ಚಾನಲ್ ರಾಯಭಾರಿ ಬಚ್ಚನ್ ಗೆ 6 ಕೋಟಿ ಕೊಟ್ಟಿದ್ದೇಕೆ?
ನವದೆಹಲಿ. ಜು. 18: ರೈತರಿಗೋಸ್ಕರವೇ ಸೀಮಿತ ಎಂಬ ಘೋಷಣೆಯೊಂದಿಗೆ ಅಸ್ತಿತ್ವಕ್ಕೆ ಬಂದ ದೂರದರ್ಶನದ ಕಿಸಾನ್ ಚಾನಲ್‌ಗೆ ರಾಯಭಾರಿಯಾಗಲು ನಟ ಅಮಿತಾಭ್ ಬಚ್ಚನ್ 6.31 ಕೋಟಿ ರೂ. ಸಂಭಾವನೆ ನೀಡಿಕೆ ವಿಪಕ್ಷಗಳ ಟೀಕೆಗೆ ಕಾರಣವಾಗಿದೆ.
ಒಂದೆಡೆ ಸಾಲಗಾರರ ಕಿರುಕುಳ ತಾಳಲಾರದೇ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂಥ ಸಂದರ್ಭ ಸರ್ಕಾರ ರಾಯಭಾರಿ ನೇಮಕ ಮಾಡಿಕೊಂಡು ಇಷ್ಟೊಂದು ಪ್ರಮಾಣದ ಹಣ ನೀಡಬೇಕಿತ್ತೆ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಇದಕ್ಕೆ ಇತರ ಪಕ್ಷಗಳು ಧ್ವನಿ ಗೂಡಿಸಿವೆ.[ರೈತ ವಾಹಿನಿ 'ಡಿಡಿ ಕಿಸಾನ್' ವಿಶೇಷಗಳು]

ಮೊದಲು ನಟ ಅಜಯ್ ದೇವಗನ್, ಕಾಜೋಲ್ ಹಾಗೂ ನಟ ಸಲ್ಮಾನ್ ಖಾನ್ ಅವರನ್ನು ರಾಯಭಾರಿಯಾಗುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಕೊನೆಗೆ ಅಮಿತಾಬ್ ಬಚ್ಚನ್ ಅವರ ಜತೆ ಒಪ್ಪಂದ ಮಾಡಿಕೊಂಡಿತು.[ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ನಾಲ್ಕು ಘಟವಾಣಿಯರು]
ಸುಷ್ಮಾ ಸ್ವರಾಜ್-ಲಲಿತ್ ಮೋದಿ ವೀಸಾನ ವಿವಾದ, ಇರಾನಿ ನಕಲಿ ಪ್ರಮಾಣ ಪತ್ರ ವಿವಾದದ ಜತೆಗೆ ಕೇಂದ್ರ ಸರ್ಕಾರ ಮತ್ತೊಂದು ವಿವಾದಕ್ಕೆ ಸಿಲುಕಿದಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.












Click it and Unblock the Notifications