ಇನ್ನೂ 20 ದಿನ ತರಕಾರಿ ಬೆಲೆ ಕಡಿಮೆ ಆಗೋಲ್ಲ!

ಬೆಂಗಳೂರು, ನವೆಂಬರ್ 23 : ಈ ಬಾರಿ ಉತ್ತಮವಾದ ಮಳೆಯಾಗಿದ್ದರೂ ತರಕಾರಿಗಳ ಬೆಲೆ ಏರುತ್ತಲೇ ಇದೆ. ಬೆಂಗಳೂರಿನಲ್ಲಿ ಹಾಪ್ ಕಾಮ್ಸ್‌ ಮತ್ತು ಚಿಲ್ಲರೆ ವ್ಯಾಪಾರಿಗಳ ಬಳಿ ತರಕಾರಿ ಬೆಲೆಗಳಲ್ಲಿ ಭಾರೀ ವ್ಯತ್ಯಾಸವಿದೆ.

ಭಾರೀ ಏರಿಕೆ ಕಂಡಿದ್ದ ಈರುಳ್ಳಿ ಮತ್ತು ಟೊಮೆಟೋ ಬೆಲೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಉಳಿದ ತರಕಾರಿಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಹಾಪ್‌ ಕಾಮ್ಸ್‌ಗಳಲ್ಲಿ ದರ ಹೆಚ್ಚಿದೆ ಎನ್ನುವುದು ಜನರ ಆರೋಪವಾಗಿದೆ.

Why are vegetable prices touching sky high in Bengaluru

ಬೆಳೆಗಳಿಗೆ ರೋಗ ಬಾಧೆ, ಇಳುವರಿ ಕುಸಿತ, ಹೊರ ರಾಜ್ಯಗಳಿಗೆ ರಫ್ತು ಮುಂತಾದ ಕಾರಣಗಳಿಂದಾಗಿ ಬೆಲೆಗಳು ಹೆಚ್ಚಾಗುತ್ತಿದೆ. ಈರುಳ್ಳಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಉತ್ತಮ ಗುಣಮಟ್ಟದ ಈರುಳ್ಳಿಗಳು ಸಿಗುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

'ತರಕಾರಿ ಸರಬರಾಜು ಕಡಿಮೆ ಇದೆ. ಆದ್ದರಿಂದ, ಬೆಲೆಗಳು ಹೆಚ್ಚಾಗುತ್ತಿವೆ. ಇಪತ್ತು ದಿನದ ನಂತರ ಬೆಲೆಗಳು ಕಡಿಮೆಯಾಗುವ ಸಾಧ್ಯತೆ ಇದೆ' ಎಂದು ಹಾಪ್ ಕಾಮ್ಸ್ ಮಾರ್ಕೆಟಿಂಗ್ ಮ್ಯಾನೇಜರ್ ಗೋಪಾಲ ಗೌಡ ಹೇಳಿದ್ದಾರೆ.

ಇಂದಿನ ದರ ಪಟ್ಟಿ : ಹಾಪ್ ಕಾಮ್ಸ್ ದರ ಪಟ್ಟಿಯ ಪ್ರಕಾರ ಇಂದಿನ ತರಕಾರಿ ಬೆಲೆಗಳು. ಟೊಮೆಟೋ 48, ಬೀನ್ಸ್ 36, ಬೀಟ್ ರೋಟ್ 57, ಬದನೆಕಾಯಿ (ಬಿಳಿ) 48, ಕ್ಯಾಪ್ಸಿಕಂ 51, ಕ್ಯಾರೇಟ್ (ದೆಹಲಿ) 72, ಕ್ಯಾರೇಟ್ (ನಾಟಿ) 80, ಹೂಕೋಸು 50, ಡಬಲ್ ಬೀನ್ಸ್ 67, ನುಗ್ಗೆಕಾಯಿ 194, ಈರುಳ್ಳಿ ಕೆ.ಜಿ.ಗೆ 64 ರೂ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+