ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಸ್ಥಾನಮಾನ ಕೊಟ್ಟ ಮಂಡ್ಯ ಜನತೆಗೆ ನಾನು ಋಣಿ- ಎಸ್‌.ಎಂ.ಕೃಷ್ಣ

By ಮಂಡ್ಯ, ಪ್ರತಿನಿಧಿ
|
Google Oneindia Kannada News

ಮಂಡ್ಯ, ಡಿಸೆಂಬರ್‌ 19 : ದಕ್ಷಿಣ ಗಾಂಧಿ ಎಂದೇ ಹೆಸರುವಾಸಿಯಾಗಿದ್ದ ಕೆ.ಕಾಮರಾಜ್‌ ಅವರು ಅತ್ಯಂತ ಸರಳವ್ಯಕ್ತಿಯಾಗಿದ್ದರು, ಒಂದು ಸಿದ್ಧಾಂತವನ್ನು ನಂಬಿದ್ದ ಮಹಾವ್ಯಕ್ತಿಯಾಗಿ ಚಳವಳಿಗಾರರಾಗಿ ಹೊರಹೊಮ್ಮಿದ್ದರು ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೇಳಿದರು.

ನಗರದ ಕರ್ನಾಟಕ ಸಂಘದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಜಗದೀಶ್‌ ಕೊಪ್ಪ ಅವರು ಬರೆದಿರುವ 'ದಕ್ಷಿಣದ ಗಾಂಧಿ ಕೆ.ಕಾಮರಾಜ್‌' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು , ಕೆ.ವಿ.ಶಂಕರಗೌಡರು ಹಾಗೂ ನಾನು ಎದುರಾಳಿಯಾಗಿದ್ದೆವು. ಆದರೆ ಎಂದಿಗೂ ನಾವು ಲಘುವಾಗಿ ಮಾತನಾಡಲಿಲ್ಲ. ಮಂಡ್ಯ ಜಿಲ್ಲೆಗೆ ಅಪಾರ ಕೆಲಸವನ್ನು ಮಾಡಿದ್ದಾರೆ. ಈಗಲೂ ಮಂಡ್ಯದ ಜನರನ್ನು ನೆನೆಸಿಕೊಳ್ಳುತ್ತೇನೆ. ನನಗೆ ರಾಜಕೀಯ ಸ್ಥಾನಮಾನಗಳನ್ನು ಕೊಟ್ಟ ಜನತೆಗೆ ನಾನು ಋಣಿಯಾಗಿರುವೆ ಎಂದು ತಿಳಿಸಿದರು.

ಕಾವೇರಿ ನೀರು ಪೂರೈಸುವ ಮದ್ದೂರು ಬ್ರ್ಯಾಂಚ್ ಕಾಲುವೆ ಆಧುನೀಕರಣ:ಸಿಎಂಕಾವೇರಿ ನೀರು ಪೂರೈಸುವ ಮದ್ದೂರು ಬ್ರ್ಯಾಂಚ್ ಕಾಲುವೆ ಆಧುನೀಕರಣ:ಸಿಎಂ

ಜಗದೀಶ್‌ ಕೊಪ್ಪ ಅವರು ಕೃತಿಗಳನ್ನು ಬರೆದು ಜನಮನ್ನಣೆಗಳಿಸಿದ್ದಾರೆ, ಅದೇ ರೀತಿ ಗಾಂಧಿ ಕೆ.ಕಾಮರಾಜ್‌ ಅವರ ಬಗ್ಗೆಯೂ ಬರೆದಿರುವ ಕೃತಿಯು ಹೆಸರು ಮಾಡಲಿ. ಪ್ರಧಾನ ಮಂತ್ರಿ ಅವರನ್ನು ಸೃಷ್ಟಿ ಮಾಡಿದ ವ್ಯಕ್ತಿ ಕಾಮರಾಜ್‌ ಅವರು, ಏನೆಲ್ಲಾ ಆಗಬಹುದಿತ್ತು ಎಂಬುದಕ್ಕೆ ಕಾಮರಾಜ್‌ ಅವರು ನಿದರ್ಶನವಾಗಿ ನಿಲ್ಲುತ್ತಾರೆ. ಅದ್ಯಾವುದಕ್ಕೂ ಆಸೆ ಪಡೆದ ವ್ಯಕ್ತಿಯಾಗಿ ಸರಳವಾಗಿಯೇ ಬದುಕು ನಡೆಸಿದ ಧುರಿಣೀರು ಎಂದು ಸ್ಮರಿಸಿದರು.

S.M Krishna Inaugurated Dakshina Gandhi K. Kamaraj Book

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಚಿತ್ರ ಕಲಾ ಪರಿಷತ್ತು ಅಧ್ಯಕ್ಷ ಡಾ.ಬಿ.ಎಲ್‌.ಶಂಕರ್‌ ಮಾತನಾಡಿ, ಭಾರತದ ಸಂವಿಧಾನದ ಅಡಿಯಲ್ಲಿ ಇರುವ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ತು ಸೇರಿದಂತೆ ಒಟ್ಟು 4 ಸಭೆಗಳಲ್ಲಿ ಎಸ್‌.ಎಂ.ಕೃಷ್ಣರವರು ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ 60 ವರ್ಷಗಳ ಕಾಲ ಸುಧೀರ್ಘ ರಾಜಕಾರಣವನ್ನು ಮಾಡಿದ ಸಜ್ಜನ ರಾಜಕಾರಣಿ ಎಸ್.ಎಂ.ಕೃಷ್ಣರವರು ಎಂದು ಶ್ಲಾಘಿಸಿದರು.

ಇತ್ತಿಚಿನ ಕಾಲದಲ್ಲಿ ವಿದ್ಯಾವಂತರು ಹಾಗೂ ವಿಚಾರಗಳ ಅರಿವಿರುವವರು ರಾಜಕಾರಣದಲ್ಲಿ ಇರಲು ಸಾಧ್ಯವಿಲ್ಲ ಹಾಗೇಯೇ, ಒಬ್ಬ ರಾಜಕಾರಣಿಗೆ ಒಂದು ಕುಟುಂಬದ ಹಿನ್ನಲೆ ಇರಬೇಕು. ಜಾತಿಯ ಬಲವಿರಬೇಕು. ಹಣ ಇರಬೇಕು ಎಂಬ ಮಾತಿದೆ. ಆದರೆ ಇದು ಯಾವುದು ಇಲ್ಲದೆ ಯಶಸ್ವಿ ರಾಜಕಾರಣ ಮಾಡಲು ಸಾಧ್ಯ ಎಂಬುದನ್ನು ಕೆ.ಕಾಮರಾಜ್‌ ರವರು ತೊರಿಸಿ ಕೊಟ್ಟಿದ್ದರು ಎಂದು ಹೇಳಿದರು.

ಕೆ.ಕಾಮರಾಜು ರವರು ಓದಿದ್ದು ಕೇವಲ 9ನೇ ತರಗತಿ ಆದರೆ, ಚಿಕ್ಕವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಚಳವಳಿಗೆ ಆಕರ್ಶಕರಾದ ಅವರು, ಚಿಕ್ಕ ವಯಸ್ಸಿನಲ್ಲಿಯೇ ಹೋರಾಟದ ಮನೋಭಾವ ಬೆಳೆಸಿಕೊಂಡಿದ್ದರು. ಅವರು ಮೊದಲ ಭಾರಿಗೆ ದಲಿತ ವಿರೋಧಿ ನೀತಿಯನ್ನು ತಿರವಂಕ್ಕೂರಿನ ರಾಜರ ವಿರುದ್ದ ಒಂದು ಸತ್ಯಾಗ್ರಹ ಕೈಗೊಂಡರು. ಈ ಘಟನೆ ಅವರನ್ನು ಮುಖ್ಯವಾಣಿಗೆ ತರಲು ಸಾಧ್ಯವಾಯಿತು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ , ವಿಧಾನಪರಿಷತ್ತಿನ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಪುಸ್ತಕದ ಲೇಖಕ ಡಾ.ಎನ್‌.ಜಗದೀಶ್‌ ಕೊಪ್ಪ ಉಪಸ್ಥಿತರಿದ್ದರು.

English summary
EX CM S.M Krishna inaugurated Jagadish Koppa's Dakshina Gandhi K. Kamaraj Book.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X