ಮೈಸೂರು: ಜಮೀನು ವಿವಾದಕ್ಕೆ ಮನನೊಂದು ರೈತ ಆತ್ಮಹತ್ಯೆ

ಮೈಸೂರು, ನವೆಂಬರ್, 02 : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಕಿರುಕುಳ, ಬೆದರಿಕೆಗೆ ಹೆದರಿ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಜಯಪುರ ಹೋಬಳಿಯ ದೊಡ್ಡಹುಂಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಹೆಚ್.ಡಿ.ಕೋಟೆ ತಾಲೂಕಿನ ಜಯಪುರ ಹೋಬಳಿಯ ದೊಡ್ಡಹುಂಡಿ ಗ್ರಾಮದ ನಿವಾಸಿ ಶ್ರೀಕಂಠೇಗೌಡ (70) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈ ಸಂಬಂಧ ಹೆಚ್.ಡಿ.ಕೋಟೆ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.[ರೈತರ ಸಮಸ್ಯೆ ನಿವಾರಣೆಗೊಂದು 'ಯೂ ಫಾರ್ಮ್']

Mysuru HD Kote farmer committed suicide on his land on Monday

ಘಟನೆ ವಿವರ :

ದೊಡ್ಡಹುಂಡಿ ಗ್ರಾಮದ ನಿವಾಸಿಯಾದ ಮೃತ ಶ್ರೀಕಂಠೇಗೌಡ ಹೆಚ್.ಡಿ.ಕೋಟೆ ತಾಲೂಕಿನ ಬೆಟ್ಟದಹುಂಡಿ ಗ್ರಾಮದ ತನ್ನ ಜಮೀನಿಗೆ ಹೋಗಲು ದಾರಿಯ ತೊಂದರೆಯಿದ್ದ ಕಾರಣ ಮರಿಸ್ವಾಮಿಗೌಡ ಎಂಬುವವರ 1.34 ಎಕರೆ ಜಮೀನನ್ನು ಖರೀದಿಸಿದ್ದರು.

ಶ್ರೀಕಂಠೇಗೌಡ ಜಮೀನನ್ನು ತನ್ನ ಜೊತೆ ಬಾಂಧವ್ಯ ಹೊಂದಿದ್ದ ಡಿ. ಸಾಲುಂಡಿ ಗ್ರಾಮದ ಪೊಲೀಸ್ ಪೇದೆ ಚಿಕ್ಕಣ್ಣ ಎಂಬುವರಿಗೆ 2 ವರ್ಷಗಳ ಹಿಂದೆ 2ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿದ್ದನು.[ರಾಜ್ಯದಲ್ಲಿ ಪ್ರಸಕ್ತ ವರ್ಷಎಲ್ಲೆಲ್ಲಿ,ಎಷ್ಟೆಷ್ಟು ರೈತರು ಆತ್ಮಹತ್ಯೆಗೆ ಶರಣು?]

ಆದರೆ ಭೂಮಿಯ ಮೂಲ ವಾರಸುದಾರ ಮರಿಸ್ವಾಮಿಗೌಡನ ಪುತ್ರಿಯರು. ಅವರು ಜಮೀನಿನ ವಿಚಾರವಾಗಿ ನ್ಯಾಯಾಲಯದ ಮೊರೆ ಹೋದ ಕಾರಣ ಜಮೀನು ವ್ಯವಹಾರ ಸಾಧ್ಯವಾಗಲಿಲ್ಲ. ಆದ ಕಾರಣ ಶ್ರೀಕಂಠೇಗೌಡ ಪೊಲೀಸ್ ಪೇದೆ ಚಿಕ್ಕಣ್ಣನವರಿಗೆ ಜಮೀನು ನೀಡಲು ಸಾಧ್ಯವಾಗಲಿಲ್ಲ.

ಆಗ ಚಿಕ್ಕಣ್ಣ ತನಗೆ ಜಮೀನು ನೀಡಬೇಕೆಂದು ಶ್ರೀಕಠೇಗೌಡನಿಗೆ ಬೆದರಿಕೆ ಹಾಕಿದ್ದನು. ಇದರಿಂದ ನೊಂದ ಶ್ರೀಕಂಠೇಗೌಡ ಬೆಟ್ಟದಹುಂಡಿ ಗ್ರಾಮದಲ್ಲಿರುವ ಜಮೀನು ನೋಡಿಕೊಂಡು ಬರುವುದಾಗಿ ಹೇಳಿ ಹೋದವರು ಅಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+