ಎಚ್ಚರಿಕೆ : ಶಾವಿಗೆ ತಿನ್ನೋರು ಈ ಜೋಕು ಓದಬಾರದು!

ಸುಮ್ನೆ ತಮಾಷೆಗಾಗಿ...ನಮ್ಮ ಮೂಲೆಮನೆ ಯೋಗರಾಜಭಟ್ಟರಿಗೆ ಒಂದೇ ಸಮಸ್ಯೆ. ಅದೂ ವಿಚಿತ್ರ ಸಮಸ್ಯೆ. ಹೊಟ್ಟೆ ಖಾಲಿ ಮಾಡಲೆಂದು ಅವರು ಶೌಚಾಲಯಕ್ಕೆ ಹೋದಾಗಲೆಲ್ಲ, ಆ ಸಮಸ್ಯೆ ಮನವರಿಕೆಯಾಗುತ್ತಿತ್ತು. ಯಾರಿಗೂ ಹೇಳುವಂತಿಲ್ಲ.. ಬಿಡುವಂತಿಲ್ಲ. ಇದು ಹೀಗೆಯೇ ಮುಂದುವರೆದರೆ ಕಷ್ಟವಾಗಬಹುದೆಂದು, ಅವರು ಡಾಕ್ಟರ್ ಚಕ್ರಪಾಣಿ ಬಳಿಗೆ ಹೋದರು. ಡಾ.ಚಕ್ರಪಾಣಿ, ಆಗತಾನೇ ಎಂಬಿಬಿಎಸ್ ಓದಿ ಆಸ್ಪತ್ರೆ ತೆರೆದಿದ್ದರು.

ಯೋಗರಾಜಭಟ್ಟರು ಬಲು ಮುಜುಗರದಿಂದಲೇ ಡಾ.ಚಕ್ರಪಾಣಿ ಮುಂದೆ ಕೂತರು. 'ಏನ್ರೀ ನಿಮ್ಮ ಸಮಸ್ಯೆ?'ಎಂದು ಮೂರು ಸಲ ಕೇಳಿದ ಮೇಲೆ. ಭಟ್ಟರು ಬಾಯಿಬಿಟ್ಟರು. 'ಏನ್ ಹೇಳೋಣ ಸಾರ್. ಇತ್ತೀಚೆಗೆ ನನ್ನ ಮಲ ಯಾಕೋ ಶಾವಿಗೆ ಥರಾ ಬೀಳ್ತಾಯಿದೆ...'ಅನ್ನುತ್ತಿದ್ದಂತೆಯೇ, ಡಾ.ಚಕ್ರಪಾಣಿ ಚುರುಕಾದರು. ಅವರಿಗೆ ಭಲೇ ವಿಚಿತ್ರವಾಗಿ ಕೇಸ್ ಕಾಣಿಸಿತು. ಕಾರಣ ಮಾತ್ರ ಒಂದಿಷ್ಟು ಹೊಳೆಯಲಿಲ್ಲ.

'ರಾತ್ರಿ ಏನ್ ತಿನ್ತೀರಾ?'ಅನ್ನೋ ಸಾಮಾನ್ಯ ಪ್ರಶ್ನೆಗೆ 'ಅನ್ನ ಸಾರ್ ಬಿಟ್ಟರೇ ಬೇರೇನೂ ತಿನ್ನೋದಿಲ್ಲ' ಅಂದರು ಯೋಗರಾಜಭಟ್ಟರು. ಸುಮಾರು ಎರಡುಮೂರು ದಿನ ನಾನಾ ವೈದ್ಯಕೀಯ ಟೆಸ್ಟ್ ಗಳು ನಡೆದವು. ಟೆಸ್ಟ್ ರಿಪೋರ್ಟ್ ನೋಡಿದ ಚಕ್ರಪಾಣಿಗೆ ಆಶ್ಚರ್ಯ. ಎಲ್ಲಾ ಸರಿಯಾಗಿದ್ದರೂ, ಶಾವಿಗೆ ಥರಾ ಯಾಕೆ ಬೀಳುತ್ತೆ ಅನ್ನೋದು ಅರ್ಥವಾಗಲೇ ಇಲ್ಲ.

ಕೊನೆ ಪ್ರಯತ್ನ ಮಾಡೋಣವೆಂದು, ನೋಡಿ ಯೋಗರಾಜಭಟ್ಟರೇ, ನೀವು ನನ್ನ ಎದುರೇ ಕೂತು ಮಲ ವಿಸರ್ಜನೆ ಮಾಡಿ.. ನಾನು ಪತ್ತೆ ಹಚ್ಚೇ ಬಿಡ್ತೀನಿ ಅಂದರು. ಶೌಚಾಲಯದಲ್ಲಿ ಭಟ್ಟರು ಮುಜುಗರದಿಂದಲೇ ಕೆಲಸ ಆರಂಭಿಸಿದರು. ಅಸಹ್ಯವಿಲ್ಲದೇ ಚಕ್ರಪಾಣಿ ನೋಡ್ತಾಯಿದ್ದರು. ಆಮೇಲೆ ಮುಖ ಸಿಂಡರಿಸಿಕೊಂಡ ಚಕ್ರಪಾಣಿ ಹೊರಗಡೆ ಬಂದರು.

ಡಾಕ್ಟ್ರೇ ನನಗೆ ಏನ್ ಸಮಸ್ಯೆ ಅಂದರು ಭಟ್ಟರು. 'ಸಮಸ್ಯೆ ಏನಿದೆ ಮಣ್ಣು.. ನೀವು ಮಲ ವಿಸರ್ಜನೆ ಮಾಡುವಾಗ ನಿಮ್ಮ ನೆಟ್ ಬನಿಯನ್ ನ ಮೇಲಕ್ಕೆ ಎಳ್ಕೋಬೇಕು ಅಷ್ಟೇ' ಅಂದರು.

(ಎಲ್ಲೋ ಕೇಳಿದ್ದನ್ನು ಇಲ್ಲಿ ಹೇಳಿದ್ದು; ಪುಷ್ಪಪಾದ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+