ಹೆಣ್ಣಾನೆ ಮೇಲೆ ಕಣ್ಣಿಟ್ಟ ಪೋಕರಿ ಇರುವೆಗಳು!
ನಾಲ್ಕು ಪೋಕರಿ ಇರುವೆಗಳು ಕಾಲೇಜು ಮುಂದೆ ನಿಂತಿದ್ದವು. ಒಂದು ಪ್ರಾಯಕ್ಕೆ ಬಂದಿರೋ ಹೆಣ್ಣಾನೆ ಮರಿ ಅದೇ ರಸ್ತೆಯಲ್ಲಿ ಬರ್ತಾ ಇತ್ತು. ಮನದಲ್ಲಿ ಸಕತ್ತು ಭಯ. ನಿನ್ನೆ ಪೋಕರಿ ಇರುವೆಯೊಂದು ಲವ್ ಲೆಟರ್ ಕೊಟ್ಟಿತ್ತು. ಅದನ್ನು ಹರಿದು ಬಿಸಾಕಿದ ಆನೆ ಮರಿ, ಅಲ್ಲಿಂದ ಓಡಿತ್ತು. ಈಗ ನನ್ನ ಏನ್ ಮಾಡ್ತಾರೋ ಅನ್ನೋ ಭಯ ಅದಕ್ಕೆ. ಪೋಕರಿ ಇರುವೆಗಳ ಮಾತು ಶುರುವಾಯಿತು..
ಮೊದಲ ಇರುವೆ : ಅವಳಿಗೆ(ಆನೆಮರಿ) ಎಷ್ಟು ಕೊಬ್ಬು, ನನ್ ಲವ್ ರಿಜೆಕ್ಟ್ ಮಾಡಿದ್ದಾಳೆ. ಹತ್ತಿರ ಬರ್ಲಿ.. ಇವತ್ತು ತಕ್ಕ ಪಾಠ ಕಲಿಸೋಣ..
ಎರಡನೇ ಇರುವೆ : ಹೌದು ಸುಮ್ಮನೇ ಬಿಡಲೇ ಬಾರದು.. ನಾನು ಅವಳ ಕಾಲು ಮುರೀತೀನಿ..
ಮೂರನೇ ಇರುವೆ : ನಾನು ಒಂದು ಗೂಸಾ ಕೊಟ್ಟು, ಅದರ ತಲೆ ಬುರುಡೆಗೆ ಬಿಸಿನೀರು ಕಾಯಿಸ್ತೀನಿ..
ನಾಲ್ಕನೇ ಇರುವೆ : ಹೋಗ್ಲಿ ಬಿಡೋ ಮಚ್ಚಾ.. ಪಾಪಾ.. ಒಬ್ಬಳೇ ಒಬ್ಬಳು ಬರ್ತಾ ಅವಳೇ.. ಒಬ್ಬಳ ಮೇಲೆ ನಾವು ನಾಲ್ಕು ಮಂದಿ ಫೈಟಿಂಗ್ ಮಾಡೋದು ತಪ್ಪಾಗುತ್ತೆ..
ಇಂಥ ಜೋಕುಗಳನ್ನು ನಮಗೆ ಕಳುಹಿಸಿ... ನಗೆಯನ್ನು ಹಂಚಿ ನಗಬೇಕು.












Click it and Unblock the Notifications