ಕೇಂದ್ರದಿಂದ ರೈತರಿಗೆ ಭರ್ಜರಿ ಗಿಫ್ಟ್, ಬೆಳೆ ಸಾಲ ಬಡ್ಡಿದರದಲ್ಲಿ ಶೇಕಡಾ 3 ಇಳಿಕೆ
ನವದೆಹಲಿ, ಜೂನ್ 14: ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ರೈತರಿಗೆ ಭರ್ಜರಿ ಗಿಫ್ಟ್ ಘೋಷಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ನೀಡಲಾಗುವ ಬೆಳೆಸಾಲದ ಬಡ್ಡಿದರದಲ್ಲಿ ಭಾರೀ ಕಡಿತ ಮಾಡಲಾಗಿದೆ.
ಮೂರು ಲಕ್ಷವರೆಗಿನ ಅಲ್ಪಾವಧಿ ಬೆಳೆ ಸಾಲದ ಬಡ್ಡಿದರವನ್ನು ಶೇಕಡಾ 4ಕ್ಕೆ ಇಳಿಕೆ ಮಾಡಲಾಗಿದೆ. ಈ ಹಿಂದೆ ಶೇಕಡಾ 7 ಬಡ್ಡಿ ದರವಿತ್ತು. ಇದೀಗ ಶೇಕಡಾ 3 ಬಡ್ಡಿದರವನ್ನು ಇಳಿಕೆ ಮಾಡಲಾಗಿದ್ದು ಶೇಕಡಾ 4 ಬಡ್ಡಿದರ ನಿಗದಿಪಡಿಸಲಾಗಿದೆ.

ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ತೆಗೆಯುವ ರೈತರಿಗೆ ಈ ಸೌಲಭ್ಯ ಸಿಗಲಿದ್ದು, ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡುವವರು ಮಾತ್ರ ಇದಕ್ಕೆ ಅರ್ಹರಾಗಿರುತ್ತಾರೆ. ಇನ್ನು ಈ ಬಡ್ಡಿದರಗಳ ಸಬ್ಸಿಡಿಗಾಗಿ ಈ ಬಜೆಟಿನಲ್ಲಿ 20,339 ಸಾವಿರ ಕೋಟಿ ರೂಪಾಯಿಗಳನ್ನು ತೆಗೆದಿಡಲು ಕೇಂದ್ರ ಕ್ಯಾಬಿನೆಟ್ ತೀರ್ಮಾನ ತೆಗೆದುಕೊಂಡಿದೆ.












Click it and Unblock the Notifications