ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಹೊಂಡ , ಕೆರೆ ಕಟ್ಟೆಗಳು ಭರ್ತಿ, ಅಂತರ್ಜಲ ಹೆಚ್ಚಿಸಲು ಸಹಕಾರಿಯಾದ‌ ನರೇಗಾ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು ಸೆಪ್ಟೆಂಬರ್ 11: ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಿರ್ಮಿಸಿದ ಕೃಷಿ ಹೊಂಡ ಮತ್ತು ಕೆರೆ ಕಟ್ಟೆಗಳು ಭರ್ತಿಯಾಗಿದ್ದು, ಜಿಲ್ಲೆಯಲ್ಲಿನ ಅಂತರ್ಜಲ ಮಟ್ಟ ಹೆಚ್ಚಾಗಲು ಸಹಕಾರಿಯಾಗಿವೆ.

ರೈತರ ಕೃಷಿ ಚಟುವಟಿಕೆಗೆ ಮತ್ತು ನೀರಿನ ಅಭಾವ ನೀಗಿಸಲು ಮಳೆಯ ನೀರನ್ನು ಸಂಗ್ರಹಿಸಿ ಅದನ್ನುವ್ಯವಸಾಯಕ್ಕೆ ಬಳಸಿಕೊಳ್ಳುವುದು ಇದರ ಉದ್ದೇಶವಾಗಿದೆ. ರಾಯಚೂರು ತಾಲೂಕಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಯೋಜನೆಯಡಿ ಅಂತರ್ಜಲ ಅಭಿವೃದ್ಧಿ ಮಾಡುವುದಕ್ಕೆ ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆಯ ಕಾಮಗಾರಿಗಳನ್ನು ಕೈಕೊಳ್ಳಲಾಗಿದೆ.

ಸೂಳೆಕೆರೆ ನಿರ್ಮಾಣಕ್ಕೆ ವೇಶ್ಯೆಯರು ಇಟ್ಟಿದ್ದ ಬೇಡಿಕೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿಸೂಳೆಕೆರೆ ನಿರ್ಮಾಣಕ್ಕೆ ವೇಶ್ಯೆಯರು ಇಟ್ಟಿದ್ದ ಬೇಡಿಕೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ರೈತರು ತಮ್ಮ ಹೊಲದಲ್ಲಿ ಬದು ನಿರ್ಮಾಣ ಮಾಡಿ, ತೆಗೆದ ಗುಂಡಿಗಳಲ್ಲಿ ಮಳೆ ಬಂದಾಗ ನೀರು ಶೇಖರಣೆಯಾಗಿ ಅಂತರ್ಜಲ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಈ ಯೋಜನೆಯನ್ನು ಸರಕಾರ ಸಮರ್ಪಕವಾಗಿ ಅನುಷ್ಠಾನ ಮಾಡುವುದರಿಂದ ರೈತರಿಗೆ ಸಾಕಷ್ಟು ಪ್ರಯೋಜನ ಲಭಿಸಲಿದೆ.

ಒಟ್ಟು 13 ಸಾವಿರ ಸಹಾಯಧನ

ಒಟ್ಟು 13 ಸಾವಿರ ಸಹಾಯಧನ

ತಮ್ಮ ಹೊಲಗಳಲ್ಲಿ ಕಂದಕ ಬದು ನಿರ್ಮಿಸಲು ಅರ್ಥಿಕ ತೊಂದರೆ ಅನುಭವಿಸುತ್ತಿರುವ ರೈತರು , ನರೇಗಾ ಯೋಜನೆಯಿಂದ ಅನುದಾನ ಕೂಡ ಸಿಗಲಿದೆ. ಒಂದು ಎಕರೆಯಲ್ಲಿ 13 ಕಂದಕ ಬದುಗಳನ್ನು ತೆಗೆಯಲು ರೂ 10,000 ಸಾವಿರ ರೂ ಕೂಲಿ ಹಣ ಹಾಗೂ ರೂ 3,000 ಸಾವಿರ ಸಾಮಾಗ್ರಿ ವೆಚ್ಚ ನೀಡುವ ಮೂಲಕ ಉದ್ಯೋಗ ಚೀಟಿದಾರರು ರೈತರ ಜಮೀನಿನನಲ್ಲಿ ಉದ್ಯೋಗಗಳನ್ನು ಕಲ್ಪಿಸಲಾಗುತ್ತದೆ. ಇನ್ನು ಒಂದು ಗುಂಡಿ ನಿರ್ಮಿಸಲು 16.5 ಅಡಿ ಉದ್ದ, 3 ಅಡಿ ಆಗಲ, 2 ಅಡಿ ಎತ್ತರದ ಗುಂಡಿ ತೆಗೆಯಬೇಕು. ಒಂದು ಎಕೆರೆಯಲ್ಲಿ 13 ಗುಂಡಿಗಳನ್ನು ನಿರ್ಮಿಸಬಹುದಾಗಿದೆ.

ನಬಾರ್ಡ್ ನೇಮಕಾತಿ 2022: 177 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನನಬಾರ್ಡ್ ನೇಮಕಾತಿ 2022: 177 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

 ಅಂತರ್ಜಲ ‌ಮಟ್ಟ ಏರಿಕೆ

ಅಂತರ್ಜಲ ‌ಮಟ್ಟ ಏರಿಕೆ

ಮಣ್ಣಿನ ಸವಕಳಿ ನಿಯಂತ್ರಣ, ತೇವಾಂಶ ಹೆಚ್ಚಾಗುವುದರಿಂದ ಶೇ.10 ರಿಂದ 15 ರಷ್ಟು ಬೆಳೆ ಇಳುವರಿ, ಒಂದು ಕಂದಕ ಬದುವಿನಲ್ಲಿ ಸುಮಾರು 3 ಸಾವಿರ ಲೀಟರ್‌ನಂತೆ‌ ಒಟ್ಟು 39,000 ಲೀಟರ್ ಭೂಮಿಯಲ್ಲಿ ಇಂಗುವ ಮೂಲಕ ಅಂತರ್ಜಲ ‌ಮಟ್ಟ ಏರಿಕೆಯಾಗುತ್ತದೆ. ಮುಂದುವರೆದು ಬದು ಬೇಸಾಯಕ್ಕಾಗಿ ರೈತರು ಬದುಗಳ ಮೇಲೆ ತೋಟಗಾರಿಕೆ, ಅರಣ್ಯ ಸಸಿಗಳನ್ನು ನಾಟಿ ಮಾಡಿದಲ್ಲಿ ತಮ್ಮ ಅದಾಯ ಹೆಚ್ಚಿಸಿಕೊಳ್ಳಬಹುದು.

ರೈತರ ಕೃಷಿ ಚಟುವಟಿಕೆಗೂ ನೀರು ಬಳಕೆ

ರೈತರ ಕೃಷಿ ಚಟುವಟಿಕೆಗೂ ನೀರು ಬಳಕೆ

ಈಗಾಗಲೆ ಮಳೆಯಿಂದ ಕೃಷಿಹೊಂಡ, ಗೋಕಟ್ಟೆ, ಹಳ್ಳ, ಕಾಲುವೆ, ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಇದರಿಂದಾಗಿ ದನಕರುಗಳಿಗೆ ನೀರಿನ ದಾಹ ನೀಗಿಸುತ್ತದೆ. ಇನ್ನು ಈ ನರೇಗ ಯೋಜನೆಯಡಿ ನಿರ್ಮಿತಗೊಳ್ಳುವ 10 ಮೀಟರ್ ಉದ್ದ, 10 ಮೀಟರ್ ಆಗಲ, 3 ಮೀಟರ್ ಆಳದ ಕೃಷಿಹೊಂಡದಲ್ಲಿ ಶೇಖರಣೆಯಾದ‌ ನೀರಿನಿಂದ ರೈತರು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ.

ಅರ್ಥಿಕವಾಗಿ ಸಹಕಾರಿ

ಅರ್ಥಿಕವಾಗಿ ಸಹಕಾರಿ

ನರೇಗಾ ಯೋಜನೆಯ ಅಭಿಯಾನದಡಿ, ನೀರು ಮತ್ತು ಮಣ್ಣು ಸಂರಕ್ಷಣೆ ಕಾಮಗಾರಿಗಳನ್ನು ಅನುಷ್ಠಾನ ಮಾಡುವುದರೊಂದಿಗೆ ಗ್ರಾಮದ ಕೂಲಿಕಾರರಿಗೆ ಕೆಲಸ ಒದಗಿಸಿ, ಕುಟುಂಬ ನಿರ್ವಹಣೆ ಅರ್ಥಿಕ ಸಹಕಾರಿಯಾಗಲಿದೆ. ಜೊತೆಗೆ ಮಳೆಯ ನೀರು ವ್ಯರ್ಥವಾಗದಂತೆ ತಡೆಯುವುದರಿಂದ ಅಂತರ್ಜಲ ಪ್ರಮಾಣ ಕೂಡ ಹೆಚ್ಚಾಗಲಿದೆ ಎಂದು ತಾಲ್ಲೂಕು ನರೇಗಾ ಸಂಯೋಜಕರು ಧನಂಜಯ ತಿಳಿಸಿದ್ದಾರೆ.

English summary
The agricultural pits and lakes constructed under the The National Rural Employment Guarantee Act (NREGA) act have been filled and have helped to raise the groundwater level in the Raichur district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X