ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಅಂಜೂರ ಹಣ್ಣಿನಿಂದ ವೈನ್ ತಯಾರಿಕೆ, ರೈತರಿಗೋಸ್ಕರ ಹೊಸ ತಂತ್ರಜ್ಞಾನ
ರಾಯಚೂರು, ಡಿಸೆಂಬರ್, 22: ಜಿಲ್ಲೆಯಲ್ಲಿ ಅಂಜೂರ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಸಂಸ್ಕರಣಾ ಹಾಗೂ ಆಹಾರ ತಂತ್ರಜ್ಞಾನ ವಿಭಾಗದ ಅಧಿಕಾರಿಗಳು ವೈನ್ ತಂತ್ರಜ್ಞಾನವನ್ನು ಆವಿಷ್ಕರಿಸಿದ್ದಾರೆ. ಹಾಗೆಯೇ ಪಿಒಪಿ ಬಿಡುಗಡೆ ಮಾಡಲಾಗಿದೆ. ಈ ತಂತ್ರಜ್ಞಾನ ಆವಿಷ್ಕಾರಕ್ಕೆ ವೈನ್ ಬೋರ್ಡ್‌ನಿಂದ ಮಾನ್ಯತೆಯನ್ನೂ ಪಡೆದಿದ್ದಾರೆ.
ಸಾಮಾನ್ಯವಾಗಿ ತೋಟಗಾರಿಕೆ ಬೆಳೆಗಾರರಿಗೆ ತಮ್ಮ ಬೆಳೆ ಸಂರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗಿರುತ್ತದೆ. ಹಣ್ಣುಗಳನ್ನು ಹೆಚ್ಚು ದಿನ ಉಳಿಸಲಾಗದು. ಅದರಲ್ಲೂ ಅಂಜೂರ ಬೆಳೆಯ ಜೀವಿತಾವಧಿಯೇ ಮೂರರಿಂದ ನಾಲ್ಕು ದಿನಗಳು ಮಾತ್ರ ಇರುತ್ತದೆ. ಒಮ್ಮೆ ಹಣ್ಣುಗಳು ಕೊಳೆತು ಹೋದರೆ, ಹಣ್ಣುಗಳನ್ನು ಬೆಳೆದ ರೈತರು ಭಾರಿ ಪ್ರಮಾಣದ ನಷ್ಟ ಅನುಭವಿಸಬೇಕಾಗುತ್ತದೆ. ಆಗ ಕಷ್ಟಪಟ್ಟು ಬೆಳೆದ ಹಣ್ಣುಗಳನ್ನೆಲ್ಲ ರಸ್ತೆಗೆ ಎಸೆಯದೇ ಬೇರೆ ವಿಧಿಯಿಲ್ಲ ಎನ್ನುವ ಪರಿಸ್ಥಿತಿಯೂ ನಿರ್ಮಾಣ ಆಗುತ್ತದೆ. ರೈತರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೃಷಿ ವಿಶ್ವ ವಿದ್ಯಾಲಯ ವಿಜ್ಞಾನಿಗಳು ಕಳೆದ ಒಂದೂವರೆ ವರ್ಷಗಳಿಂದ ಪ್ರಯೋಗ ನಡೆಸಿದ್ದರು. ಇದರ ಫಲವಾಗಿ ಇತ್ತೀಚೆಗಷ್ಟೇ ಅಂಜೂರ ಹಣ್ಣಿನಿಂದ ವೈನ್ ತಯಾರಿಸುವ ಮಾದರಿಯನ್ನು ಕಂಡು ಹಿಡಿದಿದ್ದಾರೆ. ಅಂಜೂರ ವೈನ್ ಕೂಡ ಉತ್ತಮ ಸ್ವಾದ ಹೊಂದಿದ್ದು, ಆಸಕ್ತರು ಅಬಕಾರಿ ಇಲಾಖೆಯಿಂದ ಅನುಮತಿ ಪಡೆದು ಕೃಷಿ ವಿವಿಯ ಆವಿಷ್ಕಾರದ ನೆರವಿನೊಂದಿಗೆ ವೈನ್ ತಯಾರಿಕೆ ಮಾಡಬಹುದಾಗಿದೆ.

ಅಂಜೂರ ಹಣ್ಣಿನಿಂದ ವೈನ್ ತಯಾರಿಕೆ
ಅಂಜೂರ್ ವೈನ್ ತಯಾರಿಕೆ ಕ್ರಮ ಹಾಗೂ ವೆಚ್ಚ ಕೂಡ ಕಡಿಮೆಯಾಗಿದೆ. ಈ ವೈನ್ ತಯಾರಿಸಲು ವರ್ಷಗಟ್ಟಲೇ ಕಾಯಬೇಕಿಲ್ಲ. 25 ದಿನಗಳಲ್ಲೇ ವೈನ್ ತಯಾರಿಸಬಹುದಾಗಿದೆ. ಒಂದು ಕೆ.ಜಿ. ಅಂಜೂರ ಹಣ್ಣಿನಿಂದ ಸುಮಾರು ಒಂದೂವರೆ ಲೀಟರ್ ವೈನ್ ಉತ್ಪಾದನೆ ಆಗುತ್ತದೆ. ಒಂದು ಲೀಟರ್ ಉತ್ಪಾದನೆಗೆ ಅಂದಾಜು ನೂರು ರೂಪಾಯಿ ಖರ್ಚಾಗಬಹುದು. ಇದನ್ನು ಮಾರುಕಟ್ಟೆಯಲ್ಲಿ 300 -400 ರೂಪಾಯಿವರೆಗೆ ಮಾರಾಟ ಮಾಡಬಹುದು. ಶೇಕಡಾ 5ಕ್ಕಿಂತ ಹೆಚ್ಚು ಆಲ್ಕೋಹಾಲ್ ಅಂಶವಿರುವ ಮದ್ಯ ಉತ್ಪಾದನೆ ಮಾಡಬೇಕಾದರೆ ಅಬಕಾರಿ ಇಲಾಖೆ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕಿದೆ.

ಕೃಷಿ ವಿವಿಯಲ್ಲಿ ಅಂಜೂರ ವೈನ್ ತಯಾರಿಕೆ
ಇಲ್ಲಿ ಉತ್ಪಾದನೆಯಾಗಿರುವ ಅಂಜೂರ ವೈನ್‌ನಲ್ಲಿ ಶೇಕಡಾ 12ರಷ್ಟು ಆಲ್ಕೋಹಾಲ್ ಅಂಶ ಕಂಡುಬಂದಿದೆ. ಹೀಗಾಗಿ ಉತ್ಪಾದಕರು ಅಬಕಾರಿ ಇಲಾಖೆಯಿಂದ ಅನುಮತಿ ಪಡೆದುಕೊಂಡಲ್ಲಿ ಕೃಷಿ ವಿಶ್ವ ವಿದ್ಯಾಲಯ ಇಂತಿಷ್ಟು ಶುಲ್ಕ ಪಡೆದು ವೈನ್ ಉತ್ಪಾದನಾ ಮಾದರಿ ನೀಡಲು ಸಿದ್ಧತೆಯಲ್ಲಿದೆ.
ಕೃಷಿ ವಿವಿಯಲ್ಲಿ ವೈನ್ ತಯಾರಿಕೆ ಮಾಡಿರುವುದು ಇದೇ ಮೊದಲೇನಲ್ಲ. ಹಿಂದೆ ಕೂಡ ಈ ಭಾಗದಲ್ಲಿ ಹೆಚ್ಚಾಗಿ ಸಿಗುವ ಬಾರೆಹಣ್ಣಿನ ವೈನ್ ತಯಾರಿಕೆ ತಂತ್ರಜ್ಞಾನವನ್ನು ಅವಿಷ್ಕರಿಸಿದ್ದರು. 2018ರಲ್ಲಿ ಇದನ್ನು ಕಂಡು ಹಿಡಿಯಲಾಗಿತ್ತು. ಬಾರೆಹಣ್ಣು ಕೂಡ ಬೇಗ ಕೊಳತು ಹೋಗುತ್ತದೆ. ವಿನೂತನ ತಂತ್ರಜ್ಞಾನದ ಮೂಲಕ ಬಾರೆ ಹಣ್ಣಿನ ವೈನ್ ತಯಾರಿಸಲಾಗಿತ್ತು.

ರೈತರಿಗೆ ಅನುಕೂಲವಾಗುವ ತಂತ್ರಜ್ಞಾನ
ಉಮ್ರಾನ್ ಮಾದರಿಯ ಹಣ್ಣುಗಳನ್ನು ಬಳಸಿ ವೈನ್ ತಯಾರಿಸಲಾಗಿತ್ತು. ಆಗ ಶೇಕಡಾ 12.1ರಷ್ಟು ಆಲ್ಕೋಹಾಲ್ ಅಂಶ ಒಳಗೊಂಡಿತ್ತು. ಇದು ಕೂಡ ಪಿಒಪಿ ಬಿಡುಗಡೆ ಮಾಡಲಾಗಿದೆ. ಬಾರೆಹಣ್ಣಿಗೂ ವಾಣಿಜ್ಯ ಕ್ಷೇತ್ರದಲ್ಲಿ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಈ ಪ್ರಯೋಗವನ್ನು ಮಾಡಲಾಗಿತ್ತು ಎಂದು ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನದ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರಾಮಪ್ಪ ವಿವರಿಸಿದರು.

ಕೃಷಿ ವಿವಿಯಿಂದ ವೈನ್ ಉತ್ಪಾದನೆ ತಂತ್ರಜ್ಞಾನ
ಅಂಜೂರ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಳೆದ ಒಂದೂವರೆ ವರ್ಷದಿಂದ ಪ್ರಯೋಗ ನಡೆಸಿ ವೈನ್ ಉತ್ಪಾದನೆ ತಂತ್ರಜ್ಞಾನವನ್ನು ಕಂಡು ಹಿಡಿಯಲಾಗಿದೆ. ಶೇಕಡಾ 12 ರಷ್ಟು ಅಲ್ಕೋಹಾಲ್ ಅಂಶದ ಸ್ವಾದಿಷ್ಟ ವೈನ್ ತಯಾರಿಸಬಹುದು. ರಾಜ್ಯದಲ್ಲಿ ಇದೇ ಮೊದಲ ಪ್ರಯೋಗವಾಗಿದೆ ಎಂದು ಕೃಷಿ ವಿವಿಯ ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಪಕಿ ಸ್ವಪ್ನ ವಿದ್ಯಾಸಾಗರ್ ಹೇಳಿದರು.
ಅಂಜೂರ ಹಣ್ಣಿನಿಂದ ವೈನ್ ಉತ್ಪಾದನೆ ಮಾಡುವ ತಂತ್ರಜ್ಞಾನವನ್ನು ಕಂಡು ಹಿಡಿಯಲಾಗಿದೆ. ಇದು ವೈನ್ ಬೋರ್ಡ್‌ನಿಂದಲೂ ಅಂಗೀಕೃತಗೊಂಡಿದ್ದು, ಕೃಷಿ ವಿವಿಯಿಂದ ಪಿಒಪಿ ಕೂಡ ಬಿಡುಗಡೆ ಮಾಡಿದ್ದೇವೆ. ಆದರೆ ಉತ್ಪಾದನೆ ಮಾರಾಟಕ್ಕೆ ನಮಗೆ ಅವಕಾಶ ಇರುವುದಿಲ್ಲ. ಹೀಗಾಗಿ ಆಸಕ್ತರು ಅಬಕಾರಿ ಇಲಾಖೆ ಅನುಮತಿ ಪಡೆದಲ್ಲಿ ಅವರಿಗೆ ವೈನ್ ಉತ್ಪಾದನಾ ಮಾದರಿ ನೀಡಲಾಗುವುದು ಎಂದು ಕೃಷಿ ವಿವಿಯ ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಉದಯಕುಮಾರ್ ನಿಡೋಣಿ ತಿಳಿಸಿದರು
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications