ರೈತರ ಸಮಸ್ಯೆ ಚರ್ಚಿಸದ ಸರ್ಕಾರದ ವಿರುದ್ಧ ರೈತರಿಂದ ಉಗಿಯಿರಿ ಚಳುವಳಿ

ರಾಮನಗರ, ನವೆಂಬರ್ 21 : ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ 7ನೇ ದಿನಕ್ಕೆ ಕಾಲಿಟ್ಟಿದೆ. ಅದರೆ ಇದುವರೆಗೂ ಸರ್ಕಾರ ಪರ ರೈತರ ಸಮಸ್ಯೆಗಳನ್ನು ಚರ್ಚಿಸಲು ಮುಂದಾಗಿಲ್ಲ ಎಂದು ಆರೋಪಿಸಿ ರಾಮನಗರದ ಮಿನಿ ವಿಧಾನಸೌಧ ಮುಂದೆ ರೈತರು ಥೂ.. ಎಂದು ಉಗಿಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತ, ಸರ್ಕಾರಕ್ಕೆ ಥೂ, ಅಧಿವೇಶನದಲ್ಲಿ ರೈತರ ಸಮಸ್ಯೆ ಬಗ್ಗೆ ಮಾತನಾಡದ ಸಚಿವರಿಗೆ ಥೂ,ಥೂ ಥೂ ಎಂದು ಉಗಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Spit Government movement by these farmers

ಈ ಭಾರಿ ಉತ್ತಮ ಮಳೆಯಾಗಿದೆ. ರೈತರು ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದು ಸರ್ಕಾರ ಭ್ರಮೆಯಲ್ಲಿದೆ. ತಮ್ಮ ಅನುಕೂಲವಾದ ವಿಷಯಗಳನ್ನು ಮಾತ್ರ ಸದನದಲ್ಲಿ ಚರ್ಚೆ ಮಾಡುತ್ತಾ ಕಾಲಹರಣ ಮಾಡುವ ಮೂಲಕ ರೈತರಿಗೆ ದ್ರೋಹ ಎಸಗುತ್ತಿದ್ದಾರೆ ಎಂದು ರೈತಸಂಘ ಆರೋಪಿಸಿದರು.

ಅಲ್ಲದೇ ಇನ್ನುಳಿದ ದಿನಗಳಲ್ಲಾದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು. ಅಲ್ಲದೇ ನೆನಗುದಿಗೆ ಬಿದ್ದಿರುವ ಮೇಕೆದಾಟು ಯೋಜನೆ ಬಗ್ಗೆ ಜನಪ್ರತಿನಿಧಿಗಳು ಒಮ್ಮತದ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+