ಕೀಟನಾಶಕ ಸೇವಿಸಿ ಮಂಡ್ಯದಲ್ಲಿ ವೃದ್ಧ ರೈತ ದಂಪತಿ ಆತ್ಮಹತ್ಯೆ
ಮಂಡ್ಯ, ನವೆಂಬರ್ 20: ಸಾಲಬಾಧೆ ತಾಳಲಾರದೆ ಮಂಡ್ಯದಲ್ಲಿ ವೃದ್ಧ ದಂಪತಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೆಆರ್ ಪೇಟೆ ತಾಲೂಕಿನ ಬೊಮ್ಮೇನಹಳ್ಳಿ ನಿವಾಸಿ ಬೋರಲಿಂಗೇಗೌಡ ಹಾಗೂ ಲಕ್ಷ್ಮಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಡರಾತ್ರಿ ಜಮೀನಿನ ಬಳಿ ತೆರಳಿ ಅಲ್ಲಿಯೇ ವಿಷಪೂರಿತ ಕ್ರಿಮಿನಾಶಕ ಸೇವಿಸಿ ದಂಪತಿ ಸಾವಿಗೀಡಾಗಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಆದರೆ ಸಾಲಬಾಧೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಕೆಆರ್ ಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಿಪಿಐ ಎಚ್‌ಬಿ ವೆಂಕಟೇಶಯ್ಯ, ಪಿಎಸ್‌ಐ ಆನಂದಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications