ಹಾಸ್ಯ ಚಟಾಕಿ: ಲಾಲೂ ರೈಲ್ವೆಗೆ ಮೋಸ ಮಾಡಿದ್ದು
ಲಾಲೂ ರೈಲ್ವೆಯನ್ನು ಮೋಸಗೊಳಿಸಬೇಕೆನಿಸಿದರೆ ಏನು ಮಾಡುತ್ತಾನೆ? ರೈಲ್ವೆ ಟಿಕೆಟನ್ನು ಖರೀದಿಸುತ್ತಾನೆ. ಆದರೆ ಪ್ರಯಾಣ ಮಾಡುವುದಿಲ್ಲ.
****
ಲಾಲೂ : ರೈಲಿನ ಟಾಯ್ಲೆಟ್ನಲ್ಲಿ ನನ್ನ ರೊಲೆಕ್ಸ್ ವಾಚ್ ಬಿದ್ದು ಹೋಯಿತು.
ಸ್ನೇಹಿತ: ರೈಲನ್ನು ನಿಲ್ಲಿಸಲು ಚೈನನ್ನು ಎಳೆಯಬೇಕಿತ್ತು.
ಲಾಲೂ: ಅನೇಕ ಸಲ ಎಳೆದೆ. ರೈಲು ನಿಲ್ಲಲಿಲ್ಲ. ಆದರೆ ಚೈನ್ ಎಳೆದಾಗಲೆಲ್ಲ ನೀರು ಬರ್ತಾ ಇತ್ತು!
****
ರೈಲು ಬರುತ್ತಿರುವಂತೆ ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ಲಾಲೂ ಹಳಿಗಳ ಮೇಲೆ ಜಿಗಿದ. ಅದನ್ನು ಕಂಡು ಅಲ್ಲಿದ್ದವನೊಬ್ಬ '' ಅಬೆ ಮರನಾ ಹೈ ಕ್ಯಾ?'' ಎಂದು ಜೋರಾಗಿ ಕೂಗಿದ.
ಅದಕ್ಕೆ ಲಾಲೂ ಹೇಳಿದ-''ಅಬೆ, ಮರೇಗಾ ತೋ ತು, ಸುನಾ ನಹೀ... ಟ್ರೇನ್ ಪ್ಲಾಟ್ಫಾರ್ಮ್ ಪೆ ಆ ರಹಾ ಹೈ!''
****
ಪತ್ರಕರ್ತರೊಬ್ಬರು ಲಾಲೂನನ್ನು ಪ್ರಶ್ನಿಸಿದರು, ''ವಿವಾಹ ವಿಚ್ಛೇದನಕ್ಕೆ ಬಹು ಮುಖ್ಯ ಕಾರಣವೇನು?''
ಅದಕ್ಕೆ ಲಾಲೂ ''ಮದುವೆ'' ಎಂದು ಉತ್ತರಿಸಿದ.
(ದಟ್ಸ್ಕನ್ನಡ ಜೋಕ್ಸ್)












Click it and Unblock the Notifications