ಇವತ್ತಿನ ತಾಜಾ ಜೋಕು : ಕುಮಾರಣ್ಣನ ಅವಾಂತರ!
ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ದೊಂಬರಾಟದಿಂದ ಜನರು ಅಸಹ್ಯಗೊಂಡಿದ್ದಾರೆ. ರಾಜಕಾರಣ ತಲುಪಿದ ಸ್ಥಿತಿ ನೋಡಿ ಛೇ ಛೇ ಅನ್ನುತ್ತಿದ್ದಾರೆ. ಮತ್ತೊಂದು ಕಡೆ ಪ್ರಸಕ್ತ ರಾಜಕೀಯ ಸನ್ನಿವೇಶವನ್ನು ಮನರಂಜನೆಯಂತೆ ಜನರು ಸವಿಯುತ್ತಿದ್ದಾರೆ. ಹೊಸ ಜೋಕ್ ಗಳನ್ನು ಸೃಷ್ಟಿಸಿ ಮುಸಿಮುಸಿ ನಗುತ್ತಿದ್ದಾರೆ. ಇಮೇಲ್ ಮತ್ತು ಎಸ್ ಎಂಎಸ್ ಗಳಲ್ಲಿ ಈಗ ಕರ್ನಾಟಕ ರಾಜಕಾರಣದ ಬಗ್ಗೆ ದಿನಕ್ಕೆ ಹತ್ತಾರು ಜೋಕುಗಳು ಸರಿದಾಡುತ್ತಿವೆ. ಅಂಥ ಒಂದು ಜೋಕಿನ ಸ್ಯಾಂಪಲ್ ಇಲ್ಲಿದೆ. ಈ ಜೋಕ್ ಓದಿ ನಗಬೇಕೋ, ಸದ್ಯದ ರಾಜಕೀಯ ಸಂದರ್ಭ ಕಂಡು ಅಳಬೇಕೋ ಅದು ಓದುಗರಿಗೆ ಬಿಟ್ಟದ್ದು.
ಪತ್ರಿಕೆಯ ಮುಖಪುಟದಲ್ಲಿನ ತಲೆ ಬರಹಗಳು :
- ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದ ಮನೆ ಹುಡುಗಿ ಗರ್ಭಿಣಿ!
- ಹೆರಿಗೆ ವೆಚ್ಚವನ್ನು ಸರ್ಕಾರವೇ ಭರಿಸುವುದು : ಕುಮಾರಸ್ವಾಮಿ
- ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ : ಹೆಚ್.ಡಿ.ದೇವೇಗೌಡ
- ಇದು ಅಮಾನುಷ ಕೃತ್ಯ : ಮಲ್ಲಿಕಾರ್ಜುನ ಖರ್ಗೆ
- ಕೇವಲ ಸಿಎಂ ಇಂದ ಇದು ಅಸಾಧ್ಯ : ಎಂ.ಪಿ.ಪ್ರಕಾಶ್
- ಇದು ಒಂದು ಪಕ್ಷದ ಸಾಧನೆಯಲ್ಲ. ಸಮ್ಮಿಶ್ರ ಸರ್ಕಾರದ ಒಟ್ಟಾರೆ ಸಾಧನೆ : ಬಿ.ಎಸ್.ಯಡಿಯೂರಪ್ಪ












Click it and Unblock the Notifications