ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳಪೆ ಗುಣಮಟ್ಟದ ಗೊಬ್ಬರ-ಬಿತ್ತನೆ ಬೀಜ ಪ್ರಕರಣ ಸಿಒಡಿ ತನಿಖೆಗೆ: ಬಿ.ಸಿ. ಪಾಟೀಲ್

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಸೆಪ್ಟೆಂಬರ್‌, 12: ಕಳಪೆ ಗುಣಮಟ್ಟದ ಗೊಬ್ಬರ, ಬಿತ್ತನೆ ಮಾರಾಟ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸುವಂತೆ ಶಿಫಾರಸ್ಸು ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಂಡ್ಯದಲ್ಲಿ ತಿಳಿಸಿದರು.

ತಾಲೂಕಿನ ವಿ.ಸಿ. ಫಾರಂ ಕೃಷಿ ಮಹಾವಿದ್ಯಾಲಯದಲ್ಲಿ ಇಂದು ಆಯೋಜಿಸಿದ್ದ ವಿದ್ಯಾರ್ಥಿ ನಿಲಯಗಳ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಮಾತನಾಡಿದ ಅವರು, "ರೈತರ ಮಕ್ಕಳಿಗಷ್ಟೇ ವಿದ್ಯಾರ್ಥಿ ವೇತನ ಕೊಡಲಾಗುವುದು. ಜೊತೆಗೆ ರೈತ ಕಾರ್ಮಿಕರ ಮಕ್ಕಳಿಗೂ ಅದನ್ನು ವಿಸ್ತಾರಗೊಳಿಸಿ ಮುಖ್ಯಮಂತ್ರಿ ಅವರು ಘೋಷಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ 67 ರೈತ ಉದ್ದಿಮೆದಾರರಿಗೆ 19.14 ಕೋಟಿ ರೂಪಾಯಿ ಸಬ್ಸಿಡಿಯನ್ನು ಕೊಟ್ಟಿದ್ದೇವೆ. ರೈತರ ಮಕ್ಕಳಿಗೆ ಮೊದಲ ಬಾರಿಗೆ ಶೇಕಡಾ 40 ರಷ್ಟಿತ್ತು, ಇದೀಗ ಅದನ್ನು ಶೇಕಡಾ 50ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಸುಮಾರು 4,200 ಇದ್ದದ್ದು ಇನ್ನು ಹೆಚ್ಚು ಬಿಎಸ್ಸಿಎಜಿ ಮತ್ತು ಡಿಪ್ಲೊಮಾದಲ್ಲಿ ಸಿಗುತ್ತಿದೆ," ಎಂದರು.

ಎರಡು ಸಿಟಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಾಗಿ ಹತ್ತಾರು ಹಳ್ಳಿಗಳಿಗೆ ತೊಂದರೆ ಸಲ್ಲದು: ಸುಮಲತಾ ಆಕ್ರೋಶಎರಡು ಸಿಟಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಾಗಿ ಹತ್ತಾರು ಹಳ್ಳಿಗಳಿಗೆ ತೊಂದರೆ ಸಲ್ಲದು: ಸುಮಲತಾ ಆಕ್ರೋಶ

ಕಾಂಗ್ರೆಸ್‌ನವರಿಗೆ ಟೀಕೆ ಮಾಡುವುದನ್ನು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲವೈ ಹಳದಿ ಎಂಬಂತೆ ಅವರು ಅದನ್ನೇ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಎನ್‌ಡಿಆರ್‌ಎಫ್‌ ನಿಯಮದಲ್ಲಿ ಇಲ್ಲದಿದ್ದರೂ ಸಹ ಜಾನುವಾರುಗಳಿಗೂ ಪರಿಹಾರ ವಿತರಿಸಿದ್ದೇವೆ. ಆದರೆ ಕಾಂಗ್ರೆಸ್‌ನವರು ಇದನ್ನು ಹಳದಿ ಕಣ್ಣಲ್ಲಿ ನೋಡುತ್ತಿದ್ದಾರೆ. ಅವರು ಟೀಕೆ ಮಾಡುತ್ತಲೇ ಇರಲಿ, ನಾವು ಕೆಲಸ ಮಾಡುತ್ತೇವೆ ಎಂದರು.

 ಎಲ್ಲ ಸರ್ಕಾರ ಇದ್ದಾಗಲೂ ರಾಜಕಾಲುವೆ ಒತ್ತುವರಿ

ಎಲ್ಲ ಸರ್ಕಾರ ಇದ್ದಾಗಲೂ ರಾಜಕಾಲುವೆ ಒತ್ತುವರಿ

ರಾಜಕಾಲುವೆ ಒತ್ತುವರಿಯಿಂದಾಗಿ ಬೆಂಗಳೂರಿನಲ್ಲಿ ಮಳೆ ಅವಾಂತರ ಸೃಷ್ಠಿಸಿದೆ. ರಾಜಕಾಲುವೆ ಒತ್ತುವರಿ ತೆರವು ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. "ಎಲ್ಲ ಸರ್ಕಾರ ಇದ್ದಾಗಲೂ ರಾಜಕಾಲುವೆ ಒತ್ತುವರಿ ಆಗಿದೆ. ನಮ್ಮ ಕಾಲದಲ್ಲಿ, ಅವರ ಕಾಲದಲ್ಲಿ ಎಂಬ ಪ್ರಶ್ನೆ ಇಲ್ಲ." ಹೆಚ್ಚು ಆಡಳಿತ ನಡೆಸಿರುವುದರ ಜೊತೆಗೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲೂ ಆಡಳಿತ ನಡೆಸಿರುವವರು ಕಾಂಗ್ರೆಸ್‌ನವರು. ಅವರ ಕಾಲದಲ್ಲೇ ಹೆಚ್ಚು ಒತ್ತುವರಿ ಆಗಿದೆ. ಅವರೇ ತೆರವು ಮಾಡಬೇಕಿತ್ತು. ಆದರೆ ಅವರು ಮಾಡಲಿಲ್ಲ ಎಂದು ಉತ್ತರಿಸಿದರು.

 ರೈತರಿಗೆ ವಿವಿಧ ವಿಭಾಗಗಳಲ್ಲಿ ಸಬ್ಸಿಡಿ

ರೈತರಿಗೆ ವಿವಿಧ ವಿಭಾಗಗಳಲ್ಲಿ ಸಬ್ಸಿಡಿ

ಬೆಳೆ ವಿಮೆಯಲ್ಲಿ 2,87.43 ಲಕ್ಷ ರೂಪಾಯಿಯನ್ನು 55,571 ಜನ ರೈತರಿಗೆ ಕೊಟ್ಟಿದ್ದೇವೆ. ರೈತರ ಪರವಾಗಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಬೀಜ, ಗೊಬ್ಬರ ಸೇರಿದಂತೆ ರೈತರಿಗೆ ವಿವಿಧ ವಿಭಾಗಗಳಲ್ಲಿ ಸಬ್ಸಿಡಿಯನ್ನು ನೀಡುತ್ತಿದ್ದೇವೆ. ರೈತರು ಶಸಕ್ತರಾಗಬೇಕು. ರೈತ ಈ ದೇಶದ ಬೆನ್ನೆಲುಬು ಎಂಬುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ರೈತರ ಯೋಜನೆಗಳನ್ನು ಘೋಷಣೆ ಮಾಡಿ ನೆರವಾಗುತ್ತಿದೆ ಎಂದರು.

 ಸಾಕಷ್ಟು ರೈತರ ಬೆಳೆಗಳಿಗೆ ಹಾನಿ

ಸಾಕಷ್ಟು ರೈತರ ಬೆಳೆಗಳಿಗೆ ಹಾನಿ

ರಾಜ್ಯದಲ್ಲಿ ಸುರಿದ ಬಾರಿ ಮಳೆಯಿಂದಾಗಿ ಸಾಕಷ್ಟು ರೈತರ ಬೆಳೆಗಳಿಗೆ ಹಾನಿ ಉಂಟಾಗಿದೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದಾರೆ. ಪರಿಹಾರವನ್ನು ನಮೂದಿಸುವಾಗ ಅವರಿಗೆ ಹಣ ಬಿಡುಗಡೆ ಆಗಲಿದೆ. ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ನಿಯಮದ ಪ್ರಕಾರ ಒಂದು ಹೆಕ್ಟೇರ್‌ಗೆ 6,800 ಇದ್ದದ್ದನ್ನ ರಾಜ್ಯದಲ್ಲಿ ಮೊದಲ ಬಾರಿಗೆ 13,600 ರೂಪಾಯಿಗೆ ಏರಿಸಲಾಗಿದೆ. ನೀರಾವರಿಗೆ 25,000ಕ್ಕೆ ಏರಿಸಲಾಗಿದೆ. ತೋಟಗಾರಿಕೆ ಬೆಳೆಗೆ 28,000 ಏರಿಸಿ ಪರಿಹಾರ ನೀಡಲು ಚರ್ಚೆ ಮಾಡಲಾಗುತ್ತಿದೆ. ಪರಿಹಾರಕ್ಕಾಗಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ವಿವರಿಸಿದರು.


ಕೃಷಿ ಯಂತ್ರಗಳೆಡೆ ಆಸಕ್ತಿ ವಹಿಸುತ್ತಿಲ್ಲ. ಈಗಾಗಲೇ ಅರ್ಜಿ ಹಾಕುವುದಕ್ಕೂ ಸಮಯ ಮೀರಿದೆ. ಮುಂದಿನ ದಿನಗಳಲ್ಲಿ ಬದಲಾವಣೆ ತರಲಾಗುವುದು ಎಂದರು.

 ಪ್ರಕರಣವನ್ನು ಸಿಒಡಿಗೆ ವಹಿಸಲು ನಿರ್ಧಾರ

ಪ್ರಕರಣವನ್ನು ಸಿಒಡಿಗೆ ವಹಿಸಲು ನಿರ್ಧಾರ

ರಾಜ್ಯದ ನಾನಾ ಭಾಗಗಳಾದ ಮಂಡ್ಯ, ಮೈಸೂರು, ಗದಗ, ಚಿತ್ರದುರ್ಗದಲ್ಲಿ ಕಳಪೆ ರಸಗೊಬ್ಬರ ಬೆಳಕಿಗೆ ಬಂದಿದೆ. ಅದನ್ನು ಕೃಷಿ ಜಾಗೃತ ದಳದವರು ಪತ್ತೆ ಮಾಡಿದ್ದಾರೆ. ಈ ರೀತಿಯ ಕಳಪೆ ಕಳಪೆ ರಸಗೊಬ್ಬರ ಮಾರಾಟದ ಪ್ರಕರಣವನ್ನು ಸಿಒಡಿಗೆ ವಹಿಸಲು ನಿರ್ಧರಿಸಲಾಗಿದೆ. ಇದು ಅಂತರರಾಜ್ಯದ ಪ್ರಕರಣ ಆಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ನಾನು ಸಚಿವನಾದ ಮೇಲೆ 28.57 ಕೋಟಿ ಬೆಲೆ ಬಾಳುವ ಕಳಪೆ ಗೊಬ್ಬರ, ಬೀಜಗಳನ್ನು ಸೀಜ್ ಮಾಡಿ 354 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾಖಲು ಮಾಡಲಾಗಿದೆ. 248 ಪರವಾನಗಿಗಳನ್ನು ಅಮಾನತು ಮಾಡಲಾಗಿದೆ. 35 ಪರವಾನಗಿಯನ್ನು ರದ್ದು ಮಾಡಲಾಗಿದೆ. ಪ್ರಕರಣದ 34 ಜನರಿಗೆ ನ್ಯಾಯಾಲಯವು 15.20 ಲಕ್ಷ ದಂಡ ವಿಧಿಸಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಿ.ಎಸ್. ಪುಟ್ಟರಾಜು, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ರಾಜೇಂದ್ರ ಪ್ರಸಾದ್, ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎಸ್.ಎ.ಪ್ರಕಾಶ್, ಡಾ.ಡಿ. ರಘುಪತಿ ಉಪಸ್ಥಿತರಿದ್ದರು.

English summary
Agriculture Minister B.C.Patil said in Mandya recommended COD investigate case of sale poor quality fertilizer and seeds. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X