ಜೋಕ್ಸ್ ಬ್ಯಾಂಕ್ : ಹೊಸ ಗಾಂಧಿಗಿರಿ ಇಂದೇ ಕಲಿಯಿರಿ!
ಯಾರಾದರು ನಿಮ್ಮ ಕಡೆ ಕಲ್ಲೆಸೆದರೆ ಅರ್ಥಾತ್ ಕಲ್ಲಿನಲ್ಲಿ ಹೊಡೆದರೆ,
ನೀವು ಅವರ ಕಡೆಗೆ ಹೂವನ್ನು ಎಸೆಯಿರಿ.
ಈಗಲೂ ಅವರು ನಿಮ್ಮ ಕಡೆ ಕಲ್ಲೆಸೆದರೆ ಕೋಪ ಮಾಡಿಕೊಳ್ಳದೆ...
ಸ್ವಲ್ಪ ಬಲವಾಗಿಯೇ ಹೂಕುಂಡವನ್ನು ಅವರ ಕಡೆ ಎಸೆಯಲು ಹಿಂದೆಮುಂದೆ ನೋಡಬೇಡಿ...
ಇದೇ ಹೊಸ ಗಾಂಧಿಗಿರಿ!!!
***
ಮುಗುಳ್ನಗೆ ಒಳ್ಳೇದೆ.
ಅದು ದೇವರು ಕೊಟ್ಟ ವರಪ್ರಸಾದ.
ಆದ್ದರಿಂದ ಮುಗುಳ್ನಗುತ್ತಲೇ ಇರಿ...
ನಕ್ಕು ನಕ್ಕು ನಕ್ಕು...
ಕಡೆಗೆ ಹುಚ್ಚಾಸ್ಪತ್ರೆ ಪಾಲಾಗ ಬೇಡಿ.
(ದಟ್ಸ್ಕನ್ನಡ ಜೋಕ್ಸ್ ಬ್ಯಾಂಕ್ )












Click it and Unblock the Notifications