ನಂಜನಗೂಡಿನ ರೈತನ ಮಗ ಮಿಸ್ಟರ್ ಏಷ್ಯಾ ಅಡ್ವೆಂಚರ್ 2020
ಮೈಸೂರು, ಫೆಬ್ರವರಿ 12: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ರೈತರ ಮಗನಾದ ನಾಗೇಶ್ ಡಿ.ಸಿ. ಅವರು ಮಂಜರಿ ನೇಪಾಳ್ ಪ್ರೈವೇಟ್ ಲಿಮಿಟೆಡ್ ಆಯೋಜಿಸಿದ್ದ ಮಿಸ್ಟರ್ ಏಷ್ಯಾ 2020ರಲ್ಲಿ ಮಿಸ್ಟರ್ ಏಷ್ಯಾ ಅಡ್ವೆಂಚರ್ 2020, ಮುರ್ ಏಷ್ಯಾ ಕಲ್ಚರ್ 2020 ಮತ್ತು ಮಿಸ್ಟರ್ ಏಷ್ಯಾ ಸೌತ್ ಇಂಡಿಯಾದಲ್ಲಿ ವಿಜೇತರಾಗಿದ್ದಾರೆ.
ಈ ಸ್ಪರ್ಧೆಯು ಜನವರಿ 31ರಿಂದ ಫೆಬ್ರವರಿ 7ರವರೆಗೆ ಹೋಟೆಲ್ ಸೆವೆನ್ ಸ್ಟಾರ್ ಚಿಟವಾನ್ ನಲ್ಲಿ ನಡೆದಿತ್ತು. ನಾಗೇಶ್ ಅವರು ದೇವನೂರು ಗ್ರಾಮದ ರೈತ ಚಿನ್ನಬುದ್ಧಿ ಮತ್ತು ರೇಣುಕ ಅವರ ಮಗ.

ಸ್ಪರ್ಧೆಗಳಲ್ಲಿ ವಿಜೇತರಾದ ಕುರಿತು ಮಾತನಾಡಿದ ನಾಗೇಶ್ ಡಿ.ಸಿ., "ಈ ಸ್ಪರ್ಧೆಯಲ್ಲಿ ನಾನು ನಮ್ಮ ದೇಶದ ರೈತರ ವೇಷ ಭೂಷಣವನ್ನು ಧರಿಸಿ ಪ್ರತಿನಿಧಿಸಿದ್ದು ತುಂಬ ಸಂತೋಷ ತಂದಿದೆ. ನಾನು ಕೂಡ ರೈತನ ಮಗನಾದ ಕಾರಣ ಇನ್ನು ಮುಂದೆಯೂ ಈ ಒಂದು ಪರಿಕಲ್ಪನೆಯನ್ನು ಫ್ಯಾಷನ್ ಕ್ಷೇತ್ರಕ್ಕೆ ತರಲು ಪ್ರಯತ್ನಿಸುತ್ತೇನೆ" ಎಂದರು.












Click it and Unblock the Notifications