ಕೂಲಿಗೇ ಹೋಗಿಲ್ಲ ಅದೆಂಗ್ ಫೇಲ್ ಆಗುತ್ತದೆ.
****
ಒಮ್ಮೆ ಗುಂಡ ಮತ್ತು ತಿಮ್ಮ ಪುರಾತನ ವಸ್ತು ಸಂಗ್ರಹಾಲಯಕ್ಕೆ ಹೋಗುತ್ತಾರೆ. ಅಲ್ಲಿ ಈಜಿಪ್ಟ್ ಮಮ್ಮಿಯನ್ನು ನೋಡಿ
ಗುಂಡ: ಡೌಟೇ ಇಲ್ಲ ಇದಕ್ಕೆ ಇಷ್ಟು ಬ್ಯಾಂಡೇಜ್ ಸುತ್ತಿದ್ದಾರೆಂದರೆ ಖಚಿತವಾಗಿ ಇದು ಲಾರಿ ಆಕ್ಸಿಡೆಂಟ್ ಕೇಸೇ ಆಗಿರಬೇಕು ಎಂದು ಆಶ್ಚರ್ಯ ವ್ಯಕ್ತಪಡಿಸಿದ.
ತಿಮ್ಮ: ನೀನೇಳೋದು ಕರೆಕ್ಟ್ ಕಣೋ. ಆಕ್ಸಿಡೆಂಟ್ ಮಾಡಿದ ಲಾರಿ ನಂಬರ್ BC 1760 ಅಂತಲೂ ಬರೆದಿದ್ದಾರೆ ಎಂದ.
****
ಅತ್ತೆ : ನೋಡಮ್ಮಾ ಅಕ್ಕಿಯನ್ನು ಚೆನ್ನಾಗಿ ತೊಳೆದು ಸ್ಟೌವ್ ಮೇಲೆ ಇಡು.
ಸೊಸೆ: ಅಕ್ಕಿ ಯಾವ ಸೋಪಲ್ಲಿ ತೊಳೆಯ ಬೇಕು ಅತ್ತೆ...?
ಅತ್ತೆ : ಆಂ...ಎಂದವಳೆ ಇಂತ ಸೊಸೆ ಸಿಕ್ಕ ಸೌಭಾಗ್ಯಕ್ಕೆ ತಲೆ ಮೇಲೆ ಕೈಹೊತ್ತಿ ಕುಳಿತಳು.












Click it and Unblock the Notifications