Union Budget 2023: ಪಿಎಂ ಕಿಸಾನ್ ಯೋಜನೆಯಡಿ ₹2.2 ಲಕ್ಷ ಕೋಟಿ ವರ್ಗಾವಣೆ ಮಾಡಿದ ಕೇಂದ್ರ: ವಿತ್ತ ಸಚಿವೆ
ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ವ್ಯವಸ್ಥೆಯು ಮಹತ್ವದ ಪಾತ್ರ ವಹಿಸಿದೆ. ಈ ವ್ಯವಸ್ಥೆಯಡಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan)ಯ ಫಲಾನುಭವಿಗಳ ಖಾತೆಗೆ 2.2 ಲಕ್ಷ ಕೋಟಿ ಹಣ ವರ್ಗಾವಣೆ ಮಾಡಿದೆ.
ನವದೆಹಲಿ, ಫೆಬ್ರುವರಿ 01: ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ವ್ಯವಸ್ಥೆಯು ಮಹತ್ವದ ಪಾತ್ರ ವಹಿಸಿದೆ. ಈ ವ್ಯವಸ್ಥೆಯಡಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan)ಯ ಫಲಾನುಭವಿಗಳ ಖಾತೆಗೆ 2.2 ಲಕ್ಷ ಕೋಟಿ ಹಣ ವರ್ಗಾವಣೆ ಮಾಡಿದೆ.
ಕೇಂದ್ರ ಆಯವ್ಯಯ 2023 (Union Budget 2023-24) ಮಂಡನೆ ವೇಳೆ ಬುಧವಾರ ಈ ಕುರಿತು ಮಾಹಿತಿ ತಿಳಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ಇನ್ನಿತರ ಎಲ್ಲ ವಲಯಗಳಂತೆ ಕೃಷಿ ಕ್ಷೇತ್ರದಲ್ಲೂ ಡಿಜಿಟಲ್ ಬೆಳೆವಣಿಗೆ ಆಗುತ್ತಿದೆ. ಡಿಜಿಟಲ್ ಪಾವತಿ ಹೆಚ್ಚಾಗುತ್ತಿದೆ. ಕೃಷಿ ವಲಯದಲ್ಲಿನ ಸಾಂಸ್ಥಿಕ ಸಾಲವು 2021ರಲ್ಲಿ ರೂ. 15.8 ಲಕ್ಷ ಕೋಟಿ ಇದ್ದದ್ದು, 2022 ನೇ ವರ್ಷದ ಹಣಕಾಸು ಸಾಲಿನಲ್ಲಿ ರೂ.18.6 ಲಕ್ಷ ಕೋಟಿಗೆ ಏರಿಕೆ ಆಗಿದೆ. ಈ ಮೂಲಕ ಸರ್ಕಾರ ವರ್ಷದಿಂದ ವರ್ಷಕ್ಕೆ ಕೃಷಿಗೆ ಆದ್ಯತೆ ನೀಡುತ್ತಿರುವುದು ಹೆಚ್ಚಾಗಿರುವುದು ಇದರಿಂದ ತಿಳಿಯುತ್ತದೆ ಎಂದು ಹೇಳಿದರು.

ಕೃಷಿ ವಲಯ-ರೈತರ ಅಭಿವೃದ್ಧಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗಳಂತಹ ಯೋಜನೆಗಳು ಸಹಕಾರಿಯಾಗಿವೆ. ಇಂತಹ ಯೋಜನೆಗಳನ್ನು ಹೆಚ್ಚು ಬೆಂಬಲಿಸುವ ಸರ್ಕಾರ ಡಿಜಿಟಲ್ ವ್ಯವಸ್ಥೆಗೆ ಒತ್ತು ನೀಡುತ್ತದೆ. ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಡಿಜಿಟಲ್ ಮೂಲಸೌಕರ್ಯದ ಪಾತ್ರವು ಹೆಚ್ಚಾಗಿದೆ ಎಂದರು.
ದೇಶದ ನಾಗರಿಕರಿಗೆ ಡಿಜಿಟಲ್ ಸೇವೆ, ಎಲ್ಲ ರಂಗದಲ್ಲಿ ಪರಿಣಾಮಕಾರಿಯಾಗಿ ಡಿಜಿಟಲ್ ವ್ಯವಸ್ಥೆ ಅಳವಡಿಕೆ, ಡಿಜಿಟಲ್‌ನಲ್ಲಿ ಪ್ರಮಾಣಪತ್ರ ಮತ್ತು ದಾಖಲೆ ಸಂಗ್ರಹ ಅವಕಾಶ ನೀಡಿದಾಗ ಮಾತ್ರವೇ ಸರ್ಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ಅರ್ಥ ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.

2024 ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಪೂರ್ಣವಧಿಗೆ ಅಧಿಕಾರದಲ್ಲಿರವ ಬಿಜೆಪಿಯು ಎರಡನೇ ಅವಧಿಯಲ್ಲಿ ಸಹ ಕೇಂದ್ರ ಬಜೆಟ್ ಪ್ರಸ್ತುತಪಡಿಸುತ್ತಿದೆ. ದೇಶದಲ್ಲಿ ಜ್ಞಾನ ಸಹಿತ ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸುವುದು ಬಿಜೆಪಿಯ ಮೂಲಮಂತ್ರವಾಗಿದೆ ಎಂದು ವಿತ್ತ ಸಚಿವರು ತಿಳಿಸಿದರು.












Click it and Unblock the Notifications