ಈ ಬಾರಿ ಸಂಕ್ರಾಂತಿ ರೈತರಿಗೆ ಐಶ್ವರ್ಯವನ್ನು ನೀಡಲಿ : ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವಿಟ್ಟರ್ ಮೂಲಕ ದೇಶದ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ನವದೆಹಲಿ, ಜನವರಿ. 14 : ದೇಶದಾದ್ಯಂತ ಮಕರ ಸಂಕ್ರಾಂತಿ, ಪೊಂಗಲ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಟ್ವಿಟರ್ ನಲ್ಲಿ ಶುಭಾಶಯಗಳನ್ನು ಕೋರಿರುವ ಪ್ರಧಾನಿ ಮೋದಿಯವರು, ಇಂದು ಭಾರತದಾದ್ಯಂತ ಜನರು ವಿವಿಧ ರೀತಿಯ ಹಬ್ಬಗಳನ್ನು ಆಚರಿಸುತ್ತಿದ್ದು, ಹಬ್ಬದ ಸಂಭ್ರದಲ್ಲಿರುವ ಜನತೆಗೆ ಈ ಮೂಲಕ ಶುಭಾಶಯಗಳನ್ನು ಕೋರುತ್ತಿದ್ದೇನೆಂದು ಹೇಳಿದ್ದಾರೆ.
ಭಾರತದಲ್ಲಿರುವ ವೈವಿಧ್ಯತೆಯೇ ದೊಡ್ಡ ಶಕ್ತಿಯಾಗಿದೆ. ಈ ಬಾರಿಯ ಹಬ್ಬ ಶ್ರಮದಾಯಕ ರೈತರಿಗೆ ಸಂತೋಷ ಹಾಗೂ ಐಶ್ವರ್ಯವನ್ನು ನೀಡಲಿ ಎಂದು ಶುಭಾಶಯ ಕೋರಿದ್ದಾರೆ.

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು, ಈ ಬಾರಿಯ ಹಬ್ಬ ನಿಮ್ಮೆಲ್ಲರಿಗೂ ಸಂತೋಷ ಹಾಗೂ ಐಶ್ವರ್ಯವನ್ನು ನೀಡಲಿ ಎಂದು ತಿಳಿಸಿದ್ದಾರೆ.
May these festivals bring abundance of happiness and prosperity in the lives of our hardworking farmers.
— Narendra Modi (@narendramodi) January 14, 2017
ತಮಿಳುನಾಡಿನ ಸ್ನೇಹಿತರು ಪೊಂಗಲ್ ಹಬ್ಬವನ್ನು ಆಚರಿಸುತ್ತಿದ್ದು, ಈ ಮೂಲಕ ಪೊಂಗಲ್ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇನೆಂದು ಹೇಳಿದ್ದಾರೆ.
These & many other festivals celebrated across India add great colour & happiness in our lives. This diversity is India's greatest strength.
— Narendra Modi (@narendramodi) January 14, 2017
ಅಸ್ಸಾಂ ರಾಜ್ಯದಲ್ಲಿ 'ಮಾಘ ಬಿಹು' ಹಬ್ಬವನ್ನು ಆಚರಿಸಲಾಗುತ್ತಿದ್ದು, ಅಸ್ಸಾಂ ಜನತೆಗೆ ಶುಭಾಶಯಗಳನ್ನು ಕೋರುತ್ತಿದ್ದೇನೆ.
ಈ ಎಲ್ಲಾ ಹಬ್ಬಗಳಲ್ಲದೆ, ಭಾರತದ ಇನ್ನಿತರೆ ಪ್ರದೇಶಗಳಲ್ಲೂ ವಿವಿಧ ಹಬ್ಬಗಳನ್ನು ಆಚರಿಸಲಾಗಿತ್ತಿದ್ದು, ಈ ಬಾರಿಯ ಹಬ್ಬ ಎಲ್ಲರ ಜೀವನದಲ್ಲೂ ಬಣ್ಣ ಹಾಗೂ ಸಂತೋಷವನ್ನು ನೀಡಲಿ ಎಂದು ಹಾರೈಸಿದ್ದಾರೆ.
Today people across India are celebrating various festivals. My greetings to everyone celebrating these auspicious festivals!
— Narendra Modi (@narendramodi) January 14, 2017











Click it and Unblock the Notifications