ಕೃಷಿ ಸಾಲ ಮನ್ನಾ ಮರೆತು ಬಿಡಿ, ಕೇಂದ್ರ ಬಿಡಿಗಾಸು ಕೊಡಲ್ಲ ಎಂದ ಜೇಟ್ಲಿ

ನವದೆಹಲಿ, ಜೂನ್ 12: ಕರ್ನಾಟಕದ ರೈತರು ಸಾಲ ಮನ್ನಾದ ಆಸೆ ಬಿಡುವುದೇ ಒಳ್ಳೆಯದು. ನೀವು ಸಾಲ ಮನ್ನಾ ಮಾಡಿ ಅಂತ ಸಿದ್ದರಾಮಯ್ಯನವರಿಗೆ ಯಡಿಯೂರಪ್ಪನವರು, ಕೇಂದ್ರದಿಂದ ಸಾಲ ಮನ್ನಾ ಮಾಡಿಸಿ ಅಂತ ಬಿಎಸ್ ವೈಗೆ ಸಿದ್ದು ಹೇಳುತ್ತಲೇ ಇದ್ದಾರೆ.

ಇದೀಗ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಖುಲ್ಲಂ ಖುಲ್ಲ ಹೇಳಿದ್ದಾರೆ: ರೈತರ ಸಾಲ ಮನ್ನಾ ಮಾಡಬೇಕು ಅಂದರೆ ಅದಕ್ಕೆ ಹಣಕಾಸಿನ ಮೂಲವನ್ನು ರಾಜ್ಯಗಳೇ ನೋಡಿಕೊಳ್ಳಬೇಕು. ಅಲ್ಲಿಗೆ ಕೇಂದ್ರದಿಂದ ಸಾಲ ಮನ್ನಾಗೆ ನಯಾಪೈಸೆ ಸಿಗಲ ಅಂತಾಯಿತು.

States will have to find funds for farm loan waivers, says Arun Jaitley

" ಈ ರೀತಿ ಯೋಜನೆಗಳಿಗೆ ಮುಂದಾಗುವ ಸರಕಾರಗಳು ಸ್ವಂತ ಸಂಪನ್ಮೂಲದಿಂದ ಮಾಡಿಕೊಳ್ಳಬೇಕು. ಅದರಾಚೆಗೆ ಕೇಂದ್ರ ಸರಕಾರವಾಗಿ ಹೇಳುವುದಕ್ಕೆ ಏನೂ ಬಾಕಿ ಇಲ್ಲ" ಎಂದು ಅರುಣ್ ಜೇಟ್ಲಿ ಕೈ ಅಲ್ಲಾಡಿಸಿದ್ದಾರೆ.

ಭಾನುವಾರವಷ್ಟೇ ಮಹಾರಾಷ್ಟ್ರ ಸರಕಾರ ಸಣ್ಣ ಮತ್ತು ಮಧ್ಯಮ ಹಿಡುವಳಿದಾರರ ಸಾಲ ಮನ್ನಾ ಘೋಷಿಸಿತು. ಆ ಮೂಲಕ ರೈತರ ಚಳವಳಿಯನ್ನು ತಡೆಯಿತು. ಅದೇ ಸ್ಥಿತಿಯಲ್ಲಿರುವ ಮಧ್ಯಪ್ರದೇಶದಲ್ಲಿ, ಸಾಲ ಮನ್ನಾ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರೈತರ ಸಿಟ್ಟನ್ನು ತಮಣಿ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ ಭರ್ಜರಿ ಗೆಲುವು ಸಾಧಿಸಿ, ಬಿಜೆಪಿ ಅಧಿಕಾರ ಹಿಡಿದ ತಕ್ಷಣ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಮೂವತ್ತು ಸಾವಿರ ಕೋಟಿ ಕೃಷಿ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+