Kissan Credit Card Loan: ರೈತರಿಗೆ ಖುಷಿ ಸುದ್ದಿ- ಈಗ ಕ್ರೆಡಿಟ್‌ ಕಾರ್ಡ್‌ ಸಾಲದ ಮಿತಿಯಲ್ಲಿ ಭಾರೀ ಏರಿಕೆ, ಎಷ್ಟು ಗೊತ್ತೇ?

ನವದೆಹಲಿ, ಫೆಬ್ರವರಿ 01: ಬಹುನಿರೀಕ್ಷೆಯ ಕೇಂದ್ರ ಬಜೆಟ್ 2025 ಮಂಡನೆ ಆರಂಭಿಸಿದ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ರೈತರಿಗೆ ಆದ್ಯತೆ ನೀಡಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಮೇಲಿನ ಸಾಲದ ಮಿತಿಯನ್ನು ರೂ.5 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ದೇಶದ ರೈತರಿಗೆ ಮಹತ್ವದ ಮತ್ತು ಸಿಹಿ ಸುದ್ದಿಯೊಂದನ್ನು ಅವರು ನೀಡಿದ್ದಾರೆ.

ಪ್ರಸ್ತುತದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ರೈತರು ಗರಿಷ್ಠ ವಾಗಿ 3 ಲಕ್ಷ ರೂಪಾಯಿಗಳನ್ನು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬಹದಾಗಿದೆ. ಆದರೆ ಈಗ ಅದರ ಪ್ರಮಾಣ ಲಕ್ಷಕ್ಕೆ ಹೆಚ್ಚಿಸುವುದಾಗಿ ವಿತ್ತ ಸಚಿವೆ ತಿಳಿಸಿದ್ದಾರೆ. ಈ ಕುರಿತು ಅಧಿಕೃತ ಆದೇಶವಾಗುತ್ತಿದ್ದಂತೆ ಕಿಸಾನ್ ಕಾರ್ಡ್ ಹೊಂದಿರುವ ದೇಶದ ರೈತರು ಗರಿಷ್ಠ 5 ರೂಪಾಯಿ ಸಾಲ ಪಡೆಯಬಹುದಾಗಿದೆ. ಇದು ರೈತರಿಗೆ ಸಕಾಲಕ್ಕೆ ಹೆಚ್ಚಿನ ಆರ್ಥಿಕ ಸಹಾಯ ದೊರೆಯಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ.

Union Budget 2025 Kissan Credit Card Loan Limit Increased to 5 Lakh Rupees

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದಿಂದ 2025-2026ನೇ ಆರ್ಥಿಕ ಸಾಲಿನ ಬಜೆಟ್ ಮಂಡನೆ ಮಾಡಲಾಗಿದ್ದು. ಆರು ವಿಷಯಗಳಿಗೆ ಆದ್ಯತೆ ನೀಡಲಾಗಿದೆ. ಅಲ್ಲದೆ ಈ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆಯನ್ನು ಕೊಡಲಾಗಿದೆ. ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿಚಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಭರ್ಜರಿ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಕಿಸಾನ್ ಕ್ರೆಡಿಟ್‌ ಕಾರ್ಡ್‌ನಿಂದಾಗಿ ದೇಶದಲ್ಲಿ ಕೋಟ್ಯಾಂತರ ಜನ ರೈತರಿಗೆ ಅನುಕೂಲವಾಗಿದೆ. ಇದೀಗ ಈ ಕಿಸಾನ್‌ ಕಾರ್ಡ್‌ನ ಮೂಲಕ ಮತ್ತೊಂದು ಭರ್ಜರಿ ಗುಡ್‌ನ್ಯೂಸ್‌ ಕೊಡಲಾಗಿದೆ. ಅದರ ವಿವರ ಇಲ್ಲಿದೆ.

ಕೇಂದ್ರ ಬಿಜೆಪಿ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಹೆಚ್ಚು ಉತ್ತೇಜನ ನೀಡಿದೆ. ರೈತರನ್ನು ಗಮನದಲ್ಲಿ ಇರಿಸಿಕೊಂಡು ವಿಶೇಷ ಯೋಜನೆಗಳನ್ನು ಪ್ರಕಟಿಸಲಾಗಿದೆ. ಇನ್ನು ಮುಖ್ಯವಾಗಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೇಲಿನ ಸಾಲದ ಮಿತಿಯನ್ನು 3 ಲಕ್ಷ ರೂಪಾಯಿಯಿಂದ ಬರೋಬ್ಬರಿ 5 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಲಾಗಿದೆ. ಅಲ್ಲದೆ ದೇಶದಲ್ಲಿ ಮೂರು ಪ್ರದೇಶದಲ್ಲಿ ಯೂರಿಯಾ ಘಟಕಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಲಾಗಿದೆ.

ಬಜೆಟ್ ಪೂರ್ವಭಾವಿಯಾಗಿಯೇ ಈ ಕಾರ್ಡ್‌ನಡಿ ಸಾಲದ ಮಿತಿ ಹೆಚ್ಚಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹೇಗೆ ಲೋನ್ ನೀಡಬೇಕು, ಅವಧಿ ಮಿತಿ, ನಿಯಮಗಳೇನು ಎಂಬಿತ್ಯಾದಿ ವಿಚಾರಗಳನ್ನು ಪರಾಮರ್ಶಿಸಿದೆ. ದೇಶದ ರೈತರಿಗೆ ಆರ್ಥಿಕ ಉತ್ತೇಜನ ಜೊತೆಗೆ ಕೃಷಿಗೆ ಅಗತ್ಯಕ್ಕೆ ಹಣ ಲಭ್ಯವಾಗುವಂತೆ ಮಾಡುವ ದೃಷ್ಟಿಯಿಂದ ಈ ಸಾಲದ ಮಿತಿ ಏರಿಕೆ ಮಾಡಲಾಗಿದೆ. ಬಜೆಟ್ ಬಳಿಕ ಅಧಿಕೃತ ಆದೇಶದಲ್ಲಿ ಲೋನ್ ಮಿತಿ ವಿಸ್ತರಣೆ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+