Advertisement

ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ; ಪಿಯುಸಿ ಪಾಸಾದವರು ಅರ್ಜಿ ಹಾಕಿ


ಕೊಪ್ಪಳ, ಅಕ್ಟೋಬರ್ 22 : ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸ್ಪೆನೋಗ್ರಾಫರ್ ಗ್ರೇಡ್-ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 4 ಕೊನೆಯ ದಿನವಾಗಿದೆ.

ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳನ್ನು ಸ್ಟಾಫ್ ಸೆಲೆಕ್ಷನ್ ಕಮೀಷನ್ ಕಂಪ್ಯೂಟರ್ ಆಧಾರಿತ ಆನ್‌ ಲೈನ್ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲಿದೆ.

ಕೆಪಿಎಸ್‌ಸಿ ಅಧಿಸೂಚನೆ; ಅರಣ್ಯ ಇಲಾಖೆ ನೇಮಕಾತಿಗೆ ಅರ್ಜಿ ಹಾಕಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ದಿನಾಂಕ 1/8/2020ಕ್ಕೆ ಅನ್ವಯವಾಗುವಂತೆ 18 ರಿಂದ 27 ವರ್ಷದೊಳಗಿರಬೇಕು.

ಕೋಲಾರ; ಖಾಸಗಿ ಕಂಪನಿಗಳಲ್ಲಿ 5000 ನೇಮಕಾತಿ

Advertisement
Advertisement

ನೇಮಕಾತಿ ನಿಯಮಾಗಳ ಅನುಸಾರ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಹಾಗೂ ವಿಧವಾ ಮಹಿಳಾ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆರೋಗ್ಯ ಇಲಾಖೆ; ತಾತ್ಕಾಲಿಕವಾಗಿ ನೇಮಕಾತಿ ಆದವರಿಗೆ ಸಿಹಿ ಸುದ್ದಿ

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು 100 ರೂ. ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಬೇಕು. ಪರಿಶಿಷ್ಟ ಜಾತಿ, ಪಂಗಡ ಮತ್ತು ಮಹಿಳಾ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡದಂತೆ ವಿನಾಯಿತಿ ನೀಡಲಾಗಿದೆ.

ಕಂಪ್ಯೂಟರ್ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಸಕ್ತರು ಅರ್ಜಿ ಸಲ್ಲಿಸಲು ನವೆಂಬರ್ 4 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆ ಉಂಟಾದರೆ 080-25502520, 9483862020 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಅರ್ಜಿಗಳನ್ನು ಸಲ್ಲಿಸಲು ವೆಬ್‌ ಸೈಟ್

English Summary

Staff selection commission invited application for the stenographer and 'D' group post. Candidates can apply till November 4, 2020.
Read more...