ರೋಪ್ ಹಾಕಿದ ಶೀನ, ಪೆಚ್ಚಾದ ಬಾಸ್!
ಶೀನ ಬಹುರಾಷ್ಟ್ರೀಯ ಕಂಪನಿಗೆ ಆಗಷ್ಟೆ ಕೆಲಸಕ್ಕೆ ಸೇರಿಕೊಂಡಿದ್ದ. ರಾಹುಕಾಲದಲ್ಲಿ ಆಫೀಸಿಗೆ ಕಾಲಿಟ್ಟಿದ್ದ ಎಂದು ಕಾಣಿಸುತ್ತೆ. ಡ್ಯೂಟಿಗೆ ಹಾಜರಾದ ಮೊದಲನೆ ದಿನವೆ ಅವನಿಗೆ ವಕ್ರತುಂಡೋಕ್ತಿ ಎದುರಾಯಿತು. ಏನಾಯಿತು ಎಂದರೆ, ಶೀನ ಇಂಟರ್ ಕಾಮ್ ಎತ್ತಿಕೊಂಡು ಕಿಚನ್ ಗೆ ಫೋನು ಮಾಡಿದ್ದ.
ಶೀನ : ಯಾರಪ್ಪ ಅಲ್ಲೀ ಬೇಗ ಒಂದು ಕಾಫೀ ತತ್ತಾ. ಅಂತ ಜೋರು ದಬಾಯಿಸಿದ.
ಆಕಡೆ ಧ್ವನಿ : ಯು ಫೂಲ್.. ರಾಂಗ್ ನಂಬರ್ ಗೆ ಫೋನ್ ಮಾಡಿ ನನನೇ ದಬಾಯಿಸುತ್ತಾ ಇದಿಯಾ ? ನೀನು ಯಾರ ಹತ್ರ ಮಾತಾಡ್ತಾಯಿದಿಯಾ ಅಂತ ಏನಾದ್ರೂ ಗೊತ್ತಾ ? ನಿನಗೆ ?
ಶೀನ : ಯಾರು ? ಗೊತ್ತಿಲ್ವಲ್ಲ .
ಆಕಡೆ ಧ್ವನಿ : ನಾನು ಈ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಗೊತ್ತಾಯಿತಾ!
ಶೀನ : ಓ.. ನಾನು ಯಾರೂ ಅಂತ ನಿನಗೆ ಗೊತ್ತಾಯ್ತೇನೇ ಯೂ ಈಡಿಯಟ್.
ಆಕಡೆ ಧ್ವನಿ : ನೊ.
ಅಬ್ಬಾ ಥ್ಯಾಂಕ್ ಗಾಡ್ ! ಎಂದ ಶೀನ ರಿಸೀವರ್ ಮಡಗಿಬಿಟ್ಟ.
(ಜೋಕು ಕಳಿಸಿದವರು : ಮಂಜುನಾಥ್ , ಕೋರಮಂಗಲ)
***
ನಿಮಗಾಗಿ ಎರಡು ಎಸ್ ಎಂ ಎಸ್ :
1) " I guess science doesnt work everywhere. Becoz the time taken to love someone is never equal to time taken to forget them " ( By SheshagiriJodidar, Banshankari 2nd staze)
2) Love is forever. Only the parthers change ( by Savitha, Kengeri)
[ನಗಿಸುವುದು ಪುಣ್ಯದ ಕೆಲಸ.. ಆದಕ್ಕಾಗಿ ಕೂಡಲೇ ನಿಮ್ಮಲ್ಲಿನ ಜೋಕ್ಸ್ ಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ












Click it and Unblock the Notifications