ರೈತರಿಂದ ರೈತರಿಗಾಗಿ ರೈತರಿಗೋಸ್ಕರ 'ರಾ ಗ್ರಾನ್ಯುಲ್ಸ್'
ಶಿವಮೊಗ್ಗ, ಜೂನ್ 17: ರೈತರಿಗೆ ಮಾರುಕಟ್ಟೆ ಬೆಲೆ ಸಿಗುವುದಿಲ್ಲ ಎಂಬ ಅಳಲು. ಗ್ರಾಹಕರಿಗೆ ದರ ಏರಿಕೆಯ ಚಿಂತೆ, ವ್ಯಾಪಾರಿಗಳಿಗೆ ಲಾಭದ ಆಸೆ ಇವೆಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದು ಸರ್ಕಾರಕ್ಕೆ ದೊಡ್ಡ ಸವಾಲು.
ರೈತರಿಗೆ ಮಾರುಕಟ್ಟೆಯ ಬೆಲೆಯನ್ನು ನೀಡಿ ಗ್ರಾಹಕರಿಗೆ ತುಂಬಾ ಹೊರೆಯಾಗದಂತೆ ಕೃಷಿ ಉತ್ಪನ್ನಗಳನ್ನು ಒದಗಿಸುವ ಹೊಸದೊಂದು ಸಾಹಸಕ್ಕೆ 'ರಾ ಗ್ರಾನ್ಯುಲ್ಸ್' ಕೈ ಹಾಕಿದೆ.
ರಾಸಾಯನಿಕಗಳನ್ನು ಬಳಸದೆ ಸಹಜ ಪದ್ಧತಿ ಅನುಸರಿಸಿ ನೈಸರ್ಗಿಕವಾಗಿ ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಬಹಳಷ್ಟು ಉತ್ಪನ್ನಗಳನ್ನು ರೈತರಿಂದ ಖರೀದಿಸಲಾಗುತ್ತದೆ. ಇದರ ಜತೆಗೆ ಸೋಪು, ಮಕ್ಕಳಿಗೆ ಬಳಸುವ ಎಣ್ಣೆಯಂತಹ ಉತ್ಪನ್ನಗಳು ಕೂಡ ದೊರೆಯಲಿವೆ.
ಕೊರೊನಾ ಹಾವಳಿ ಶುರುವಾದ ಬಳಿಕ ಜನರು ತಮಗೆ ಗೊತ್ತಿಲ್ಲದಂತೆಯೇ ಸಾವಯವ ಕೃಷಿ ಉತ್ಪನ್ನಗಳತ್ತ ಮುಖ ಮಾಡಿದ್ದಾರೆ. ಬೇಕರಿ ತಿಂಡಿತಿನಿಸುಗಳನ್ನು ಮರೆತೇಬಿಟ್ಟಿದ್ದಾರೆ ಎಂದೇ ಹೇಳಬಹುದು. ನಾಲಿಗೆಗೆ ರುಚಿ ಹೇಗಾದರೂ ಇರಲಿ ಆರೋಗ್ಯ ಚೆನ್ನಾಗಿದ್ದರೆ ಸಾಕಪ್ಪಾ ಎಂದುಕೊಳ್ಳುವ ಹೊತ್ತಿಗೆ ಈ 'ರಾ ಗ್ರಾನ್ಯುಲ್ಸ್' ಶುರು ಮಾಡಿದ್ದಾರೆ.

ಸಾಗರ ತಾಲೂಕಿನ ತಲವಾಟ ಮೂಲದ ಪ್ರಶಾಂತ್ ಕೆ.ಜಿ ಹಾಗೂ ಅದೇ ತಾಲೂಕಿನ ಹಂಸಗಾರು ಮೂಲದ ಕಾರ್ತಿಕ್ ಎಂಬುವವರು 'ರಾ ಗ್ರಾನ್ಯುಲ್ಸ್' ಸಂಸ್ಥೆ ಆರಂಭಿಸಿ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಿದ್ದಾರೆ.
ಕೃಷಿ ಕುಟುಂಬದಿಂದ ಬಂದವರೇ ಆಗಿರುವ ಈ ಇಬ್ಬರು ರೈತರೇ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಿ ಪಡೆದುಕೊಳ್ಳುವ ದರಕ್ಕಿಂತ ಹೆಚ್ಚಿಗೆ ದರಕ್ಕೆ ರೈತರಿಂದಲೇ ನೇರವಾಗಿ ಖರೀದಿ ಮಾಡುತ್ತಿದ್ದಾರೆ.

Recommended Video
ರಾ ಗ್ರಾನ್ಯುಲ್ಸ್‌ನಲ್ಲಿ ಏನೇನು ಲಭ್ಯ: ಬೆಲ್ಲ, ಶುದ್ಧ ಕೊಬ್ಬರಿ ಎಣ್ಣೆ, ಉಪ್ಪಿನ ಕಾಯಿ, ಸಾಬೂನು, ಕೆಂಪು ಅಕ್ಕಿ, ಜೇನು ತುಪ್ಪ ಸೇರಿದಂತೆ ಹಲವು ಉತ್ಪನ್ನಗಳು ಲಭ್ಯವಿದೆ. ಮಾಹಿತಿಗಾಗಿ https://rawgranules.in ಸಂಪರ್ಕಿಸಿ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications