ಬಂಡೀಪುರ ಕಾಡಂಚಿನ ರೈತರ ನಿದ್ದೆಗೆಡಿಸಿದ ಕಾಡಾನೆಗಳು!

ಚಾಮರಾಜನಗರ, ನವೆಂಬರ್ 29: ಕಳೆದೊಂದು ವರ್ಷದಿಂದ ಉತ್ತಮ ಮುಂಗಾರು ಮತ್ತು ಹಿಂಗಾರು ಮಳೆ ಸುರಿದ ಪರಿಣಾಮ ಅರಣ್ಯದಲ್ಲಿರುವ ಕೆರೆಕಟ್ಟೆಗಳು ತುಂಬಿದ್ದು, ಹಸಿರು ಮೇವು ಹೇರಳವಾಗಿ ದೊರಕುತ್ತಿವೆ. ಹೀಗಿದ್ದರೂ ಅರಣ್ಯದಲ್ಲಿರುವ ಕಾಡಾನೆಗಳು ರೈತರ ಜಮೀನಿಗೆ ಲಗ್ಗೆ ಹಾಕುತ್ತಿರುವುದು ರೈತರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಈಗಾಗಲೇ ರೈತರು ಬಾಳೆ, ಭತ್ತ, ಜೋಳ, ರಾಗಿ ಹೀಗೆ ವಿವಿಧ ಬೆಳೆಗಳನ್ನು ಬೆಳೆದಿದ್ದು ಆ ಬೆಳೆಯನ್ನು ಕಾಡಾನೆಗಳಿಂದ ಕಾಪಾಡಿಕೊಳ್ಳುವುದೇ ಕಷ್ಟದ ಕೆಲಸವಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಕಾಡಿನಿಂದ ಬರುವ ಕಾಡಾನೆಗಳ ಹಿಂಡು ಬೆಳೆಯನ್ನು ತಿಂದು ತುಳಿದು ನಾಶ ಮಾಡಿಬಿಡುತ್ತವೆ.

ಇದರಿಂದ ವರ್ಷ ಪೂರ್ತಿ ದುಡಿದು ಸಾಲ ಮಾಡಿ ಬೆಳೆದ ಬೆಳೆ ನಾಶವಾಗಿ ರೈತನ ಹೊಟ್ಟೆಗೆ ತಣ್ಣೀರು ಬಟ್ಟೆ ಎನ್ನುವಂತಾಗಿದೆ. ಮುಂದಿನ ದಿನಗಳಲ್ಲಿ ಬೇಸಿಗೆ ಬರುತ್ತಿರುವುದರಿಂದ ಕಾಡಾನೆಗಳು ಅರಣ್ಯ ಬಿಟ್ಟು ನಾಡಿನತ್ತ ಬರುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಹಸಿರಾಗಿ ಬೆಳೆದ ಬಾಳೆ, ತೆಂಗು ಬೆಳೆಯನ್ನೇ ಟಾರ್ಗೆಟ್ ಮಾಡಿಕೊಳ್ಳುವ ಕಾಡಾನೆಗಳು ಅದನ್ನು ತಿಂದು ನಾಶ ಮಾಡುತ್ತಿವೆ.

Wild Elephants are found in the Gopalaswamy hill zone

ಇದೀಗ ಬಂಡೀಪುರ ಹುಲಿಯೋಜನೆಯ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಇದರಿಂದ ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ರೈತರು ಬೆಳೆದ ಹುರುಳಿ, ರಾಗಿ, ತೊಗರಿ, ಟೊಮೆಟೊ ಹಾಗೂ ಬಾಳೆಯನ್ನು ನಾಶಪಡಿಸಿವೆ.

ಕಾಡಾನೆಗಳು ಹಾದು ಹೋದ ಹಾದಿಯುದ್ದಕ್ಕೂ ಸಿಗುವ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನೆಲ್ಲ ತುಳಿದು ಹಾಳು ಮಾಡಿವೆ. ಆದರೆ ಇದಕ್ಕೆ ಅರಣ್ಯ ಇಲಾಖೆಯಿಂದ ಯಾವುದೇ ರೀತಿಯ ಪರಿಹಾರ ಸಿಗುವುದಿಲ್ಲ ಎಂಬುದು ರೈತರ ಅಳಲಾಗಿದೆ.

ನೆಮ್ಮದಿಯುಸಿರುಬಿಟ್ಟ ರೈತರು ಇನ್ನೊಂದೆಡೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿಯೋಜನೆಯ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಾ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದ ಹುಲಿ ಇದೀಗ ನಿತ್ರಾಣವಾಗಿ ಸಾವಿಗೀಡಾಗಿದ್ದರಿಂದ ಗ್ರಾಮದಲ್ಲಿದ್ದ ಜನರ ಭಯ ಮುಕ್ತರಾಗಿದ್ದಾರೆ.

Wild Elephants are found in the Gopalaswamy hill zone

ಸಾವನ್ನಪ್ಪಿದ ಹುಲಿ 12 ವರ್ಷ ವಯಸ್ಸಿನ ಗಂಡು ಹುಲಿಯಾಗಿದ್ದು, ಇದು ಆಹಾರ ಸಿಗದೆ ನಿತ್ರಾಣಗೊಂಡು ಸಾವನ್ನಪ್ಪಿರಬಹುದು ಎಂಬುದು ಅರಣ್ಯ ಇಲಾಖೆ ತಿಳಿಸಿದೆ.

ಕೆಲವು ದಿನಗಳ ಹಿಂದೆ ಹಂಗಳ ಸಮೀಪದ ಹಿರೀಕೆರೆ ಬಳಿ ಗಸ್ತಿನಲ್ಲಿದ್ದ ಸಿಬ್ಬಂದಿ ಸೋಮನಾಥಪುರ ಬೀಟ್‌ನಲ್ಲಿದ್ದಾಗ ಹುಲಿಯೊಂದು ಮಲಗಿದ ಸ್ಥಿತಿಯಲ್ಲಿ ಕಾಣಿಸಿತ್ತು. ಆದರೆ ಅದು ಬಹಳ ಸಮಯವಾದರೂ ಕದಲದೆ ಇದ್ದುದರಿಂದ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲಿಸಿದಾಗ ಅದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+